AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಹಿಂಡಲಗಾ ಜೈಲು ಸಿಬ್ಬಂದಿ ಮೇಲೆ ಕೈದಿ ಹಲ್ಲೆ: ಕಂಡು ಕಾಣದಂತಿರುವ ಮೇಲಾಧಿಕಾರಿಗಳು

ಬೆಳಗಾವಿ ಹಿಂಡಲಗಾ ಜೈಲು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತದೆ. ಹಿಂಡಲಗಾ ಜೈಲಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಕುರಿತು ಟಿವಿ9 ಸುದ್ದಿ ಪ್ರಕಟಿಸಿತ್ತು. ಇದೀಗ ನಿಮ್ಮ ಟಿವಿ9 ಹಿಂಡಲಗಾ ಜೈಲಿನಲ್ಲಿನ ಮತ್ತೊಂದು ಕರಾಳ ಸತ್ಯವನ್ನು ಬೆಳಕಿಗೆ ತಂದಿದೆ. ಈ ಸ್ಟೋರಿ ಓದಿ

ಬೆಳಗಾವಿ ಹಿಂಡಲಗಾ ಜೈಲು ಸಿಬ್ಬಂದಿ ಮೇಲೆ ಕೈದಿ ಹಲ್ಲೆ: ಕಂಡು ಕಾಣದಂತಿರುವ ಮೇಲಾಧಿಕಾರಿಗಳು
ಬೆಳಗಾವಿ ಹಿಂಡಲಗಾ ಜೈಲು ವಾರ್ಡರ್ ವಿನೋದ್
Sahadev Mane
| Updated By: ವಿವೇಕ ಬಿರಾದಾರ|

Updated on:May 28, 2024 | 8:33 AM

Share

ಬೆಳಗಾವಿ, ಮೇ 28: ಬೆಳಗಾವಿ ಹಿಂಡಲಗಾ ಜೈಲು (Belagavi Hindalga Jail) ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತದೆ. ಈ ಹಿಂದೆ ಹಿಂಡಲಾಗಿ ಜೈಲಿನಲ್ಲಿದ್ದ ಭಯೋತ್ಪಾದಕ ಅಫ್ಸರ್ ಪಾಷಾ ಕೇಂದ್ರ ಸಚಿವ ನಿತಿನ್​ ಗಡ್ಕರಿ (Nitin Gadkari) ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಸಿಬ್ಬಂದಿಗೆನೇ ಜೈಲಿನಲ್ಲಿ ರಕ್ಷಣೆ ಇಲ್ಲ ಎಂಬುವುದು ಬೆಳಕಿಗೆ ಬಂದಿದೆ. ಹೌದು ನಿಯಮಗಳನ್ನು ಪಾಲಿಸು ಎಂದಿದ್ದಕ್ಕೆ ಕೈದಿಗಳು (Prisoners) ಜೈಲು ಸಿಬ್ಬಂದಿ (Prison staff) ಮೇಲೆಯೇ ಹಲ್ಲೆ ಮಾಡಿದ್ದಾರೆ. ವಿನೋದ್ ಲೋಕಾಪುರ್ ಹಲ್ಲೆಗೊಳಗಾದ ಹಿಂಡಲಗಾ ಜೈಲಿನ ವಾರ್ಡರ್. ಸದ್ಯ ವಾರ್ಡರ್ ವಿನೋದ್​ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಹಿಲ್ ಅಲಿಯಾಸ್ ರೋಹನ್ ಹಲ್ಲೆ ಮಾಡಿದ ಕೈದಿ.

ಕೈದಿ ರೋಹನ್ ಹಾಸನದಿಂದ ಗಡಿಪಾರಾಗಿ ಬೆಳಗಾವಿ ಹಿಂಡಲಗಾ ಜೈಲಿಗೆ ಶಿಪ್ಟ್ ಆಗಿದ್ದಾನೆ. ಕೈದಿ ರೋಹನ್​ ಅತೀ ಭದ್ರತೆ ವಿಭಾಗದಲ್ಲಿದ್ದಾನೆ. ಜೈಲಿನ ಒಳಗಡೆ ಇರುವ ಆಸ್ಪತ್ರೆಗೆ ತೆರಳಲು ಕೈದಿ ರೋಹನ್ ಸಿಬ್ಬಂದಿ ಬಳಿ ಅನುಮತಿ ಕೇಳುತ್ತಾನೆ. ಸಿಬ್ಬಂದಿ ತಡವಾಗಿ ಅನುಮತಿ ನೀಡುತ್ತಾರೆ. ಇದರಿಂದ ಕೋಪಗೊಂಡ ಕೈದಿ ರೋಹನ್​​, ವಾರ್ಡರ್​​ ವಿನೋದ್​ಗೆ ಕಾಲಿನಿಂದ ಒದ್ದು, ಕೈಯಿಂದ ಹಿಗ್ಗಾಮಗ್ಗಾ ಹೊಡೆದು ಹಲ್ಲೆ ಮಾಡುತ್ತಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ವಾರ್ಡರ್​ ವಿನೋದ್ ಅವರಿಗೆ ಚಿಕಿತ್ಸೆ ನೀಡಲಾಗುತ್ತದೆ.

ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಕೈದಿಗಳ ಗೂಂಡಾಗಿರಿಗೆ ಬೇಸತ್ತು ಕೆಲಸಕ್ಕೆ ಬರಲು ಸಿಬ್ಬಂದಿ ಭಯ ಪಡುತ್ತಿದ್ದಾರೆ. ಈ ಹಿಂದೆಯೂ ಸಿಬ್ಬಂದಿ ಮೇಲೆ‌ 4-5 ಜನ ಕೈದಿಗಳು ಹಲ್ಲೆ ಮಾಡಿದ್ದರು. ಮೇಲಾಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಈಗಲಾದರೂ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹಲ್ಲೆಗೊಳಗಾದ ವಾರ್ಡರ್​ ವಿನೋದ್ ಮನವಿ ಮಾಡಿದ್ದಾರೆ.

ಇದನ್ನೂ : Belagavi Hindalga Central Jail: ಬೆಳಗಾವಿ ಹಿಂಡಲಗಾ ಜೈಲು -ಇಲ್ಲಿ ದುಡ್ಡಿಗೆ ಎಲ್ಲವೂ ಸಿಗುತ್ತೆ!

ಹಿಂಡಲಗಾ ಜೈಲಿನ ಅಕ್ರಮ ಬಿಚ್ಚಿಟ್ಟ ಕೈದಿ

10 ಸಾವಿರ ಕೊಟ್ಟರೆ ಕೀ ಪ್ಯಾಡ್ ಸೆಟ್, 20 ಸಾವಿರ ಕೊಟ್ಟರೆ ಆಂಡ್ರಾಯ್ಡ್ ಪೋನ್ ಸಿಗುತ್ತದೆ. ಹೆಚ್ಚು ಹಣ ಕೊಟ್ಟರೆ ಒಳ್ಳೆಯ ಸೆಲ್ ಮತ್ತು ಟಿವಿ, ಹಾಸಿಗೆ, ಹೊರಗಿನಿಂದ ಊಟ ಕೂಡ ಬರುತ್ತದೆ. ಇದನ್ನು ಪ್ರಶ್ನೆ ಮಾಡಿದರೆ ಅವರ ಮೇಲೆ ಸಿಬ್ಬಂದಿ ಹಾಗೂ ಕೆಲ ಕೈದಿಗಳು ಹಲ್ಲೆ ಮಾಡುತ್ತಾರೆ. ಈ ವಿಚಾರವನ್ನು ಪ್ರಶಾಂತ್ ಮೊಗವೀರ್ ಎಂಬ ಕೈದಿ ಸೆಲ್ಫಿ ವಿಡಿಯೋ ಮಾಡಿ ಎಳೆ ಎಳೆಯಾಗಿ ಬಿಚ್ಚಿಟ್ಟದ್ದನು.

ಇದರ ಜೊತೆಗೆ ಇಬ್ಬರು ಕೈದಿಗಳ ನಡುವೆ ಗಲಾಟೆ ನಡೆದಿತ್ತು. ಇದರಲ್ಲಿ ಸುರೇಶ್ ಎಂಬಾತ ಕೈದಿಗೆ ಶಂಕರ್ ಭಜಂತ್ರಿ ಎಂಬ ಕೈದಿ ಸ್ಕ್ರೂಡ್ರೈವ್ ನಿಂದ ಹಲ್ಲೆ ಮಾಡಿದ್ದನು. ಇದೆಲ್ಲದರ ನಡುವೆ ಕೈದಿ ಜಯೇಶ್ ಪೂಜಾರಿ ಕೇಂದ್ರ ಸಚಿವರಿಗೆ ಕರೆ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದನು. ಹಣ ಕೊಡದಿದ್ರೇ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದನು. ಈ ಪ್ರಕರಣದಲ್ಲಿ ಜೈಲಿನಲ್ಲಿದ್ದುಕೊಂಡೆ ಜಯೇಶ್ ಪೂಜಾರಿ ಪೋನ್ ಬಳಿಸಿದ್ದು ಸಾಭೀತಾಗಿ ನಾಗ್ಫುರ ಪೊಲೀಸರು ಆತನನ್ನ ಕರೆದುಕೊಂಡು ಹೋಗಿದ್ದಾರೆ. ಹೀಗೆ ಪ್ರತಿಯೊಂದರ ವಿಡಿಯೋ ಸಾಕ್ಷಿಗಳ ಸಮೇತ ಟಿವಿ9 ಅಕ್ರಮ ಬಯಲು ಮಾಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:25 am, Tue, 28 May 24