ಸಿಟಿ ರವಿ ಅಶ್ಲೀಲ ಪದ ಬಳಕೆ: ಸದನದಲ್ಲಿ ನಡೆದಿದ್ದೇನು? ಹೆಬ್ಬಾಳ್ಕರ್​ ಹೇಳಿದ್ದಿಷ್ಟು

|

Updated on: Dec 20, 2024 | 11:54 AM

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ಕರ್ನಾಟಕದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಗುರುವಾರ ವಿಧಾನ ಪರಿಷತ್ ಸಭೆಯನ್ನು 10 ನಿಮಿಷ ಮುಂದೂಡಿದ ಬಳಿಕ ಮತ್ತು ನಡೆದ ಘಟನೆ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ತಿಳಿಸಿದ್ದಾರೆ.

ಬೆಳಗಾವಿ, ಡಿಸೆಂಬರ್​ 20: ಎಂಎಲ್​ಸಿ ಸಿಟಿ ರವಿ (CT Ravi) ಅಶ್ಲೀಲ ಪದ ಬಳಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಅವರು ಸುದ್ದಿಗೋಷ್ಠಿ ನಡೆಸಿ ಗುರುವಾರ ಪರಿಷತ್​ನಲ್ಲಿ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ. “ಬಿಆರ್ ಅಂಬೇಡ್ಕರ್​ ಅವರ ಕುರಿತಾಗಿ ಕೇಂದ್ರ ಸಚಿವ ಅಮಿತ್​ ಶಾ ಅವರ ಹೇಳಿಕೆಯನ್ನು ವಿರೋಧಿಸಿ ಪರಿಷತ್​ನಲ್ಲಿ ಧರಣಿ ಮಾಡಿ ಕುಳಿತುಕೊಂಡ್ವಿ. ಸಭಾಪತಿಗಳು ಅಧಿವೇಶನವನ್ನು 10 ನಿಮಿಷ ಮುಂದೂಡಿದರು. ​ಈ ವೇಳೆ ಸಿಟಿ ರವಿಯವರು ರಾಹುಲ್​ ಗಾಂಧಿ ಅವರಿಗೆ ಡ್ರಗ್​ ಎಡಿಕ್ಟ್​​ ರಾಹುಲ್​ ಗಾಂಧಿ ಅಂತ 3-4 ಬಾರಿ ಹೇಳಿದರು. ಅದಕ್ಕೆ ನಾನು, ಸಿಟಿ ರವಿ ಕೊಲೆಗಾರ ಅಂದೆ. ಇದಕ್ಕೆ ಪ್ರತಿಯಾಗಿ ಸಿಟಿ ರವಿಯವರು ಅಶ್ಲೀಲ ಪದ ಬಳಸಿದರು. ಸಿ.ಟಿ.ರವಿ ಒಮ್ಮೆಯಲ್ಲ, 10 ಬಾರಿ ಹೇಳಿ ತೇಜೋವಧೆ ಮಾಡಿದರು” ಎಂದು ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದರು.

ಆ ಕೆಟ್ಟ ಪದವನ್ನು ನನ್ನ ಬಾಯಿಯಿಂದ ಹೇಳುವುದಕ್ಕೆ ಕಷ್ಟ ಆಗುತ್ತಿದೆ. ಅಶ್ಲೀಲ ಪದವನ್ನು ಬಿಜೆಪಿಯವರೇ ಕೇಳಿಸಿಕೊಂಡಿದ್ದರು. ಅಶ್ಲೀಲ ಪದ ಕೇಳಿಸಿಕೊಂಡು ಕೆಲವರು ಕಿವಿಯಲ್ಲಿ ಸಾರಿ ಹೇಳಿದರು. ನಾನು ಇನ್ನೂ ಆಘಾತದಲ್ಲಿ ಇದ್ದೇನೆ ಎಂದು ಕಣ್ಣೀರು ಹಾಕಿದರು.