AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಳಿಗಾಲ ಅಧಿವೇಶನ: ಬರಗಾಲ, ಮಹದಾಯಿ, ಉತ್ತರ ಕರ್ನಾಟಕ ಬಗ್ಗೆ ಚರ್ಚೆ: ಬಸವರಾಜ ಹೊರಟ್ಟಿ

ಕುಂದಾನಗರಿ ಬೆಳಗಾವಿಯಲ್ಲಿ ನಾಳೆಯಿಂದ ಚಳಿಗಾಲ ಅಧಿವೇಶನ ಆರಂಭ ಆಗಲಿದೆ. ಈ ಕುರಿತಾಗಿ ಸುವರ್ಣ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ನಾಳೆಯಿಂದ ವಿಧಾನಮಂಡಲ ಅಧಿವೇಶನ ಆರಂಭಗೊಳ್ಳಲಿದೆ. ಡಿ.5 ಮತ್ತು 6ರಂದು ಉತ್ತರ ಕರ್ನಾಟಕ ಸೇರಿದಂತೆ ಬರಗಾಲ, ಮಹದಾಯಿ ಬಗ್ಗೆ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.

ಚಳಿಗಾಲ ಅಧಿವೇಶನ: ಬರಗಾಲ, ಮಹದಾಯಿ, ಉತ್ತರ ಕರ್ನಾಟಕ ಬಗ್ಗೆ ಚರ್ಚೆ: ಬಸವರಾಜ ಹೊರಟ್ಟಿ
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ
Anil Kalkere
| Edited By: |

Updated on:Dec 03, 2023 | 4:35 PM

Share

ಬೆಳಗಾವಿ, ಡಿಸೆಂಬರ್​​ 03: ನಾಳೆಯಿಂದ ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನಮಂಡಲ ಅಧಿವೇಶನ ಆರಂಭಗೊಳ್ಳಲಿದೆ. ಡಿ.5 ಮತ್ತು 6ರಂದು ಉತ್ತರ ಕರ್ನಾಟಕ ಸೇರಿದಂತೆ ಬರಗಾಲ, ಮಹದಾಯಿ ಬಗ್ಗೆ ಚರ್ಚಿಸುತ್ತೇವೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj horatti) ಹೇಳಿದ್ದಾರೆ. ಸುವರ್ಣ ಸೌಧದಲ್ಲಿ ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರ್​ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಚೇರಿಗಳು ಬೆಳಗಾವಿಗೆ ಶಿಫ್ಟ್ ಆಗಬೇಕಿತ್ತು ಆದರೆ ಆಗಿಲ್ಲ. ಐಎಎಸ್​​ ಅಧಿಕಾರಿಗಳು ಬೆಳಗಾವಿಗೆ ಬರುವುದಕ್ಕೆ ಮನಸ್ಸು ಮಾಡುತ್ತಿಲ್ಲ. ಬೆಳಗಾವಿಗೆ ಬರದ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಿಷ್ಟು

ಸ್ಪೀಕರ್ ಯು.ಟಿ ಖಾದರ್​ ಮಾತನಾಡಿ, ನಾಳೆ‌ಯಿಂದ 16ನೇ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದೆ. ಶನಿವಾರ, ಭಾನುವಾರ ರಜೆ ಇರುತ್ತೆ. ವಿಧಾನಮಂಡಲದ ಅಧಿವೇಶಕ್ಕೆ ಬರುವ ಶಾಸಕರು, ಪತ್ರಕರ್ತರು ಹಾಗೂ ಅಧಿಕಾರಿಗಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ. ಅಧಿಕಾರಿ ವರ್ಗದವರಿಗೂ ವ್ಯವಸ್ಥೆ ಮಾಡಲಾಗಿದೆ. ಉತ್ತಮವಾದ ಊಟದ ವ್ಯವಸ್ಥೆ ಮತ್ತು ಅಗತ್ಯ ಇರುವ ವಾತಾವರಣ ನೀಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ಸುವರ್ಣಸೌಧಕ್ಕೆ ವಿದ್ಯುತ್ ದೀಪಾಲಂಕಾರ

ವಿಧಾನಮಂಡಲ ನಡೆಯುವ ವೇಳೆ ಅಧಿಕಾರಿಗಳು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಮತ್ತಷ್ಟು ಚೆನ್ನಾಗಿ ಅಧಿವೇಶನ ನಡೆಸುವ ಹಿನ್ನೆಲೆಯಲ್ಲಿ ಆಹಾರ ಮತ್ತು ವಸತಿ ವಿಚಾರವಾಗಿ ಹೆಚ್ಚಿನ ಗುಣಮಟ್ಟದ ವ್ಯವಸ್ಥೆ ಕಲ್ಪಿಸಲಾಗಿದೆ. ಹಟ್ಟಿ ಕಾಫಿ ಎಂಬ ಕೆಫೆ ತೆರೆದಿದ್ದೇವೆ. ವಿಧಾನಸಭೆ ಸೌಂದರ್ಯ ಹೆಚ್ಚಿಸಲು ಶಾಶ್ವತವಾಗಿ ಎಲ್​ಇಡಿ ವ್ಯವಸ್ಥೆ ಮಾಡಲಾಗಿದೆ. ಈ‌ ಹಿಂದೆ ಅಧಿವೇಶನದಲ್ಲಿ ಮಾತ್ರ 15 ದಿನ ಅಳವಡಿಕೆ ಮಾಡಲಾಗಿತ್ತು. ಇನ್ಮುಂದೆ ಪ್ರತಿ ಶನಿವಾರ, ಭಾನುವಾರ ವಿದ್ಯುತ್ ದೀಪಗಳಿಂದ ಅಲಂಕರಿಸಾಗುತ್ತೆ. ರಾಷ್ಟ್ರೀಯ ಹಬ್ಬಗಳ ದಿನದಂದು ಸುವರ್ಣಸೌಧದ ವಿದ್ಯುತ್ ದೀಪಗಳಿಂದ ಕಂಗೊಳಿಸಲಿದೆ ಎಂದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: MES ಮಹಾಮೇಳಕ್ಕೆ ಪೊಲೀಸ್ ಆಯುಕ್ತರಿಂದ ಅನುಮತಿ ನಿರಾಕರಣೆ

ಶಾಲಾ ಮಕ್ಕಳು ಬಂದ ತಕ್ಷಣ ಆಡಿಟೋರಿಯಂ ಹಾಲ್​ನಲ್ಲಿ ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿಗಳು ಕಾಯುವ ಅವಶ್ಯಕತೆ ಇಲ್ಲ. ಸಂವಿಧಾನ ಪೀಠಿಕೆ ವಿಚಾರವಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ತಿಳಿಸಿಕೊಡಲಾಗುತ್ತೆ. ಹಿಂದೆ 10 ನಿಮಿಷ ಮಾತ್ರ ಕೂರಲು ಅವಕಾಶ ಇರುತ್ತಿತ್ತು. ಹೀಗಾಗಿ ಮಕ್ಕಳಿಗೆ 30 ನಿಮಿಷ ಅವಕಾಶ ಹೆಚ್ಚಿಸಲಾಗಿದೆ. ಮಕ್ಕಳಿಗೆ ಚಾಕಲೇಟ್ ಹಾಗೂ ತಂಪುಪಾನಿಯ ವಿತರಿಸಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

ಸುವರ್ಣ ಸಂಭ್ರಮದ ಕಾಲಘಟ್ಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಅಧಿವೇಶನ ಪ್ರಾರಂಭವಾಗುವವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಡಿ. 12 ರಂದು ಸುವರ್ಣ ಸಂಭ್ರಮದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಆಳ್ವಾಸ್ ವಿದ್ಯಾಸಂಸ್ಥೆಯಿಂದ‌ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:34 pm, Sun, 3 December 23