
ಬೆಳಗಾವಿ, ಏಪ್ರಿಲ್ 28: ಕಾಂಗ್ರೆಸ್ (Congress) ಪ್ರತಿಭಟನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಕಪ್ಪು ಬಟ್ಟೆ (Black Cloth) ಪ್ರದರ್ಶನ ಮಾಡಿದ್ದ ಬೆಳಗಾವಿ (Belagavi) ಜಿಲ್ಲಾ ಬಿಜೆಪಿ (BJP) ಅಧ್ಯಕ್ಷೆ ಶಿಲ್ಪಾ ಕೇಕರೆ ಸೇರಿದಂತೆ ಆರು ಮಂದಿ ಕಾರ್ಯಕರ್ತೆಯರನ್ನು ಪೊಲೀಸರು (Police) ಬಂಧಿಸಿದ್ದಾರೆ. ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ಕಾರ್ಯಕರ್ತೆಯರು ಟಿಳಕವಾಡಿ ಸಿಪಿಐ, ಬೆಳಗಾವಿ ಕ್ಯಾಂಪ್ ಠಾಣೆ ಪಿಎಸ್ಐ ಅವರ ವಶದಲ್ಲಿದ್ದರೆ. ಕಾರ್ಯಕರ್ತೆಯರನ್ನು ಕಾಕತಿ ಠಾಣೆಯಿಂದ ಮತ್ತೊಂದು ಠಾಣೆಗೆ ಪೊಲೀಸರು ಕರೆದುಕೊಂಡಿದ್ದಾರೆ. ಬಿಜೆಪಿ ಎಂಎಲ್ಸಿ ಸಿಟಿ ರವಿ ಮಾದರಿಯಲ್ಲಿ ಠಾಣೆಯಿಂದ ಠಾಣೆಗೆ ಪೊಲೀಸರು ಕಾರ್ಯಕರ್ತೆಯರನ್ನು ಕರೆದುಕೊಂಡು ಹೋಗುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಕಿಸ್ತಾನ ಮತ್ತು ಉಗ್ರರ ಪರ ಮಾತನಾಡಿದ್ದಾರೆ. ಸಿಎಂ ಹೇಳಿಕೆಯಿಂದ ಬೇಸರವಾಗಿ ಕಪ್ಪು ಬಾವುಟ ಪ್ರದರ್ಶಿಸಿದ್ದೇವೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷೆ ಶಿಲ್ಪಾ ಹೇಳಿದರು.
ಇದನ್ನೂ ಓದಿ: ಭಾಷಣ ವೇಳೆ ಸಿದ್ದರಾಮಯ್ಯಗೆ ಕಪ್ಪು ಬಟ್ಟೆ ಪ್ರದರ್ಶನ: ಪೊಲೀಸ್ ಅಧಿಕಾರಿಯನ್ನು ವೇದಿಕೆ ಮೇಲೆ ಕರೆದು ಸಿಎಂ ತರಾಟೆ
ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನಾ ಸಭೆ ನಡೆಯುತ್ತಿತ್ತು. ಈ ವೇಳೆ ಕಪ್ಪು ಭಾವುಟ ತೋರಿಸಿದ್ದಾರೆ. ಕೆಲ ಘೋಷಣೆ ಕೂಗಿದ್ದಾರೆ. ಇದರಿಂದ ಸಭೆಗೆ ಅಡಚಣೆ ಆಗಿದೆ. ಜಿಲ್ಲಾ ಕಾಂಗ್ರೆಸ್ ಪಕ್ಷ ದೂರು ನೀಡಿದೆ. ಬಿಎನ್ಎಸ್ ಸೆಕ್ಷನ್ 189, 352 ಅಡಿ ಸಾರ್ವಜನಿಕ ಶಾಂತಿಭಂಗ, ಹಾಗೂ ಪ್ರಚೋಧನೆ ಕೃತ್ಯ ಆಧಾರದ ಅಡಿ ಕೇಸ್ ದಾಖಲಾಗಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ಚೇತನ್ ಸಿಂಗ್ ರಾಠೋಡ್ ಹೇಳಿದರು.
ಬಂಧಿತ ಆರು ಜನ ಬಿಜೆಪಿ ಕಾರ್ಯಕರ್ತೆಯರಿಗೆ ಬೆಳಗಾವಿ ಜಿಲ್ಲಾ ಕೋರ್ಟ್ ಜಾಮೀನು ನೀಡಿದೆ. ಬಿಜೆಪಿ ಕಾರ್ಯಕರ್ತೆಯರು ಪಕ್ಷದ ಕಚೇರಿಗೆ ಆಗಮಿಸುತ್ತಿದ್ದಂತೆ, ನಾರಿ ಶಕ್ತಿ ಜಿಂದಾಬಾದ್ ಎಂದು ಕಾರ್ಯಕರ್ತರು ಬರಮಾಡಿಕೊಂಡರು.
Published On - 7:37 pm, Mon, 28 April 25