ಇಬ್ಬರ ಕೊಲೆ ಮಾಡಿದ್ದ ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಪ್ರಕಟ ಮಾಡಿದ ಚಿಕ್ಕೋಡಿ ನ್ಯಾಯಾಲಯ
ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ಚಿಕ್ಕೋಡಿ ನ್ಯಾಯಾಲಯದ ನ್ಯಾಯಾದೀಶ ಎಸ್.ಎಲ್ ಚವ್ಹಾಣ ಗಲ್ಲು ಶಿಕ್ಷೆ ಪ್ರಕಟಿಸಿದ್ದಾರೆ.
ಬೆಳಗಾವಿ: ಜೋಡಿ ಕೊಲೆ (Double Marder) ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ಚಿಕ್ಕೋಡಿ ನ್ಯಾಯಾಲಯದ (Chikkodi court) ನ್ಯಾಯಾಧೀಶ ಎಸ್.ಎಲ್ ಚವ್ಹಾಣ ಗಲ್ಲು ಶಿಕ್ಷೆ ಪ್ರಕಟಿಸಿದ್ದಾರೆ. ಬಾಬು ಮುತ್ಯಪ್ಪ ಅಕಳೆ (24) ಮಮದಾಪೂರ ಕೆ.ಕೆ ನಾಗಪ್ಪ ಮುತ್ಯಪ್ಪ ಅಕಳೆ (21) ಹಾಗೂ ಮುತ್ಯಪ್ಪ ಬೀಮಪ್ಪ ಅಕಳೆ (20) ಮೂವರಿಗೆ ಗಲ್ಲು ಶಿಕ್ಷೆ ಘೋಷಣೆಯಾಗಿದೆ. 2013 ರಲ್ಲಿ ಚಿಕ್ಕೋಡಿ ಪೋಲಿಸ್ (Chikkodi Police) ಠಾಣೆಯಲ್ಲಿ ಸಿ ಆರ್ 277/13 ಅಂಡರ ಸೆಕ್ಷನ್ 302, 307, 506, ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನ ವಶಪಡಿಸಿಕೊಂಡಿದ್ದರು. ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಚಿಕ್ಕೋಡಿ ಪೊಲೀಸರು ದೋಷಾರೋಪಣ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 9 ವರ್ಷಗಳ ನಂತರ ತೀರ್ಪು ಹೊರ ಬಿದ್ದಿದೆ.
ಇದನ್ನು ಓದಿ: ಹೊಸಪೇಟೆಯಲ್ಲಿ ಗುತ್ತಿಗೆದಾರನ ಮನೆ ಮೇಲೆ ಐಟಿ ದಾಳಿ, ಎಸಿಬಿ ಬಲೆಗೆ ಆರ್ಟಿಒ ಟೈಪಿಸ್ಟ್, ವಾಹನ ಕಳ್ಳರ ಬಂಧನ
ಬಸವರಾಜ ಹಾಗೂ ಸಂಗೀತಾ ನಡುವೆ ಆಕ್ರಮ ಸಂಬಂಧ ಹಿನ್ನೆಲೆ ಚಿಕ್ಕೋಡಿ ತಾಲೂಕಿನ ಕೆ ಕೆ ಮಮದಾಪೂರ ಗ್ರಾಮದಲ್ಲಿ ಆರೋಪಿಗಳು ಇಬ್ಬರನ್ನು ಬರ್ಬರ ಹತ್ಯೆ ಮಾಡಿದ್ದರು. ಇಬ್ಬರನ್ನ ಹತ್ಯೆ ಮಾಡಿದ ಹಿನ್ನೆಲೆ ಇಂದು ಮೂವರಿಗೆ ಜೀವಾವಧಿ ಶಿಕ್ಷೆ ನೀಡುವಂತೆ ಆದೇಶ ನ್ಯಾಯಾಲಯ ಹೊರಡಿಸಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:55 pm, Wed, 15 June 22