ಬೆಳಗಾವಿಯಲ್ಲಿ ಹೆಂಡತಿ ಕಾಟಕ್ಕೆ ಬೆಸತ್ತು ಡೆತ್​ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ

ಹೆಂಡತಿ ಕಾಟಕ್ಕೆ ಬೆಸತ್ತು ಡೆತ್​ನೋಟ್ ಬರೆದಿಟ್ಟು ಪತಿ ತನ್ನ ಕಂಪ್ಯೂಟರ್ ಶಾಪ್​ನಲ್ಲಿ ವೈರ್​ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಳಗಾವಿಯ ಅನಗೋಳದ ದುರ್ಗಾ ಕಾಲೋನಿಯಲ್ಲಿ ನಡೆದಿದೆ. ತನ್ನ ಸಾವಿಗೆ ಹೆಂಡತಿ ಕಾರಣ ಎಂದು ಡೆತ್​ನೋಟ್​ನಲ್ಲಿ ಉಲ್ಲೇಖಿಸಲಾಗಿದೆ. ಉದ್ಯಮಬಾಗ ಠಾಣೆಯಲ್ಲಿ ಕೇಸ್​​ ದಾಖಲಾಗಿದೆ.

ಬೆಳಗಾವಿಯಲ್ಲಿ ಹೆಂಡತಿ ಕಾಟಕ್ಕೆ ಬೆಸತ್ತು ಡೆತ್​ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ
ಸುನೀಲ್​​ ಮೂಲಿಮನಿ
Updated By: ಗಂಗಾಧರ​ ಬ. ಸಾಬೋಜಿ

Updated on: May 30, 2025 | 8:01 AM

ಬೆಳಗಾವಿ, ಮೇ 30: ಇತ್ತೀಚೆಗೆ ಬೆಂಗಳೂರಿನಲ್ಲಿ ಹೆಂಡತಿ (wife) ಕಾಟಕ್ಕೆ ಬೇಸತ್ತು ಓರ್ವ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅದು ಮಾಸುವ ಮುನ್ನವೇ ಪತ್ನಿ ಮತ್ತು ಮಾವನ ಕಾಟಕ್ಕೆ ಪೊಲೀಸ್​ ಕಾನ್‌ಸ್ಟೇಬಲ್​​ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಇಂತಹದೇ ಒಂದು ಪ್ರಕರಣ ನಡೆದಿದೆ. ಹೆಂಡತಿ ಕಾಟಕ್ಕೆ ಬೇಸತ್ತು ಡೆತ್​ ನೋಟ್ ಬರೆದಿಟ್ಟು ಗಂಡ ಆತ್ಮಹತ್ಯೆ (death) ಮಾಡಿಕೊಂಡಿರುವಂತಹ ಘಟನೆ ಬೆಳಗಾವಿಯ ಅನಗೋಳದ ದುರ್ಗಾ ಕಾಲೋನಿಯಲ್ಲಿ ನಡೆದಿದೆ.

ತನ್ನದೇ ಕಂಪ್ಯೂಟರ್ ಶಾಪ್​​ನಲ್ಲಿ ವೈಯರ್​ದಿಂದ ನೇಣು ಬಿಗಿದುಕೊಂಡು ಸುನೀಲ್ ಮೂಲಿಮನಿ (33) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ತನ್ನ ಸಾವಿಗೆ ಹೆಂಡತಿ ಕಾರಣ ಅಂತಾ ಡೆತ್ ನೋಟ್ ಬರೆದಿಟ್ಟಿದ್ದಾರೆ. ಸದ್ಯ ಉದ್ಯಮಬಾಗ ಠಾಣೆಯಲ್ಲಿ 108 ಸೆಕ್ಷನ್ ಅಡಿಯಲ್ಲಿ ಕೇಸ್​​ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಟೆಕ್ಕಿ ಅತುಲ್ ಆಯ್ತು ಈಗ ಪೊಲೀಸ್ ಸರದಿ, ಹೆಂಡತಿ ಕಾಟಕ್ಕೆ ಕಾನ್​ಸ್ಟೇಬಲ್ ತಿಪ್ಪಣ್ಣ ಆತ್ಮಹತ್ಯೆ!

ಇದನ್ನೂ ಓದಿ
ಬೆಂಗಳೂರಲ್ಲಿ 200 ರ ಗಡಿ ದಾಟಿದ ಕೊರೊನಾ ಪ್ರಕರಣ: ರಾಜಧಾನಿಯೇ ಹಾಟ್​ಸ್ಪಾಟ್
ಕರ್ನಾಟಕದಲ್ಲಿ ಜೂನ್​ 2ರವರೆಗೂ ಭಾರಿ ಮಳೆ, 5 ಜಿಲ್ಲೆಗಳಿಗೆ ರೆಡ್ ಅಲರ್ಟ್​
ಟೆಕ್ಕಿ ಅತುಲ್​ ಸುಭಾಷ್​ ಮಗು ಎಲ್ಲಿ? ಬೆಂಗಳೂರು ಪೊಲೀಸರಿಂದ ಮಹತ್ವದ ಸುಳಿವು
ಅತುಲ್ ಆಯ್ತು, ಈಗ ಹೆಂಡತಿ ಕಾಟಕ್ಕೆ ಕಾನ್​ಸ್ಟೇಬಲ್ ತಿಪ್ಪಣ್ಣ ಆತ್ಮಹತ್ಯೆ!

ನಾಲ್ಕು ವರ್ಷದ ಹಿಂದೆ ಪೂಜಾ ಎಂಬುವವರನ್ನು ಸುನೀಲ್​ ಮದುವೆಯಾಗಿದ್ದರು. ಮೂರು ವರ್ಷದ ಮಗು ಕೂಡ ಇದೆ. ‘ನನ್ನ ಸಾವಿಗೆ ನನ್ನ ಪತ್ನಿಯೇ ಕಾರಣ’ ಎಂದು ಸುನೀಲ್ ಡೆತ್​ ನೋಟ್ ಬರೆದಿಟ್ಟಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಗೆ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಮೃತದೇಹ ಶಿಫ್ಟ್​ ಮಾಡಲಾಗಿದೆ.

ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಟೆಕ್ಕಿ ಸೂಸೈಡ್

ಬೆಂಗಳೂರಿನ ಮಾರತ್ತಹಳ್ಳಿಯ ಟೆಕ್ಕಿ ಅತುಲ್ ಸುಭಾಷ್ ಪ್ರಕರಣ ದೇಶಾದ್ಯಂತ ಕೋಲಾಹಲ ಎಬ್ಬಿಸಿತ್ತು. ಸುಭಾಷ್ ಸಾವಿಗೆ ಪತ್ನಿ ನಿಖಿತಾ ಕಾಟವೇ ಕಾರಣವಾಗಿತ್ತು. ಸಾಯೋಕು ಮುನ್ನ, ಜಸ್ಟೀಸ್​ ಈಸ್ ಡ್ಯೂ.. ನನಗೆ ನ್ಯಾಯ ಸಿಗಬೇಕು.. ಹೀಗೆ ಬೋರ್ಡ್ ಅಂಟಿಸಿ, ಕುತ್ತಿಗೆಗೆ ಅದೇ ಬೋರ್ಡ್ ಹಾಕಿಕೊಂಡು ಅತುಲ್ ಪ್ರಾಣಬಿಟ್ಟಿದ್ದ.

ಇದನ್ನೂ ಓದಿ: Bengaluru techie death: ಟೆಕ್ಕಿ ಅತುಲ್​ ಸುಭಾಷ್​ ಮಗು ಎಲ್ಲಿ? ಬೆಂಗಳೂರು ಪೊಲೀಸರಿಂದ ಮಹತ್ವದ ಸುಳಿವು

ಆತ್ಮಹತ್ಯೆಗೂ ಮುನ್ನ ಅತುಲ್ ಹಲವು ಪುಟಗಳ ಡೆತ್‌ನೋಟ್ ಬರೆದಿಟ್ಟಿದ್ದ. 6 ನಿಮಿಷ 50 ಸೆಕೆಂಡ್‌ ವಿಡಿಯೋ ಕೂಡ ಮಾಡಿದ್ದರು. ಕೊಲೆಗೆ ಯತ್ನ, ಅಸಹಜ ಲೈಂಗಿಕ ಕ್ರಿಯೆ, ಕಿರುಕುಳ ಕೊಡುತ್ತಿದ್ದ ಅಂತಾ ತನ್ನ ಪತ್ನಿ ನಿಖಿತಾ ಸಿಂಘಾನಿಯಾ ನನ್ನ ವಿರುದ್ಧ 9 ಕೇಸ್ ದಾಖಲಿಸಿದ್ದಳು. ಹೀಗಾಗಿ ಉತ್ತರ ಪ್ರದೇಶ ಕೋರ್ಟ್​ಗೆ ಅಲೆದಾಡಿ ಅಲೆದಾಡಿ ಹೈರಾಣಾಗಿ ಹೋಗಿದ್ದೆ ಎಂದು ಹೇಳಿಕೊಂಡಿದ್ದರು. ತನಿಖೆ ಕೈಗೊಂಡ ಪೊಲೀಸರು ನಿಖಿತಾ ಸಿಂಘಾನಿಯಾ, ನಿಶಾ , ಅರುರಾಘ್ ಸೇರಿದಂತೆ ಮೂವರನ್ನು ಬಂಧಿಸಿದ್ದರು.

ಪತ್ನಿ, ಮಾವನ ಕಾಟಕ್ಕೆ ಬೇಸತ್ತು ಕಾನ್‌ಸ್ಟೇಬಲ್ ಆತ್ಮಹತ್ಯೆ

ಇನ್ನು ಬೆಂಗಳೂರಿನಲ್ಲಿ ಪತ್ನಿ ಮತ್ತು ಮಾವನ ಕಾಟಕ್ಕೆ ಬೇಸತ್ತ ಕಾನ್‌ಸ್ಟೇಬಲ್ ಪಿಸಿ ತಿಪ್ಪಣ್ಣ ಬೈಯ್ಯಪ್ಪನಹಳ್ಳಿಯಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ‘ನೀನು ಸತ್ತು ಹೋಗು, ನನ್ನ ಮಗಳು ಚೆನ್ನಾಗಿ ಇರುತ್ತಾಳೆ’ ಎಂದು ಹೇಳಿ ಅವಾಚ್ಯ ಪದಗಳಿಂದ ಮಾವ ನಿಂದಿಸಿರುವುದಾಗಿ ಡೆತ್‌ನೋಟ್‌ನಲ್ಲಿ ತಿಪ್ಪಣ್ಣ ಉಲ್ಲೇಖಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:59 am, Fri, 30 May 25