AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತೀಶ್ ಜಾರಕಿಹೊಳಿ ಹೆಸರಲ್ಲಿ ಅಶ್ಲೀಲ ವಿಡಿಯೋ ಅಪ್ಲೋಡ್! ಕಿಡಗೇಡಿಗಳ ವಿರುದ್ಧ ಬೆಂಬಲಿಗರ ಆಕ್ರೋಶ

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಹಾಳು ಮಾಡಲಾಗುತ್ತಿದೆ. ಅವರ ಹೆಸರಿಗೆ ಕಳಂತ ತರಲಾಗುತ್ತಿದೆ. ಕೂಡಲೇ ಕಿಡಗೇಡಿಗಳನ್ನ ಬಂಧಿಸಬೇಕೆಂದು ಸತೀಶ್ ಜಾರಕಿಹೊಳಿ ಬೆಂಬಲಿಗ ವಿಜಯ್ ತಳವಾರ ದೂರು ನೀಡಿದ್ದಾರೆ.

ಸತೀಶ್ ಜಾರಕಿಹೊಳಿ ಹೆಸರಲ್ಲಿ ಅಶ್ಲೀಲ ವಿಡಿಯೋ ಅಪ್ಲೋಡ್! ಕಿಡಗೇಡಿಗಳ ವಿರುದ್ಧ ಬೆಂಬಲಿಗರ ಆಕ್ರೋಶ
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
TV9 Web
| Updated By: sandhya thejappa|

Updated on:Apr 20, 2022 | 1:01 PM

Share

ಬೆಳಗಾವಿ: ರಮೇಶ್ ಜಾರಕಿಹೊಳಿ (Ramesh Jarkiholi) ಸಿಡಿ ಪ್ರಕರಣ ತಣ್ಣಗಾಗುವ ಮೊದಲೇ ಜಾರಕಿಹೊಳಿ ಕುಟುಂಬದ ಮತ್ತೊಬ್ಬ ವ್ಯಕ್ತಿಯ ಹೆಸರು ಅಶ್ಲೀಲ ವೆಬ್ ಸೈಟ್​ನಲ್ಲಿ ಕೇಳಿ ಬರುತ್ತಿದೆ. ಸತೀಸ್ ಜಾರಕಿಹೊಳಿ (Satish Jarkiholi) ಹೆಸರು ಕೆಡಿಸಲು ಕೆಲ ಕಿಡಗೇಡಿಗಳು ಈ ಕೆಲಸ ಮಾಡಿದ್ದಾರೆ. ಸತೀಶ್ ಜಾರಕಿಹೊಳಿ ಸೆಕ್ಸ್ ವಿಡಿಯೋಸ್ ಎಂದು ಸರ್ಚ್ ಮಾಡಿದರೆ ಪಾರ್ನ್ ವೆಬ್ ಸೈಟ್​ನಲ್ಲಿ ಮೇಲೆ ಅವರ ಹೆಸರು ತೋರಿಸುತ್ತೆ. ಆದರೆ ಬೇರೆಯದ್ದೆ ವಿಡಿಯೋಗಳು ಅದರಲ್ಲಿ ಬರುತ್ತೆ. ಹೀಗಾಗಿ ಸತೀಶ್ ಜಾರಕಿಹೊಳಿ ಹೆಸರಿಗೆ ಧಕ್ಕೆ ತರುವುದಕ್ಕೆ ಕೆಲ ಕಿಡಗೇಡಿಗಳು ಈ ಕೃತ್ಯ ಮಾಡಿದ್ದಾರೆ ಅಂತಾ ಆಕ್ರೋಶ ವ್ಯಕ್ತವಾಗುತ್ತಿದೆ.

ಕಿಡಗೇಡಿಗಳ ವಿರುದ್ಧ ಬೆಳಗಾವಿ ಸಿಇಎನ್ ಠಾಣೆಯಲ್ಲಿ FIR: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಹಾಳು ಮಾಡಲಾಗುತ್ತಿದೆ. ಅವರ ಹೆಸರಿಗೆ ಕಳಂತ ತರಲಾಗುತ್ತಿದೆ. ಕೂಡಲೇ ಕಿಡಗೇಡಿಗಳನ್ನ ಬಂಧಿಸಬೇಕೆಂದು ಸತೀಶ್ ಜಾರಕಿಹೊಳಿ ಬೆಂಬಲಿಗ ವಿಜಯ್ ತಳವಾರ ದೂರು ನೀಡಿದ್ದಾರೆ. ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ Information technology act ಅಡಿಯಲ್ಲಿ ದೂರು ದಾಖಲಾಗಿದೆ. ದೂರಿನಲ್ಲಿ ಸತೀಶ್ ಜಾರಕಿಹೊಳಿ ಹೆಸರಿಗೆ ಕಳಂಕ ತರಲು ಪಾರ್ನ್ ವೆಬ್ ಸೈಟ್​ನಲ್ಲಿ ಅವರ ಹೆಸರ ಮೇಲೆ ಆಶ್ಲೀಲ ವಿಡಿಯೋಗಳನ್ನ ಅಪ್ಲೋಡ್ ಮಾಡಿದ್ದಾರೆ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಒತ್ತಾಯಿಸಿದ್ದಾರೆ. ಈ ಕುರಿತು ಕೇಸ್ ದಾಖಲಿಸಿಕೊಂಡಿರುವ ಸಿಇಎನ್ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಸದ್ಯ ಸತೀಶ್ ಜಾರಕಿಹೊಳಿ ಹೆಸರಿಗೆ ಕಳಂಕ ತರಲು ವ್ಯವಸ್ಥಿತ ಸಂಚು ನಡೆದಿದೆಯಾ ಅನ್ನೋ ಅನುಮಾನ ಕಾಡುತ್ತಿದೆ. ರಾಜಕೀಯದಲ್ಲಿ ತಮ್ಮದೇ ವರ್ಚಸ್ಸು ಹೊಂದಿರುವ ಸತೀಶ್ ಜಾರಕಿಹೊಳಿ ಹೆಸರು ಕೆಡಸುವ ಯತ್ನವನ್ನ ಕಿಡಗೇಡಿಗಳು ಮಾಡುತ್ತಿದ್ದಾರೆ. ಈ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಸತೀಶ್ ಜಾರಕಿಹೊಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ದೂರುದಾರ ವಿಜಯ್ ತಳವಾರ, ಸತೀಶ್ ಜಾರಕಿಹೊಳಿ‌ ಹೆಸರು ಕೆಡಿಸಲು ಅಶ್ಲೀಲ ವೆಬ್ ಸೈಟ್​ಗಳಲ್ಲಿ ಅವರ ಹೆಸರು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬೆಳಗಾವಿಯ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಸತೀಶ್ ಜಾರಕಿಹೊಳಿ‌ ಅಷ್ಟೇ ಅಲ್ಲ ಇನ್ನೂ ಕೆಲವು ರಾಜಕೀಯ ಮುಖಂಡರ ಹೆಸರಿನ ಮೇಲೆ ಈ ರೀತಿ ಬೇರೆ ಇನ್ಯಾರದೋ ವಿಡಿಯೋಗೆ ಇವರ ಹೆಸರು ಹಾಕಿ ಅಪ್ಲೋಡ್ ಮಾಡಿದ್ದಾರೆ. ತಕ್ಷಣ ಪೊಲೀಸರು ಅವರನ್ನ ಬಂಧಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ತಿಳಿಸಿದರು.

ವರದಿ: ಸಹದೇವ ಮಾನೆ

ಇದನ್ನೂ ಓದಿ

‘ಡಾನ್ಸಿಂಗ್​ ಚಾಂಪಿಯನ್​’ ಶೋ​ ನಡುವೆ ಮೇಘನಾ ರಾಜ್​ ಫೋಟೋಶೂಟ್​; ಇಲ್ಲಿವೆ ಚೆಂದದ ಫೋಟೋಗಳು

ರಾಕಿ ಭಾಯ್​ ತಾಯಿ ಪಾತ್ರ ಮಾಡಿದ ‘ಕೆಜಿಎಫ್​ 2’ ನಟಿ ಅರ್ಚನಾ ಜೋಯಿಸ್​ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್​

Published On - 12:56 pm, Wed, 20 April 22