ಪರಿಷತ್ ಚುನಾವಣೆಯಲ್ಲಿ ಯಾಕೆ ಹಿನ್ನಡೆ ಆಗಿದೆ ಅಂದ್ರೆ ನಮ್ನನ್ನೆಲ್ಲ ನೆಗ್ಲೆಟ್ ಮಾಡಿದ್ದಾರೆ -ಬಸವನಗೌಡ ಪಾಟೀಲ್ ಯತ್ನಾಳ
ಸಿಂಧಗಿ ಹೊಣೆ ಕೊಟ್ಟಿದ್ದಕ್ಕೆ 34,000 ಮತದಿಂದ ಗೆಲ್ಲಿಸಿದ್ದೆ. ಈ ಬಾರಿ MLC ಚುನಾವಣೆ ಪ್ರಚಾರಕ್ಕೆ ನನ್ನನ್ನ ಕರೆಯಲಿಲ್ಲ. ಬಿಜೆಪಿಗೆ ಓಟ್ ಹಾಕಿ ಎಂದು ಹೇಳಿ ಮನೆಯಲ್ಲಿ ಕೂತೆ. ಯಡಿಯೂರಪ್ಪನವರು ಕೈಗೊಂಡ ಯಾತ್ರೆಗೂ ಕರೆಯಲಿಲ್ಲ. -ಬಸವನಗೌಡ ಪಾಟೀಲ್ ಯತ್ನಾಳ
ಬೆಳಗಾವಿ: ವಿಜಯಪುರ ಪರಿಷತ್ ಚುನಾವಣೆಯಲ್ಲಿ ಎರಡನೇ ಪ್ರಾಶಸ್ತ್ಯದಲ್ಲಿ ಬಿಜೆಪಿ ಗೆಲವು ಹಿನ್ನಡೆಯಲ್ವಾ ಅನ್ನೋ ಪ್ರಶ್ನೆಗೆ ಬೆಳಗಾವಿಯಲ್ಲಿ ಶಾಸಕ ಬಸನಗೌಡ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ. ಯಾಕೆ ಹಿನ್ನಡೆ ಆಗ್ತಿದೆ ಅಂದ್ರೆ ನಮ್ನನ್ನೆಲ್ಲ ನೆಗ್ಲೆಟ್ ಮಾಡಿದ್ದಾರೆ. ಸಿಂಧಗಿಯಲ್ಲಿ ಜವಾಬ್ದಾರಿ ಕೊಟ್ಟಿದ್ದರು 34 ಸಾವಿರ ವೋಟ್ನಲ್ಲಿ ಗೆಲ್ಲಿಸಿದ್ದೆ. ಈ ಚುನಾವಣೆಗೆ ಪ್ರಚಾರಕ್ಕೆ ಕರೆಯಲಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಸಿಂಧಗಿ ಹೊಣೆ ಕೊಟ್ಟಿದ್ದಕ್ಕೆ 34,000 ಮತದಿಂದ ಗೆಲ್ಲಿಸಿದ್ದೆ. ಈ ಬಾರಿ MLC ಚುನಾವಣೆ ಪ್ರಚಾರಕ್ಕೆ ನನ್ನನ್ನ ಕರೆಯಲಿಲ್ಲ. ಬಿಜೆಪಿಗೆ ಓಟ್ ಹಾಕಿ ಎಂದು ಹೇಳಿ ಮನೆಯಲ್ಲಿ ಕೂತೆ. ಯಡಿಯೂರಪ್ಪನವರು ಕೈಗೊಂಡ ಯಾತ್ರೆಗೂ ಕರೆಯಲಿಲ್ಲ. ಸೋಲಾಗಿರುವ ಕಡೆ ಅತ್ಮಾವಲೋಕನ ಮಾಡಿಕೊಳ್ಳಬೇಕಿದೆ. ರಾಜ್ಯಧ್ಯಕ್ಷರು ಸೋಲಿನ ಬಗ್ಗೆ ಚರ್ಚೆ ಮಾಡಬೇಕು. ಎಲ್ಲಾ ನಾಯಕರನ್ನ ಕರೆದು ಸೋಲಿನ ಬಗ್ಗೆ ಚರ್ಚಿಸಬೇಕು ಎಂದು ಬೆಳಗಾವಿಯಲ್ಲಿ ಶಾಸಕ ಬಸನಗೌಡ ಯತ್ನಾಳ್ ತಿಳಿಸಿದ್ದಾರೆ.
ಸಿಎಂ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ ಪದೇ ಪದೆ ಭೇಟಿ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಯತ್ನಾಳ್, ಎಲ್ಲಾ ನವಗ್ರಹಗಳು ಇರುತ್ತೆ ಅದಕ್ಕೆ ಶಾಂತಿ ಮಾಡಬೇಕಾಗುತ್ತೆ. ರಾಹು ಕೇತು ಎರಡು ದೊಡ್ಡ ಗ್ರಹಗಳು. ಗ್ರಹಗಳಿಂದ ಭವಿಷ್ಯದಲ್ಲಿ ಯಾವುದೇ ಸಮಸ್ಯೆಯಾಗಬಾರದು. ಸಿಎಂ ಮೊನ್ನೆ ಕಾಶಿ ವಿಶ್ವನಾಥನ ದರ್ಶನ ಮಾಡಿದ್ದಾರೆ. ಈಗ ರಾಹು, ಕೇತು ಶಾಂತವಾಗುತ್ತೆ ಎಂದರು.
ಇನ್ನು ನೀವು ಮಂತ್ರಿಯಾಗಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸಾಮಾನ್ಯ MLA, ನಮ್ಮನ್ನೆಲ್ಲಿ ಮಂತ್ರಿ ಮಾಡ್ತಾರೆ. ನಮ್ಮಂತ ಅಪ್ರಾಮಾಣಿಕ ಭ್ರಷ್ಟರನ್ನೆಲ್ಲಿ ಮಂತ್ರಿ ಮಾಡ್ತಾರೆ. ಪ್ರಾಮಾಣಿಕರನ್ನ ಸಚಿವರನ್ನಾಗಿ ಮಾಡುತ್ತಾರೆ. ಬದಲಾವಣೆ ಮಾಡದಿದ್ದರೆ ಆ ಕಡೆ ಹೋಗ್ತೀವಿ ಎಂದು ಮಾರ್ಮಿಕವಾಗಿ ನುಡಿದಿದ್ದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಯತ್ನಾಳ್ ವಾಗ್ಧಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಇಂದಿನಿಂದ ರಾಷ್ಟ್ರಪತಿ ರಾಮನಾಥ ಕೋವಿಂದ್ ಬಾಂಗ್ಲಾದೇಶ ಪ್ರವಾಸ; 50ನೇ ವಿಜಯ ದಿನ ಸಂಭ್ರಮದಲ್ಲಿ ಭಾಗಿ