ಬೀದರ್: ಮೂರು ವರ್ಷಗಳಿಂದ ಬಂದ್ ಆಗಿದ್ದ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭ; ಕಾರ್ಮಿಕರ ಮೊಗದಲ್ಲಿ ಮಂದಹಾಸ
ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬಂದ್ ಆಗಿದ್ದ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 547 ಕಾರ್ಮಿಕರು, 25,7,60 ಸದಸ್ಯರು, 10 ಸಾವಿರ ಕೃಷಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. ಸದ್ಯ ಎಲ್ಲರೂ ಸಂತಸಪಡುವಂತಾಗಿದೆ.
ಬೀದರ್: ಮೂರು ವರ್ಷಗಳಿಂದ ಬಂದ್ ಆಗಿದ್ದ ಸಹಕಾರಿ ಸಕ್ಕರೆ ಕಾರ್ಖಾನೆ ಇಂದಿನಿಂದ ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ಬಳಿಯಲ್ಲಿ ಪುನಃ ಆರಂಭವಾಗುತ್ತಿದೆ. ಕಳೆದ ಮೂರು ವರ್ಷದಿಂದ ಬಂದ್ ಆಗಿದ್ದ ಬಿಎಸ್ಎಸ್ಕೆ (BSSK) ಸಕ್ಕರೆ ಕಾರ್ಖಾನೆ, ಬೀದರ್ ಜಿಲ್ಲೆಯ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆ ಆಗಿದ್ದು, 1968 ಆರಂಭವಾಗಿತ್ತು. 2018 ರವರೆಗೆ ಸತತ ಕಬ್ಬು ನುರಿಸಿದ್ದ ಕಾರ್ಖಾನೆ ಮೂರು ವರ್ಷದಿಂದ ಬಂದ್ ಆಗಿತ್ತು. ಆದರೆ ಇಂದಿನಿಂದ ಕ್ರಷಿಂಗ್ ಆರಂಭವಾಗಿದ್ದು, ರೈತರು ಹಾಗೂ ಕಾರ್ಮಿಕರ ಮೊಗದಲ್ಲಿ ಮಂದಹಾಸ ಮೂಡಿದೆ.
ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವಿಕೆಗೆ ಬಿಎಸ್ಎಸ್ಕೆ ಅಧ್ಯಕ್ಷ ಹಾಗೂ ಹುಮ್ನಾಬಾದ್ ಕ್ಷೇತ್ರದ ಮಾಜಿ ಶಾಸಕರು ಸುಭಾಷ್ ಕಲ್ಲೂರು ಚಾಲನೆ ನೀಡಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬಂದ್ ಆಗಿದ್ದ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 547 ಕಾರ್ಮಿಕರು, 25,7,60 ಸದಸ್ಯರು, 10 ಸಾವಿರ ಕೃಷಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. ಸದ್ಯ ಎಲ್ಲರೂ ಸಂತಸಪಡುವಂತಾಗಿದೆ.
ಕಾರ್ಖಾನೆಯ ಅಧ್ಯಕ್ಷ ಸುಭಾಷ್ ಕಲ್ಲೂರು, ಕೆಎಸ್ಐಐಡಿಸಿ (KSIIDC) ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಮತ್ತು ಆಡಳಿತ ಮಂಡಳಿಯ ಸದಸ್ಯರು ಸೇರಿಕೊಂಡು 11 ಕೋಟಿ ರೂಪಾಯಿ ಸಾಲ ಪಡೆದು ಮತ್ತೆ ಈಗ ಕಾರ್ಖಾನೆ ಆರಂಭ ಮಾಡಿದ್ದಾರೆ. ಇದರಿಂದಾಗಿ ರೈತರಿಗೆ ಹಾಗೂ ಕಾರ್ಮಿಕರಿಗೆ ಅನುಕೂಲವಾಗಿದೆ.
ಶತಕ ದಾಟಿದ ತರಕಾರಿಗಳ ಬೆಲೆ! ಅಕಾಲಿಕ ಮಳೆಯಿಂದ ರೈತರು ಬೆಳೆದ ಬೆಳೆ ಸಂಪೂರ್ಣ ಜಲಾವೃತವಾಗಿತ್ತು. ಇನ್ನೇನು ಫಸಲು ಕೈಗೆ ಸಿಗಬೇಕು ಅನ್ನುವಷ್ಟರಲ್ಲಿ ನಿರಂತರ ಮಳೆಗೆ ನಾಶವಾಯಿತು. ಸುರಿದ ಮಳೆಯಿಂದ ರೈತರ ಬದುಕು ಸದ್ಯ ಹೀನಾಯವಾಗಿದೆ. ತರಕಾರಿಗಳು ಹೊಲದಲ್ಲೇ ಹಾಳಾಗಿರುವುದರಿಂದ ಹೆಚ್ಚು ಪ್ರಮಾಣದ ತರಕಾರಿ ಮಾರುಕಟ್ಟೆಗೆ ಬರುತ್ತಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ತರಕಾರಿಗಳ ಬೆಲೆ ಏರಿಕೆಯಾಗುತ್ತಿದೆ. ತರಕಾರಿ ಬೆಲೆ ಕಂಡು ಖರೀದಿದಾರರು ಕಂಗಾಲಾಗಿದ್ದಾರೆ.
ತರಕಾರಿ ಬೆಲೆ ಕೇಳಿದರೆ ಶಾಕ್ ಆಗುತ್ತೆ. ತರಕಾರಿಗಳ ಬೆಲೆ ಮತ್ತೆ ಶತಕ ದಾಟಿದೆ. ತರಕಾರಿಗಳು ದರ ಏರಿಕೆಯಲ್ಲಿ ಪೈಪೋಟಿ ಬೆಳೆಸಿದೆ. ಅಕಾಲಿಕ ಮಳೆಯಿಂದ ಬೆಲೆ ಡಬಲ್ ಆಗಿದೆ. ಹೊಸದಾಗಿ ತರಕಾರಿ ಬೆಳೆ ರೈತರ ಕೈ ಸೇರುವವರೆಗೂ ರಾಜ್ಯದ ಜನರು ಇದೇ ಸ್ಥಿತಿಯನ್ನು ಎದುರಿಸಬೇಕಾಗಿದೆ. ಕನಿಷ್ಠ 2-3 ತಿಂಗಳು ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ.
ಕುಸಿದಿದ್ದ ಟೊಮ್ಯಾಟೋ ದರ ಸೇರಿ ಇತರೆ ತರಕಾರಿ ಬೆಲೆ ಮತ್ತೆ ಏರಿಕೆಯಾಗಿದೆ. ನುಗ್ಗೆಕಾಯಿ ಪ್ರತಿ ಕೆಜಿಗೆ 350 ರೂ. ಇದೆ. ಮಾರುಕಟ್ಟೆಯಲ್ಲಿ ದರ ಕೇಳಿ ಜನರು ತರಕಾರಿ ಕೊಳ್ಳದೆ ವಾಪಸ್ ಹೋಗುತ್ತಿದ್ದಾರೆ.
ತರಕಾರಿಗಳ ದರ ಹೀಗಿದೆ ಒಂದು ಕೆಜಿ ನುಗ್ಗೆಕಾಯಿಗೆ 200 ರಿಂದ 360 ರೂ. ಇದೆ. ಟೊಮ್ಯಾಟೋ 60 ರಿಂದ 100 ರೂ. ಈರುಳ್ಳಿ 40 ರಿಂದ 50 ರೂ. ಬೆಂಡೆಕಾಯಿ 60 ರಿಂದ 100 ರೂ. ಬೀನ್ಸ್ 60 ರಿಂದ 100 ರೂ. ಕ್ಯಾರೆಟ್ 70 ರಿಂದ 90 ರೂ. ಹೀರೆಕಾಯಿ 50 ರಿಂದ 85 ರೂ. ಬೀಟ್ರೂಟ್ 40 ರಿಂದ 75 ರೂ. ನಮಿಲು ಕೋಸು 40 ರಿಂದ 100 ರೂ. ಬದನೆಕಾಯಿ 30 ರಿಂದ 114 ರೂ.
ಇದನ್ನೂ ಓದಿ: ಓಲಾ ಇಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡಿರುವವರಿಗೆ ಸಿಹಿಸುದ್ದಿ, ವಾಹನಗಳ ಹೋಮ್ ಡೆಲಿವರಿ ಡಿಸೆಂಬರ್ 15ರಿಂದ ಆರಂಭ!
ಬೆಳಗಾವಿ: ಶಿವಸಾಗರ ಸಕ್ಕರೆ ಕಾರ್ಖಾನೆ ಆರಂಭಿಸದಂತೆ ರೈತರು, ಕಾರ್ಖಾನೆ ಮಾಜಿ ನಿರ್ದೇಶಕರ ಪ್ರತಿಭಟನೆ
Published On - 12:30 pm, Sun, 12 December 21