AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆತ್ತಲೆ ಮಾಡಿ, ಕರೆಂಟ್​​ ಶಾಕ್​​ ಕೊಟ್ಟು ಹಿಂಸೆ: ಬದುಕಿರುವಾಗಲೇ ನರಕ ನೋಡಿ ಪ್ರಾಣಬಿಟ್ಟ ಮಹಿಳೆ

ಶೀಲ ಶಂಕಿಸಿ ಪತ್ನಿಯನ್ನೇ ಪತಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿರುವ ಅಮಾನವೀಯ ಘಟನೆ ಬೆಳಗಾವಿಯ ಖಾನಾಪುರದಲ್ಲಿ ನಡೆದಿದೆ. ಕರೆಂಟ್ ಶಾಕ್, ಲಟ್ಟಣಿಗೆಯಿಂದ ಹಲ್ಲೆ ಮಾಡಿ, ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಆರೋಪಿ ಪತ್ನಿಯನ್ನು ಹಿಂಸಿಸಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಆರೋಪಿ ಪತಿಯನ್ನು ಬಂಧಿಸಲಾಗಿದ್ದು, ದಂಪತಿಯ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.

ಬೆತ್ತಲೆ ಮಾಡಿ, ಕರೆಂಟ್​​ ಶಾಕ್​​ ಕೊಟ್ಟು ಹಿಂಸೆ: ಬದುಕಿರುವಾಗಲೇ ನರಕ ನೋಡಿ ಪ್ರಾಣಬಿಟ್ಟ ಮಹಿಳೆ
ಮೃತ ಕಿರಣಾ ಮತ್ತು ಆರೋಪಿ ಅವಿನಾಶ್​​
Sahadev Mane
| Edited By: |

Updated on: Jan 22, 2026 | 5:53 PM

Share

ಬೆಳಗಾವಿ, ಜನವರಿ 22: ಪತ್ನಿ ಶೀಲದ ಮೆಲೆ ಶಂಕಿಸಿ ಆಕೆಯ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿ ಪತ್ತಿಯೇ ಆಕೆಯನ್ನು ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಾಪೋಲಿ ಗ್ರಾಮದಲ್ಲಿ ನಡೆದಿದೆ. ಕಿರಣಾ ಮೃತ ಮಹಿಳೆಯಾಗಿದ್ದು, ಆರೋಪಿ ಅವಿನಾಶ್​​ನನ್ನು ಪೊಲೀಸರು ಬಂಧಿಸಿದ್ದಾರೆ. ಪತಿಯನ್ನು ಮರ್ಡರ್​​ ಮಾಡಿ ಬಳಿಕ ಏನೂ ಗೊತ್ತಿಲ್ಲದಂತೆ ಡ್ರಾಮಾ ಮಾಡಿದ್ದ ಅವಿನಾಶ್​​, ಹೃದಯಾಘಾತದಿಂದ ಕಿರಣಾ ಮೃತಪಟ್ಟಿರೋದಾಗಿ ಎಲ್ಲರನ್ನ ನಂಬಿಸಿದ್ದ. ಆದ್ರೆ ಮೃತದೇಹದ ಸ್ನಾನ ಮಾಡಿಸುವ ವೇಳೆ ಅಸಲೀ ಸತ್ಯ ರಿವೀಲ್​​ ಆಗಿದೆ.

ಅವಿನಾಶ್​​ ಮತ್ತು ಕಿರಣಾ ದಂಪತಿ ಗ್ರಾಮದಲ್ಲಿ ಅಂಗಡಿ ಹೊಂದಿದ್ದು, ಅದುವೇ ಜೀವನಕ್ಕೆ ಪ್ರಮುಖ ಆಧಾರವಾಗಿತ್ತು. ಕಳೆದ 12 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿ ಅನ್ಯೋನ್ಯವಾಗಿದ್ದು, ಇಬ್ಬರು ಮುದ್ದಾದ ಮಕ್ಕಳು ಕೂಡ ಇದಕ್ಕೆ ಸಾಕ್ಷಿಯಾಗಿದ್ದರು. ಆದರೆ, ಕೆಲ ತಿಂಗಳುಗಳಿಂದ ಅವಿನಾಶ್​​ ಮನಸ್ಸಿನಲ್ಲಿ ಪತ್ನಿಯ ಬಗ್ಗೆ ಸಂಶಯ ಮೂಡಿದೆ. ಇದೇ ವಿಚಾರಕ್ಕೆ ಮನೆಯಲ್ಲಿ ನಿತ್ಯ ಜಗಳ ಆಗುತ್ತಿತ್ತು. ಅಂಗಡಿ ಅಂದಮೇಲೆ ಜನ ಬರೋದು ಹೋಗೋದು ಸಾಮಾನ್ಯ. ಆದರೆ ಇದನ್ನೇ ದೊಡ್ಡದು ಮಾಡಿ ಅವಿನಾಶ್​​ ಜಗಳವಾಡುತ್ತಿದ್ದ. ಎರಡು ದಿನ ಹಿಂದೆ ಇದೇ ವಿಚಾರಕ್ಕೆ ಪತ್ನಿಯ ಮೇಲೆ ಹಲ್ಲೆ ಕೂಡ ಮಾಡಿದ್ದ. ಈ ವೇಳೆ ಅಲ್ಲಿಗೆ ಬಂದ ಕುಟುಂಬದ ಹಿರಿಯರು ದಂಪತಿ ಸಮಾಧಾನ ಮಾಡಿ ಹೋಗಿದ್ರು. ಹಿರಿಯರು ಹೋದ ಬಳಿಕ ಮೊನ್ನೆ ಮಧ್ಯರಾತ್ರಿ ಕಿರಣಾಳ ಮೇಲೆ ಪತಿ ತೀವ್ರವಾಗಿ ಹಲ್ಲೆ ಮಾಡಿದ್ದು, ಈ ವೇಳೆ ಆಕೆ ಪ್ರಾಣ ಬಿಟ್ಟಿದ್ದಾಳೆ.

ಇದನ್ನೂ ಓದಿ: ಧಾರವಾಡ ಝಕಿಯಾ ಮುಲ್ಲಾ ಕೊಲೆ ಕೇಸಿಗೆ ಬಿಗ್ ಟ್ವಿಸ್ಟ್; ಮದ್ವೆ ಆಗಬೇಕಿದ್ದವನೇ ಹಂತಕ!

ಆಕೆ ಸಾಯುತ್ತಿದ್ದಂತೆ ಮೃತ ದೇಹವನ್ನುತೆ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದ ಅವಿನಾಶ್​​, ಬಳಿಕ ಮತ್ತೆ ಊರಿಗೆ  ಶವ ತಂದು ಪತ್ನಿ ಹೃದಯಾಘಾತದಿಂದ ಸತ್ತಿದ್ದಾಳೆ ಎಂದು ಬಿಂಬಿಸಿದ್ದಾನೆ. ಈ ವೇಳೆ ಮಹಿಳೆಯರು ಶವಕ್ಕೆ ಸ್ನಾನ ಮಾಡಿಸಬೇಕು ಅಂತಾ ಬಟ್ಟೆ ತೆಗೆದಾಗ ಪಾಪಿ ಗಂಡನ ಕ್ರೌರ್ಯ ಬಯಲಾಗಿದೆ. ಕಿರಣಾ ಮೈ ತುಂಬ ಬಾಸುಂಡೆ ಬಂದಿದ್ದು, ಕಪ್ಪು ಕಲೆ ಕಂಡು ಮಹಿಳೆಯರು ಶಾಕ್​​ ಆಗಿದ್ದಾರೆ. ಬಳಿಕ ಗಂಡನೇ ಹೊಡೆದು ಪತ್ನಿಯನ್ನು ಕೊಂದಿದ್ದಾನೆ ಎಂದು ನಂದಗಡ ಠಾಣೆ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಪತಿಯನ್ನು ವಶಕ್ಕೆ ಪಡೆದಿದ್ದಾರೆ.

ಈತ ಪತಿಯಲ್ಲ ರಾಕ್ಷಸ!

ಕಿರಣಾಳ ಜೊತೆ ಪತಿ ಅವಿನಾಶ್​​ ರಾಕ್ಷಸೀಯ ವರ್ತನೆ ತೋರಿದ್ದು, ವಿದ್ಯುತ್ ಶಾಕ್ ಕೊಟ್ಟಿದ್ದಾನೆ. ಸಾಲದ್ದಕ್ಕೆ ಲಟ್ಟಣಿಗೆಯಿಂದ ಹಲ್ಲೆ ಮಾಡಿದ್ದಾನೆ. ಮಕ್ಕಳ ಮುಂದೆಯೇ ಆಕೆಯನ್ನು ಬೆತ್ತಲೆ ಮಾಡಿ ಹಿಂಸೆ ಕೊಟ್ಟಿದ್ದಾನೆ ಎನ್ನಲಾಗಿದೆ. ಅಲ್ಲದೆ, ಕಿರಣಾ ಮೃತದೇಹವನ್ನು ಬೆಳಗಾವಿ ಬೀಮ್ಸ್ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಇದರ ಪ್ರಾಥಮಿಕ ವರದಿಯಲ್ಲಿಯೂ ಕೊಲೆ ಎಂಬುದು ದೃಢವಾಗಿದೆ. ವಿಚಾರಣೆ ವೇಳೆ ಪತ್ನಿಯನ್ನು ಕೊಲೆಗೈದ ಬಗ್ಗೆ ಅವಿನಾಶ್​​ ಕೂಡ ಒಪ್ಪಿಕೊಂಡಿದ್ದು, ಆರೋಪಿಯನ್ನು ಬಂಧಿಸಿ ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ. ಅಮ್ಮ ಮೃತಪಟ್ಟರೆ ಇತ್ತ ಅಪ್ಪ ಜೈಲಿಗೆ ಹೋಗಿದ್ದರಿಂದ ದಂಪತಿಯ ಇಬ್ಬರು ಮಕ್ಕಳೀಗ ಅನಾಥವಾಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.