ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವಿನ ಗಡಿ ವಿವಾದ (Karnataka-Maharashtra border dispute) ತೀರ್ವ ಸ್ವರೂಪ ಪಡೆದಿದ್ದು, ಬೆಳಗಾವಿ (Belagavi) ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿಯಲ್ಲಿ ಎಂಇಎಸ್ (MES) ಈ ವಿಚರವಾಗಿ ಆಗಾಗ ತಕರಾರು ತೆಗೆಯುತ್ತಿರುತ್ತದೆ. ಅಲ್ಲದೇ ಕಳೆದ ಕೆಲವು ದಿನಗಳ ಹಿಂದೆ ಕರ್ನಾಟಕದ ಬಸ್ಗಳಿಗೆ (Karnataka Bus) ಮಸಿ ಬಳಿದು ಕ್ಯಾತೆ ತೆಗೆದಿತ್ತು. ಈಗ ಮತ್ತೆ ಮಹಾರಾಷ್ಟ್ರ ವಿಕಾಸ್ ಅಘಾಡಿ, ಮಹಾರಾಷ್ಟ್ರ ಏಕೀಕರಣ ಸಮಿತಿ ಇಂದು (ಡಿ.10) ಕರ್ನಾಟಕ-ಮಹಾರಾಷ್ಟ್ರ ಗಡಿಗೆ ಅಂಟಿಕೊಂಡಿರುವ ಕೊಲ್ಹಾಪುರದ (kollapur) ಶಾಹು ಮಹಾರಾಜ ಸಮಾಧಿ ಸ್ಥಳ ಬಳಿ ಬ್ರಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದವು.
ಇದರಿಂದ ಕರ್ನಾಟಕ ಬಸ್ಗಳಿಗೆ ಹಾನಿಯಾಗುವ ಸಾಧ್ಯತೆ ಹಿನ್ನೆಲೆ ಸೂಕ್ತ ಭದ್ರತೆ ಒದಗಿಸುವುದಾಗಿ ಪೊಲೀಸ್ ಇಲಾಖೆ ಭರವಸೆ ನೀಡಿದೆ. ಈ ಸಂಬಂಧ ಕೋಗನಹಳ್ಳಿ ಚೆಕ್ಪೋಸ್ಟ್ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಕೋಲ್ಹಾಪುರ ಜಿಲ್ಲೆಯಲ್ಲಿ ನೀತಿಸಂಹಿತೆ ಜಾರಿ
ಆದರೆ ಕೋಲ್ಹಾಪುರ ಜಿಲ್ಲೆಯ 12 ತಾಲೂಕಿನ ಗ್ರಾಮ ಪಂಚಾಯತಿ ಚುನಾವಣೆ ಹಿನ್ನಲೆ ನೀತಿ ಸಂಹಿತೆ ಜಾರಿಯಾಗಿದೆ. ಇದರಿಂದ ಮಾರಾಠಿಗರ ಪ್ರತಿಭಟನೆಗೆ ಹಿನ್ನಡೆಯಾಗಿದೆ. ಇನ್ನೂ ಡಿಸೆಂಬರ್ 18 ರಂದು ಚುನಾವಣೆ ನಡೆಯಲಿದೆ. ಈ ಸಂಬಂಧ ಡಿ. 9 ರಿಂದ 23 ರವರೆಗೆ ನೀತಿ ಸಂಹಿತೆ ಜಾರಿ ಮಾಡಲಾಗಿದೆ. ಹೀಗಾಗಿ ಪ್ರತಿಭಟನೆ ನಡೆಸದಂತೆ ಪೊಲೀಸ್ ಇಲಾಖೆ ಖಡಕ್ ಸೂಚನೆ ನೀಡಿದೆ.
ಅಲ್ಲದೇ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಹಾರಾಷ್ಟ್ರ ಪೊಲೀಸ್ ಅಧಿನಿಯಮ 1951 ಪ್ರಕಾರ ಕೋಲ್ಹಾಪುರ ಪೊಲೀಸ್ ಇಲಾಖೆ ಖಡಕ್ ಆದೇಶ ಜಾರಿಗೊಳಿಸಿದೆ. ಖಡಕ್ ಆದೇಶದ ಮಧ್ಯೆಯೂ ಮರಾಠಿಗರು ಪ್ರತಿಭಟನೆ ತಯಾರಿಯಲ್ಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ