AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

180ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ, ಪಾಕ್ ವಲಸಿಗರ ಬಂಧನ, ಗಡಿಪಾರಿಗೆ ವಿಶೇಷ ಕಾರ್ಯಪಡೆ: ಪರಮೇಶ್ವರ್

ಕೆಲವೇ ತಿಂಗಳುಗಳ ಹಿಂದಷ್ಟೇ ಚಿತ್ರದುರ್ಗ ಹಾಗೂ ಬೆಂಗಳೂರಿನಲ್ಲಿ ಹತ್ತಕ್ಕೂ ಹೆಚ್ಚು ಅಕ್ರಮ ಬಾಂಗ್ಲಾದೇಶ ವಲಸಿಗರ ಹಾಗೂ ಕೆಲವು ಮಂದಿ ಪಾಕಿಸ್ತಾನೀಯರ ಬಂಧನವಾಗಿತ್ತು. ಇಂಥ ಅಕ್ರಮ ವಲಸಿಗರು ರಾಜ್ಯದ ಹಾಗೂ ದೇಶದ ಭದ್ರತೆಗೆ ಸವಾಲಾಗಿ ಪರಿಣಮಿಸುತ್ತಿದ್ದಾರೆ. ಹೀಗಾಗಿ ಇದೀಗ ಕರ್ನಾಟಕ ಸರ್ಕಾರ, ಅಕ್ರಮ ವಲಸಿಗರನ್ನು ಪತ್ತೆ ಮಾಡಿ ಗಡಿಪಾರು ಮಾಡಲು ವಿಶೇಷ ಕಾರ್ಯಪಡೆ ಘೋಷಣೆ ಮಾಡಿದೆ.

180ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ, ಪಾಕ್ ವಲಸಿಗರ ಬಂಧನ, ಗಡಿಪಾರಿಗೆ ವಿಶೇಷ ಕಾರ್ಯಪಡೆ: ಪರಮೇಶ್ವರ್
ಗೃಹ ಸಚಿವ ಡಾ. ಜಿ ಪರಮೇಶ್ವರ
Ganapathi Sharma
|

Updated on: Dec 20, 2024 | 10:35 AM

Share

ಬೆಳಗಾವಿ, ಡಿಸೆಂಬರ್ 20: ಅಕ್ರಮ ಬಾಂಗ್ಲಾ ವಲಸಿಗರು ಕರ್ನಾಟಕಕ್ಕೆ ಹಾಗೂ ದೇಶಕ್ಕೆ ಅಪಾಯಕರವಾಗಿದ್ದು, ಅವರನ್ನು ಗುರುತಿಸಿ ಗಡಿಪಾರು ಮಾಡಲು ವಿಶೇಷ ಕಾರ್ಯಪಡೆ ರಚಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಬಿಜೆಪಿ ಸದಸ್ಯ ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಾವಿರಾರು ಅಕ್ರಮ ವಲಸಿಗರು ಭಾರತಕ್ಕೆ ಆಗಮಿಸುಸುತ್ತಿದ್ದಾರೆ ಮತ್ತು ದೇಶದ ವಿವಿಧ ಭಾಗಗಳಿಗೆ ತೆರಳುತ್ತಾರೆ ಎಂದಿದ್ದಾರೆ.

ಅಕ್ರಮ ಬಾಂಗ್ಲಾ ವಲಸಿಗರನ್ನು ತಡೆಯುವ ನಿಟ್ಟಿನಲ್ಲಿ ನಮ್ಮ ರಕ್ಷಣಾ ಸಿಬ್ಬಂದಿ ಶ್ರಮ ವಹಿಸುತ್ತಿದ್ದಾರೆ. ಅದರ ಹೊರತಾಗಿಯೂ, ಅವರು ಭಾರತವನ್ನು ಪ್ರವೇಶಿಸುತ್ತಾರೆ. ಅವರನ್ನು ಗುರುತಿಸಲು ವಿಶೇಷ ಕಾರ್ಯಪಡೆ ರಚಿಸಿದ್ದೇವೆ. ಪ್ರತಿ ವರ್ಷ ಸಾವಿರಾರು ಜನರನ್ನು ಗಡೀಪಾರು ಮಾಡಲಾಗುತ್ತಿದೆ. ಇಲ್ಲಿಯವರೆಗೆ, ಅಕ್ರಮವಾಗಿ ನೆಲೆಸಿದ್ದ 159 ಬಾಂಗ್ಲಾದೇಶಿ ಪ್ರಜೆಗಳು ಮತ್ತು 24 ಪಾಕಿಸ್ತಾನೀಯರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಬಾಂಗ್ಲಾದೇಶದ 115 ಜನರು ನಕಲಿ ದಾಖಲೆಗಳೊಂದಿಗೆ ಅಕ್ರಮವಾಗಿ ನೆಲೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲಿ ಇಂತಹ ಎಷ್ಟು ಅಕ್ರಮ ವಲಸಿಗರು ನೆಲೆಸಿದ್ದಾರೆ ಎಂದು ಬಿಜೆಪಿಯ ಅರುಣ್ ಪ್ರಶ್ನಿಸಿದ್ದಾರೆ. ಅಲ್ಲದೆ, ಚಿತ್ರದುರ್ಗದಲ್ಲಿ ಆರು ಮಂದಿಯ ಬಂಧನದಿಂದ ಕರ್ನಾಟಕದ ಹೋಂಸ್ಟೇ ಮತ್ತು ರೆಸಾರ್ಟ್‌ಗಳು ಅಕ್ರಮ ವಲಸಿಗರಿಗೆ ಸ್ವರ್ಗವಾಗಿ ಪರಿಣಮಿಸಿರುವುದು ತಿಳಿದುಬಂದಿದೆ ಎಂದಿದ್ದಾರೆ.

ಅಕ್ರಮ ವಲಸಿಗರು ಡ್ರಗ್ ಪೆಡ್ಲಿಂಗ್ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಾರೆ ಎಂದೂ ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಸಿಟಿ ರವಿ ಬಂಧನ: ರಕ್ತ ಸೋರುತ್ತಿದ್ದರೂ ರಾತ್ರಿಯೆಲ್ಲ ಕಾರಿನಲ್ಲೇ ಊರೂರು ಸುತ್ತಾಡಿಸಿದ ಪೊಲೀಸರು!

ಬಾಂಗ್ಲಾದೇಶಿ ಪ್ರಜೆಗಳನ್ನು ಗುರುತಿಸಿ ಗಡಿಪಾರು ಮಾಡಲು ವಿಶೇಷ ಪಡೆ ರಚಿಸಲಾಗಿದೆ. ಬಾಂಗ್ಲಾದೇಶಿ ವಲಸಿಗರು ಮಾತ್ರವಲ್ಲ, ಅಧ್ಯಯನಕ್ಕೆ ಬರುವ ಕೆಲವು ಆಫ್ರಿಕನ್ನರು ಸಹ ಅದೇ ರೀತಿ ನಾಪತ್ತೆಯಾಗಿದ್ದಾರೆ ಎಂದು ಪರಮೇಶ್ವರ ಸದನಕ್ಕೆ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ