AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಳಿಗಾಲ ಅಧಿವೇಶನಕ್ಕೆ ಸಜ್ಜಾದ ಬೆಳಗಾವಿ; ಸಿದ್ಧತೆಗಳು ಹೀಗಿವೆ

Karnataka Assembly Winter Session: ಕೊನೆಯ ಹಂತದ ಸಿದ್ಧತೆ ಮುಕ್ತಾಯವಾಗಿದೆ. ಇಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಬಸವರಾಜ ಹೊರಟ್ಟಿ ಬೆಳಗಾವಿಗೆ ಆಗಮಿಸುತ್ತಿದ್ದು, ಮಧ್ಯಾಹ್ನ ಸುವರ್ಣಸೌಧದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಚಳಿಗಾಲ ಅಧಿವೇಶನಕ್ಕೆ ಸಜ್ಜಾದ ಬೆಳಗಾವಿ; ಸಿದ್ಧತೆಗಳು ಹೀಗಿವೆ
ಅಧಿವೇಶನಕ್ಕೆ ಸಿದ್ಧತೆ
TV9 Web
| Updated By: sandhya thejappa|

Updated on:Dec 12, 2021 | 1:54 PM

Share

ಬೆಳಗಾವಿ: ಮೂರು ವರ್ಷಗಳ ನಂತರ ಕುಂದಾನಗರಿ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದು, ಇದಕ್ಕೆ ಬೇಕಾದ ಸಿದ್ಧತೆಗಳನ್ನ ಈಗಾಗಲೇ ಬೆಳಗಾವಿ ಜಿಲ್ಲಾಡಳಿತ ಮಾಡಿಕೊಂಡಿದೆ. ಪೊಲೀಸ್ ಬಂದೋಬಸ್ತ್​ನಿಂದ ಹಿಡಿದು ವಾಸ್ತವ್ಯದ ವರೆಗೂ, ಊಟದಿಂದ ಹಿಡಿದು ಮೂಲಭೂತ ಸೌಲಭ್ಯಗಳ ವರೆಗೂ ಸಕಲ ಸಿದ್ಧತೆ ಆಗಿದೆ. ಡಿಸೆಂಬರ್ 13ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದ್ದು, ಇದಕ್ಕೆ ಒಂದೇ ದಿನ ಬಾಕಿ ಉಳಿದಿದೆ.

ನಿನ್ನೆ (ಡಿ.11) ಕೊನೆಯ ಹಂತದ ಸಿದ್ಧತೆ ಮುಕ್ತಾಯವಾಗಿದೆ. ಇಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಬಸವರಾಜ ಹೊರಟ್ಟಿ ಬೆಳಗಾವಿಗೆ ಆಗಮಿಸುತ್ತಿದ್ದು, ಮಧ್ಯಾಹ್ನ ಸುವರ್ಣಸೌಧದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇಡೀ ಸರ್ಕಾರವೇ ಬೆಳಗಾವಿ ನಗರದಲ್ಲಿ ವಾಸ್ತವ್ಯ ಹೂಡಲಿದೆ. ಇದಕ್ಕೆ ಬೇಕಾದ ವ್ಯವಸ್ಥೆ ಕೂಡ ಜಿಲ್ಲಾಡಳಿತದಿಂದ ಆಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಬೆಳಗಾವಿಯ ನ್ಯೂ ಸರ್ಕ್ಯೌಟ್ ಹೌಸ್​ನಲ್ಲಿ ತಂಗಲಿದ್ದಾರೆ. ಇನ್ನುಳಿದ ಸಚಿವರು, ಶಾಸಕರು ಮತ್ತು ಅಧಿಕಾರಿಗಳಿಗೆ ರೂಂಗಳ ವ್ಯವಸ್ಥೆ ಮಾಡಲಾಗಿದೆ.

ಒಟ್ಟು ಎರಡು ಸಾವಿರಕ್ಕೂ ಅಧಿಕ ರೂಂಗಳನ್ನ ಈಗಾಗಲೇ ಬುಕ್ ಮಾಡಿದ್ದು, ಇಂದು ಬೆಳಗಾವಿಗೆ ಆಗಮಿಸುತ್ತಿದ್ದಾರೆ. ನೂರು ಐಎಎಸ್ ಅಧಿಕಾರಿಗಳು, 50 ಐಪಿಎಸ್ ಅಧಿಕಾರಿಗಳು ಹಾಗೂ ವಿಧಾನಸಭೆ ಸಚಿವಾಲಯದ ಒಂದು ಸಾವಿರ ಜನರು ಇಂದು ಆಗಮಿಸಲಿದ್ದಾರೆ. ನಾಲ್ಕು ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿ ಆಗಮಿಸಿದ್ದಾರೆ.

15 ಎಸ್​ಪಿ, 35 ಡಿವೈಎಸ್​ಪಿ, ನೂರು ಜನ ಸಿಪಿಐ ಸೇರಿದಂತೆ ನಾಲ್ಕು ಸಾವಿರ ಜನರು ಈಗಾಗಲೇ ಜಿಲ್ಲೆಗೆ ಬಂದಿಳಿದಿದ್ದಾರೆ. ಪೊಲೀಸರಿಗೆ ವಿಧಾನಸಭೆ ಹಿಂಭಾಗದಲ್ಲಿ ಜರ್ಮನ್ ಮಾದರಿಯಲ್ಲಿ ಟೆಂಟ್ ಹೌಸ್ ಮಾಡಿದ್ದು, 1,800 ಜನರಿಗೆ ಅಲ್ಲೇ ವಾಸ್ತವ್ಯಕ್ಕೆ ಅನುಕೂಲ ಮಾಡಲಾಗಿದೆ.

ನೆಗೆಟಿವ್ ವರದಿ ಕಡ್ಡಾಯ ಅಧಿವೇಶನಕ್ಕೆ ಬರುವವರಿಗೆ ಕೊವಿಡ್ ಆರ್​ಟಿಪಿಸಿಆರ್ ಟೆಸ್ಟ್​ನ ನೆಗೆಟಿವ್ ವರದಿ ಕಡ್ಡಾಯವಾಗಿದೆ. 72 ಗಂಟೆ ಒಳಗೆ ಟೆಸ್ಟ್ ಮಾಡಿಸಿರಬೇಕು. ಎರಡು ಡೋಸ್ ವ್ಯಾಕ್ಸಿನ್ ಪಡೆದ ದಾಖಲೆ ಕೂಡ ಕಡ್ಡಾಯವಾಗಿ ಹೊಂದಿರಬೇಕು ಅಂತಾ ಜಿಲ್ಲಾಡಳಿತ ಈಗಾಗಲೇ ಆದೇಶ ಮಾಡಿದೆ. ಇದರ ಜೊತೆಗೆ ನಿನ್ನೆಯಿಂದ ಸುವರ್ಣ ಸೌಧದ ಸುತ್ತ ಒಂದು ಕಿಲೋಮೀಟರ್ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪ್ರತಿಭಟನೆ ಸೇರಿದಂತೆ ಸಾರ್ವಜನಿಕರು ಗುಂಪು ಗುಂಪಾಗಿ ಸೌಧದ ಬಳಿ ಬರುವುದನ್ನ ನಿಷೇಧಿಸಲಾಗಿದೆ.

ಅಧಿವೇಶನದ ವೇಳೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಎರಡು ಸ್ಥಳಗಳಲ್ಲಿ ಇಪ್ಪತ್ತೈದು ಕಡೆಗಳಲ್ಲಿ ಏಕಕಾಲದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಧರಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಧಿವೇಶನದ ವೇಳೆ ಯಾರೆಲ್ಲಾ ಪ್ರತಿಭಟನೆ ಮಾಡುತ್ತಾರೋ ಅವರು ಅನುಮತಿ ಪಡೆಯಬೇಕು, ನಂತರ ಅವರಿಗೆ ಸ್ಥಳಾವಕಾಶವನ್ನ ನಿಗದಿ ಪಡಿಸಲಾಗುತ್ತದೆ. ಪ್ರತಿಭಟನೆ ನಡೆಸುವವರ ಟೆಂಟ್​ಗಳಲ್ಲಿ ಸಿಸಿಟಿವಿಗಳನ್ನ ಅಳವಿಡಿಸಿದ್ದು, ಓರ್ವ ಎಸ್​ಪಿ ನೇತೃತ್ವದಲ್ಲಿ ಭದ್ರತೆ ಕೂಡ ನೀಡಲಾಗುತ್ತೆ.

ಸದ್ಯ 70ಕ್ಕೂ ಅಧಿಕ ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನೆಗೆ ನೋಂದಣಿ ಮಾಡಿಸಿದ್ದಾರೆ. ಇನ್ನೂ ಧರಣಿ ನಡೆಸುವವರೂ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೇಲೆ ಪ್ರತಿಭಟನೆ ಮಾಡದಂತೆ ಕಂಡೀಷನ್ ಕೂಡ ಮಾಡಲಾಗಿದೆ.

ರೈತ ಅಧಿವೇಶನ ಬೆಳಗಾವಿಯ ಸುವರ್ಣಸೌಧದಲ್ಲಿ ನಾಳೆಯಿಂದ ಅಧಿವೇಶನ ಹಿನ್ನೆಲೆ ವಿವಿಧ ರೈತ ಸಂಘಟನೆಗಳಿಂದ ರೈತ ಅಧಿವೇಶನ ಆರಂಭವಾಗಿದೆ. ಕಣಬರ್ಗಿಯ ಸಂಕಲ್ಪ ಗಾರ್ಡನ್‌ನಲ್ಲಿ ರೈತ ಅಧಿವೇಶನ ಆರಂಭವಾಗಿದೆ. ಡೊಳ್ಳು ಬಾರಿಸಿ, ಸಿಹಿ ಹಂಚಿ ರೈತ ಅಧಿವೇಶನಕ್ಕೆ ಚಾಲನೆ ನೀಡಲಾಗಿದೆ. ರೈತರ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಅಧಿವೇಶನ ನಡೆಯುತ್ತಿದೆ.

ವರದಿ: ಸಹದೇವ ಮಾನೆ

ಇದನ್ನೂ ಓದಿ

ಬೀದರ್: ಮೂರು ವರ್ಷಗಳಿಂದ ಬಂದ್ ಆಗಿದ್ದ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭ; ಕಾರ್ಮಿಕರ ಮೊಗದಲ್ಲಿ ಮಂದಹಾಸ

ಆಮಿಷವೊಡ್ಡಿ ಮತಾಂತರ ಮಾಡುವುದಕ್ಕೆ ಅವಕಾಶ ಇಲ್ಲ: ಸಿಎಂ ಬಸವರಾಜ ಬೊಮ್ಮಾಯಿ

Published On - 12:57 pm, Sun, 12 December 21

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ