IPL 2025 RCB: ಆರ್‌ಸಿಬಿ ಗೆದ್ರೆ ಒಂದು ದಿನ ರಜೆ ಘೋಷಿಸಿ: ಸಿಎಂಗೆ ಅಭಿಮಾನಿ ಪತ್ರ

ನಿನ್ನೆ ಪ್ಲೇ ಆಫ್​ನಲ್ಲಿ ಪಂಜಾಬ್​ಗೆ ಸೋಲುಣಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್​ ಫೈನಲ್ ಪ್ರವೇಶಿಸಿದೆ. ಕಪ್ ಗೆಲುವಿಗೆ ಇನ್ನೊಂದೇ ಮೆಟ್ಟಿಲು ಬಾಕಿ ಇದೆ. ಇತ್ತ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ. ಹೀಗಿರುವಾಗ ಬೆಳಗಾವಿಯ ಯುವಕನೋರ್ವ ಆರ್‌ಸಿಬಿ ಗೆದ್ದರೆ ಆ ದಿನವನ್ನು RCB ಫ್ಯಾನ್ಸ್​​​ ಹಬ್ಬ ಮತ್ತು ಒಂದು ದಿನ ರಜೆ ಘೋಷಣೆ ಮಾಡುವಂತೆ ಸಿಎಂಗೆ ಪತ್ರ ಬರೆದಿದ್ದಾರೆ.

IPL 2025 RCB: ಆರ್‌ಸಿಬಿ ಗೆದ್ರೆ ಒಂದು ದಿನ ರಜೆ ಘೋಷಿಸಿ: ಸಿಎಂಗೆ ಅಭಿಮಾನಿ ಪತ್ರ
ಆರ್​ಸಿಬಿ ಅಭಿಮಾನಿ ಬರೆದ ಪತ್ರ
Edited By:

Updated on: May 30, 2025 | 9:08 AM

ಬೆಳಗಾವಿ, ಮೇ 30: ಪ್ಲೇ ಆಫ್​ನಲ್ಲಿ ಪಂಜಾಬ್​ಗೆ ಸೋಲುಣಿಸಿದ ಆರ್​ಸಿಬಿ (RCB) ತಂಡ ಭರ್ಜರಿಯಾಗಿ ಫೈನಲ್​ಗೆ ಎಂಟ್ರಿಕೊಟ್ಟಿದೆ. 18 ವರ್ಷಗಳಿಂದ ಚಾತಕ ಪಕ್ಷಿಯಂತೆ ಕಾಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅಭಿಮಾನಿಗಳ ಕಪ್ ಗೆಲುವಿನ ಕನಸಿಗೆ ಇನ್ನೊಂದೇ ಮೆಟ್ಟಿಲು ಬಾಕಿ ಇದೆ. ಈ ಬಾರಿ ಟ್ರೋಫಿ ನಮ್ದೇ ಅನ್ನೋ ಮಹಾ ಸಂದೇಶ ರವಾನಿಸಲು ಮುಂದಾಗಿರುವ ಈ ಸಂದರ್ಭದಲ್ಲಿ ಓರ್ವ ಅಭಿಮಾನಿ (Fans) ಆರ್‌ಸಿಬಿ ಗೆದ್ದರೆ ಆ ದಿನವನ್ನು ‘ಆರ್​​ಸಿಬಿ ಫ್ಯಾನ್ಸ್​​​ ಹಬ್ಬ’ ಎಂದು ಘೋಷಿಸಿ ಒಂದು ದಿನ ರಜೆ ನೀಡುವಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದ ಶಿವಾನಂದ ಮಲ್ಲನ್ನವರ್ ಎಂಬ ಯುವಕ ಆರ್‌ಸಿಬಿ ಅಭಿಮಾನಿಯಾಗಿದ್ದು, ಆರ್‌ಸಿಬಿ ಕಪ್ಪು ಗೆದ್ದ ದಿನ ಪ್ರತಿ ವರ್ಷ ರಜೆ ನೀಡಬೇಕು. ಎಲ್ಲಾ ಜಿಲ್ಲೆಯಲ್ಲೂ ಆಚರಣೆ ಮಾಡಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಆರ್‌ಸಿಬಿ ಫೈನಲ್‌ ತಲಪುತ್ತಿದ್ದಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯುವ ಮೂಲಕ ವಿಶೇಷ ಮನವಿ ಮಾಡಿದ್ದಾರೆ. ಸದ್ಯ ಅಭಿಮಾನಿಯ ಮನವಿ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಅಭಿಮಾನಿ ಬರೆದ ಪತ್ರದಲ್ಲೇನಿದೆ?

ಐಪಿಎಲ್​​ ಪಂದ್ಯದಲ್ಲಿ ಒಂದು ವೇಳೆ ಆರ್​ಸಿಬಿ ತಂಡ ಫೈನಲ್​ಗೆ ಹೋಗಿ ಕಪ್​ ಗೆದ್ದರೇ ಆ ದಿನ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆ ದಿನವನ್ನು ‘ಕರ್ನಾಟಕ ರಾಜ್ಯ ಆರ್​ಸಿಬಿ ಫ್ಯಾನ್ಸ್​ ಹಬ್ಬ’ ಅಂತ ಅಧೀಕೃತವಾಗಿ ಘೋಷಿಸಿ ಪ್ರತಿವರ್ಷ ಸರ್ಕಾರ ರಜೆ ನೀಡಬೇಕು.

ಇದನ್ನೂ ಓದಿ
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಳೆ ಅಬ್ಬರ: ಶಾಲೆಗಳಿಗೆ ಇಂದು ರಜೆ
ಬೆಳಗಾವಿ: ಪತ್ನಿ ಕಾಟಕ್ಕೆ ಬೆಸತ್ತು ಡೆತ್​ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ
ಬೆಂಗಳೂರಲ್ಲಿ 200 ರ ಗಡಿ ದಾಟಿದ ಕೊರೊನಾ ಪ್ರಕರಣ: ರಾಜಧಾನಿಯೇ ಹಾಟ್​ಸ್ಪಾಟ್
ಕರ್ನಾಟಕದಲ್ಲಿ ಜೂನ್​ 2ರವರೆಗೂ ಭಾರಿ ಮಳೆ, 5 ಜಿಲ್ಲೆಗಳಿಗೆ ರೆಡ್ ಅಲರ್ಟ್​

ಇದನ್ನೂ ಓದಿ: ಬೆಂಗಳೂರಿನಲ್ಲಿ 200 ರ ಗಡಿ ದಾಟಿದ ಕೊರೊನಾ ಪ್ರಕರಣ: ಕೋವಿಡ್​​ಗೆ ರಾಜಧಾನಿಯೇ ಹಾಟ್​ಸ್ಪಾಟ್

ಏಕೆಂದರೆ ಆರ್​ಸಿಬಿ ಫ್ಯಾನ್ಸ್​ಗಳ ಬಹುದಿನದ ಕನಸು ನನಸಾಗಲಿದ್ದು, ಕರ್ನಾಟಕ ರಾಜ್ಯೋತ್ಸವನ್ನು ಪ್ರತಿ ಜಿಲ್ಲೆಯಲ್ಲಿ ಯಾವ ರೀತಿ ಆಚರಿಸುತ್ತೇವೋ ಅದೇ ರೀತಿ ಆರ್​ಸಿಬಿ ಫ್ಯಾನ್ಸ್​​​ ಹಬ್ಬ ಆಚರಿಸುವುದಕ್ಕೆ ಕರ್ನಾಟಕ ಸರ್ಕಾರ ಅನುವು ಮಾಡಿಕೊಡಬೇಕೆಂದು ವಿನಂತಿ ಮಾಡಿಕೊಳ್ಳುತ್ತೇವೆ.

ಇದನ್ನೂ ಓದಿ: Karnataka Rains: ಕರ್ನಾಟಕದಲ್ಲಿ ಜೂನ್​ 2ರವರೆಗೂ ಭಾರಿ ಮಳೆ, 5 ಜಿಲ್ಲೆಗಳಿಗೆ ರೆಡ್ ಅಲರ್ಟ್​

ಇದನ್ನು ಕರ್ನಾಟಕ ಸರ್ಕಾರ ಗಣನೀಯವಾಗಿ ತೆಗೆದುಕೊಂಡು ರಜೆ ಮತ್ತು ಆರ್​ಸಿಬಿ ಫ್ಯಾನ್ಸ್​ ಹಬ್ಬ ಆಚರಿಸುವುದಕ್ಕೆ ಪರವಾಣಿಗೆ ಕೊಡಬೇಕೆಂದು ಎಲ್ಲಾ ಆರ್​ಸಿಬಿ ಫ್ಯಾನ್ಸ್ ಪರವಾಗಿ ಕಳಕಳಿಯ ವಿನಂತಿ ಮಾಡಿಕೊಳ್ಳುತ್ತೇವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:07 am, Fri, 30 May 25