AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ದೃಶ್ಯ ನೋಡಿದ್ರೇ ಮದ್ಯಪ್ರಿಯರು ಮಮ್ಮಲ ಮರಗುತ್ತಾರೆ! ಯಾಕೆ ಗೊತ್ತಾ?

ಜೆಸಿಬಿಯಿಂದ ಲಕ್ಷಾಂತರ ಮೌಲ್ಯದ ಮದ್ಯ ನಾಶ ಪಡಿಸಲಾಯಿತು. ಮೂವತ್ತಕ್ಕೂ ಅಧಿಕ ಅಧಿಕಾರಿಗಳ ತಂಡ ಮದ್ಯ ನಾಶ ಪಡಿಸುವ ಕೆಲಸ ಮಾಡಿತು. ಅಕ್ರಮ ಸಾರಾಯಿ ಮತ್ತು ನಕಲಿ ಸಾರಾಯಿಯನ್ನ ಸೇವನೆ ಮಾಡದಂತೆ ಬೆಳಗಾವಿ ಅಬಕಾರಿ ಇಲಾಖೆ ಉಪ ಆಯುಕ್ತೆ ವನಜಾಕ್ಷಿ ಮದ್ಯಪ್ರಿಯರಲ್ಲಿ ಮನವಿ ಮಾಡಿಕೊಂಡರು.

Sahadev Mane
| Edited By: |

Updated on: Jan 31, 2024 | 12:04 PM

Share

ಈ ದೃಶ್ಯ ನೋಡಿದ್ರೇ ಮದ್ಯಪ್ರಿಯರು ಮಮ್ಮಲ ಮರಗುತ್ತಾರೆ, ಅಬಕಾರಿ ಅಧಿಕಾರಿಗಳಿಗೆ ಹಿಡಿಶಾಪ ಹಾಕ್ತಾರೆ. ಕುಡಿಯುವ ಸಲುವಾಗಿ ಬೆವರು ಸುರಿಸುವ ಅದೆಷ್ಟೋ ಜನ ಸರ್ಕಾರದ ವಿರುದ್ದ ಗರಂ ಆಗ್ತಾರೆ. ಅಷ್ಟಕ್ಕೂ ಬೆಳಗಾವಿ ನಗರದ ಹೊರ ವಲಯದಲ್ಲಿ ಅಬಕಾರಿ ಅಧಿಕಾರಿಗಳು ಮಾಡಿದ್ದಾದ್ರೂ ಎನು? ಮದಪ್ರಿಯರು ಅದ್ಯಾವ ಕಾರಣಕ್ಕೆ ಅಧಿಕಾರಿಗಳಿಗೆ ಹಿಡಿಶಾಪ ಹಾಕ್ತಾರೆ ಅಂತೀರಾ ಈ ಸ್ಟೋರಿ ನೋಡಿ.

ಬಾಕ್ಸ್ ಗಟ್ಟಲೆ ಬ್ರ್ಯಾಂಡೆಡ್ ಮದ್ಯ, ಟ್ಯೂಬ್ ಗಳಲ್ಲಿ ಕಳ್ಳ ಬಟ್ಟಿ, ಕೇಸ್ ಗಟ್ಟಲೆ ಬಿಯರ್ ಗಳು, ಟೆಟ್ರಾ ಪ್ಯಾಕ್ ಸೇರಿದಂತೆ ಎಲ್ಲಾ ವಿಧದ ಮದ್ಯಗಳು ಒಂದು ಕಡೆ ಜಮಾ ಹಾಕಿದರು. ಹೀಗೆ ಪ್ರತಿಯೊಂದನ್ನೂ ಕೈಯಲ್ಲಿ ಹಿಡಿದು ನೋಡ ನೋಡ್ತಿದ್ದಂತೆ ಅಬಕಾರಿ ಅಧಿಕಾರಿಗಳು ನೆಲಕ್ಕೆ ಸುರಿದೇ ಬಿಟ್ರೇ, ಗುಡ್ಡದಲ್ಲಿ ಎಂಟ್ರಿ ಕೊಟ್ಟಿದ್ದ ಜೆಸಿಬಿ ಕೂಡ ಆರ್ಭಟ ಶುರು ಮಾಡಿತ್ತು. ಮದ್ಯದ ಬಾಕ್ಸ್ ಗಳ ಮೇಲೆ ಜೆಸಿಬಿ ಹರಿಯುತ್ತಿದ್ರೇ ನೀರಾಗಿ ಸಾರಾಯಿ ಚಿಮ್ಮುತ್ತಿತ್ತು. ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಹೊರ ವಲಯದ ರಾಮತೀರ್ಥ ಗುಡ್ಡದ ಮೇಲೆ.

ಹೌದು ಇಂದು ಬೆಳಗಾವಿ ಜಿಲ್ಲಾ ಅಬಕಾರಿ ಅಧಿಕಾರಿಗಳು ಆರು ತಿಂಗಳಿಂದ ಈಚೆಗೆ ಜಪ್ತಿ ಮಾಡಿದ್ದ ಸಾರಾಯಿಯನ್ನ ನಾಶ ಮಾಡಲು ತಂದಿದ್ದರು. ಲೋಡ್ ಗಟ್ಟಲೇ ಮದ್ಯ ಕಂಡ ಕೆಲವರು ಎನಾದ್ರೂ ಸಿಗುತ್ತೆ ಅನ್ನೋ ಆಶಾ ಭಾವನೆಯಲ್ಲಿ ಬರ್ತಿದ್ದಂತೆ ಎಲ್ಲರನ್ನೂ ವಾಪಾಸ್ ಕಳುಹಿಸಿ ಮದ್ಯ ನಾಶವನ್ನ ಅಧಿಕಾರಿಗಳು ಶುರು ಮಾಡಿದ್ರೂ. ಮೊದಲು ಬ್ರ್ಯಾಂಡ್ ಮದ್ಯವನ್ನ ಬಾಟಲ್ ಓಪನ್ ಮಾಡಿ ಸುರಿದ್ರೇ, ಟ್ಯೂಬ್ ಗಳಲ್ಲಿದ್ದ ಕಳ ಬಟ್ಟಿಯನ್ನ ಸುರಿದ್ರೂ. ಇತ್ತ ಟೆಟ್ರಾ ಪ್ಯಾಕ್, ಬಿಯರ್ ಬಾಟಲ್ ನಲ್ಲಿದ್ದ ಮದ್ಯವನ್ನ ಜೆಸಿಬಿ ಹರಿಸಿ ನಾಶ ಪಡಿಸಿದ್ರೂ. ಬೆಳಗಾವಿ ಜಿಲ್ಲೆಯಲ್ಲಿ ಜಪ್ತಿ ಮಾಡಿಕೊಂಡಿದ್ದ ನಕಲಿ ಮದ್ಯ ಅಕ್ರಮವಾಗಿ ಮಾರಾಟ ಮಾಡ್ತಿದ್ದ ಮದ್ಯ ಜತೆಗೆ ಗೋವಾದಿಂದ ಸಾಗಿಸುತ್ತಿದ್ದ ಮದ್ಯ ಸೇರಿ ಎಲ್ಲವನ್ನೂ ಇಲ್ಲಿ ಏಕಕಾಲಕ್ಕೆ ಸುಮಾರು ಆರು ಗಂಟೆಗಳ ಕಾಲ ನಿರಂತರವಾಗಿ ನಾಶ ಮಾಡುವ ಕೆಲಸ ಮಾಡಿದ್ದಾರೆ.

ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಆರು ತಿಂಗಳಿಂದ ಜಪ್ತಿ ಮಾಡಿದ್ದ ಸುಮಾರು 89 ಲಕ್ಷ 60 ಸಾವಿರ ಮೌಲ್ಯದ ಮದ್ಯ ಇದಾಗಿತ್ತು. 101 ಪ್ರಕರಣದಲ್ಲಿ ಜಪ್ತಿ ಮಾಡಿಕೊಂಡಿದ್ದ 18,297 ಲೀಟರ್ ರಮ್, ವಿಸ್ಕಿ, ಸ್ಕಾಚ್ ಸೇರಿದಂತೆ ವಿವಿಧ ಮಾದರಿಯ ಮದ್ಯ, 4,061 ಲೀಟರ್ ವಿವಿಧ ಬ್ರ್ಯಾಂಡ್ ನ ಬಿಯರ್ ಗಳು ಮತ್ತು 665 ಲೀಟರ್ ಕಳ್ಳ ಬಟ್ಟಿ ಸಾರಾಯಿಯನ್ನ ಜೆಸಿಬಿಯಿಂದ ನಾಶ ಪಡಿಸಲಾಯಿತು. ಗಾಜಿನ ಬಾಟಲ್ ಗಳಲ್ಲಿದ್ದ ಮದ್ಯವನ್ನ ಕಾರ್ಮಿಕರನ್ನ ಕರೆಯಿಸಿ ಅವರಿಂದ ಓಪನ್ ಮಾಡಿಸಿ ನೆಲಕ್ಕೆ ಸುರಿಸಿ ನಾಶ ಪಡಿಸುವ ಕೆಲಸ ಮಾಡಿದ್ರೂ. ಮೂವತ್ತಕ್ಕೂ ಅಧಿಕ ಅಧಿಕಾರಿಗಳ ತಂಡ ಮದ್ಯ ನಾಶ ಪಡಿಸುವ ಕೆಲಸ ಮಾಡಿತು. ಅಕ್ರಮ ಸಾರಾಯಿ ಮತ್ತು ನಕಲಿ ಸಾರಾಯಿಯನ್ನ ಸೇವನೆ ಮಾಡದಂತೆ ಬೆಳಗಾವಿ ಅಬಕಾರಿ ಇಲಾಖೆ ಉಪ ಆಯುಕ್ತೆ ವನಜಾಕ್ಷಿ ಮದ್ಯಪ್ರಿಯರಲ್ಲಿ ಮನವಿ ಮಾಡಿಕೊಂಡರು.

ಒಟ್ಟಿನಲ್ಲಿ ಅಕ್ರಮ ಸಾರಾಯಿ ಮತ್ತು ನಕಲಿ ಸಾರಾಯಿಯನ್ನ ಜಪ್ತಿ ಮಾಡಿ ಶೇಖರಿಸಿಟ್ಟಿದ್ದ ಅಬಕಾರಿ ಇಲಾಖೆ ಅಧಿಕಾರಿಗಳು ಇದೀಗ ನಾಶ ಪಡಿಸುವ ಕೆಲಸ ಮಾಡಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ನಾಶ ಪಡಿಸಿದ್ದು ಮುಂದಿನ ಕಾರ್ಯಾಚರಣೆಗೆ ಸಜ್ಜಾಗುತ್ತಿದ್ದಾರೆ. ಆದ್ರೇ ಮದ್ಯ ಪ್ರಿಯರು ಮಾತ್ರ ಸಾರಾಯಿ ಅನಾವಶ್ಯಕವಾಗಿ ಹಾಳು ಮಾಡಿದ್ರಲ್ಲಾ ಅಂತಾ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹಿಡಿಶಾಪ ಹಾಕ್ತಿರುವುದಂತೂ ಸುಳ್ಳಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ