30 ವರ್ಷ ಹಿಂದೆ 500 ರೂ ಲಂಚ ಪಡೆದಿದ್ದ ಗ್ರಾಮ ಲೆಕ್ಕಾಧಿಕಾರಿಗೆ ನಿವೃತ್ತಿಯಾದ 10 ವರ್ಷದ ಬಳಿಕ ಜೈಲು!

ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ 2006ರಲ್ಲಿ 500 ರೂ ಲಂಚ ಪಡೆದ ಆರೋಪದ ಮೇಲೆ 10 ವರ್ಷಗಳ ಬಳಿಕ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಲೋಕಾಯುಕ್ತ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರುದಾರ ಮೃತಪಟ್ಟ ಐದು ವರ್ಷಗಳ ನಂತರ ಇದೀಗ ತೀರ್ಪು ಪ್ರಕಟವಾಗಿದೆ.

30 ವರ್ಷ ಹಿಂದೆ 500 ರೂ ಲಂಚ ಪಡೆದಿದ್ದ ಗ್ರಾಮ ಲೆಕ್ಕಾಧಿಕಾರಿಗೆ ನಿವೃತ್ತಿಯಾದ 10 ವರ್ಷದ ಬಳಿಕ ಜೈಲು!
ನಾಗೇಶ್ ಶಿವಂಗೇಕರ್ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ
Edited By:

Updated on: Jun 20, 2025 | 1:20 PM

ಬೆಳಗಾವಿ, ಜೂನ್​ 20: 30 ವರ್ಷ ಹಿಂದೆ ಪಡೆದಿದ್ದ 500 ರೂ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ  ನಿವೃತ್ತಿಯಾಗಿ 10 ವರ್ಷದ ಬಳಿಕ ಗ್ರಾಮ ಲೆಕ್ಕಾಧಿಕಾರಿ (village accountant) ಜೈಲು (jail) ಪಾಲಾಗಿರುವಂತಹ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ನಾಗೇಶ್ ಶಿವಂಗೇಕರ್ ಜೈಲು ಪಾಲದ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ. ಇದೇ ಪ್ರಕರಣದಲ್ಲಿ ಇನ್ನೊಂದು ವಿಚಿತ್ರವೆಂದರೆ ದೂರುದಾರ ಕೂಡ ಮೃತಪಟ್ಟು ಐದು ವರ್ಷವಾಗಿದೆ.

500 ರೂ. ಲಂಚ ಪಡೆಯುವಾಗ ಲೋಕಾ ದಾಳಿ

ನಾಗೇಶ್ ಶಿವಂಗೇಕರ್​ 30 ವರ್ಷ ಹಿಂದೆ ಪಹಣಿ ಪತ್ರದಲ್ಲಿ ವಾಟ್ನಿ ಮಾಡಿ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಲಕ್ಷ್ಮಣ ಕಟಾಂಬಳೆ ಎಂಬುವರಿಂದ ಲೋಕಾಯುಕ್ತಕ್ಕೆ ದೂರು ನೀಡಿದ್ದರು. 500 ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು.

ಇದನ್ನೂ ಓದಿ: ಬೆಳಗಾವಿ: ಕಾರ್​ ಮೇಲೆ ಉರುಳಿ ಬಿದ್ದ ಭಾರೀ ಗಾತ್ರದ ಮರ, ದೂಷಣೆ ಧಾರಾಕಾರವಾಗಿ ಸುರಿದ ಮಳೆಗೆ

ಇದನ್ನೂ ಓದಿ
ನರೇಗಾ ಬಿಲ್ ಪಡೆಯಲು ಸೀರೆ ಉಟ್ಟ ಗಂಡು: ಹಣಕ್ಕಾಗಿ ಅವನು ಅವಳಾದ ಕತೆ!
ಮೈಶುಗರ್ ಶಾಲೆ ಮೇಲೆ ಖಾಸಗಿ ಕಣ್ಣು: ಆಸ್ತಿ ಕಬಳಿಸಲು ಹುನ್ನಾರ ಆರೋಪ
ಡ್ರಂಕ್ ಆ್ಯಂಡ್ ಡ್ರೈವ್, ಅತಿವೇಗದ ಚಾಲನೆಯಿಂದ ಅಪಘಾತ: ಇಬ್ಬರ ಸಾವು
ಬೆಂಗಳೂರಿನ 17 ಕ್ಕೂ ಹೆಚ್ಚು ಡ್ಯಾನ್ಸ್ ಬಾರ್​ಗಳ ಮೇಲೆ ಪೊಲೀಸರಿಂದ ದಾಳಿ

2006ರಲ್ಲಿ ಗ್ರಾಮ ಲೆಕ್ಕಾಧಿಕಾರಿಗೆ ಒಂದು ವರ್ಷ ಜೈಲು ಮತ್ತು 1 ಸಾವಿರ ರೂ ದಂಡ ವಿಧಿಸಲಾಗಿತ್ತು. ಬಳಿಕ ಧಾರವಾಡ ಹೈಕೋರ್ಟ್ ‌ಮೋರೆ ಹೋಗಿದ್ದ ನಾಗೇಶ್ ಶಿವಂಗೇಕರ್​ಗೆ ರಿಲೀಫ್ ಸಿಕ್ಕಿತ್ತು. ಆದರೆ ಹೈಕೋರ್ಟ್ ‌ಆದೇಶ ಪ್ರಶ್ನಿಸಿ ಲೋಕಾಯುಕ್ತ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು.

ಇಂದು ಸುಪ್ರೀಂ ಕೋರ್ಟ್​ದಿಂದ ಲೋಕಾಯುಕ್ತ ಪರ ತೀರ್ಪು ಪ್ರಕಟವಾಗಿದ್ದು, ಕೆಲಸದಿಂದ ನಿವೃತ್ತಯಾಗಿ 10 ವರ್ಷದ ಬಳಿಕ ಆರೋಪಿ ಮತ್ತೆ ಜೈಲು ಪಾಲಾಗಿದ್ದಾರೆ. ಸದ್ಯ ಬೆಳಗಾವಿ ಹಿಂಡಲಗಾ ಜೈಲಿಗೆ ನಾಗೇಶ್ ಶಿವಂಗೇಕರ್​​ನ್ನು ಲೋಕಾಯುಕ್ತ ಪೊಲೀಸರು ರವಾನಿಸಿದ್ದಾರೆ.

ಅಕ್ರಮ ವ್ಯವಹಾರ ಆರೋಪ: ಲೋಕಾಯುಕ್ತ ದಾಳಿ

ಇನ್ನು ಇತ್ತೀಚೆಗೆ ರಾಮನಗರದ ತಾಲೂಕು ಕಚೇರಿಗಳಲ್ಲಿ ಅಕ್ರಮ ವ್ಯವಹಾರ ಆರೋಪದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಐದು ತಾಲೂಕು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಾಕಾಲಕ್ಕೆ ದಾಳಿ ನಡೆಸಿ ಕಡತಗಳ ಪರಿಶೀಲನೆ ಮಾಡಲಾಗಿತ್ತು.

ಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆ ವಾಕ್​ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿಲ್ಲ, ಅದರೆ ಅವರು ಸುಳ್ಳಿನ ಚಕ್ರವರ್ತಿ ಅಂತ ಗೊತ್ತು: ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಹಾಗೂ ಹಾರೋಹಳ್ಳಿ ತಾಲೂಕು ಕಚೇರಿಗಳ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಲಳು ಪರಿಶೀಲನೆ ಮಾಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.