ಬೆಳಗಾವಿ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಜಾರಿಗೊಳಿಸುತ್ತೇವೆ. ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸುತ್ತೇವೆ ಎಂದು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಜನರಿಗೆ ಬೇಕಾಗುವ ಸೇವೆಗಳನ್ನ ವಿಕೇಂದ್ರೀಕರಣ ಮಾಡಿ ಗ್ರಾಮ ಪಂಚಾಯಿತಿಗೆ ನೀಡಬೇಕು. ಈ ಯೋಜನೆಗೆ ಬೇಕಾದ ಸಿದ್ಧತೆಗಳನ್ನ ಸರ್ಕಾರ ಮಾಡುತ್ತಿದೆ. ರೈತರು ಅವರದ್ದೆ ಆದ ಕಂಪನಿ ಮಾಡಿ ಅವರ ಬೆಳೆದ ಬೆಳೆ ಮಾರಾಟ ಮಾಡುವ ಯೋಜನೆ ಮಾಡಿದ್ದೇವೆ. ನಮ್ಮ ಸರ್ಕಾರ ಜನಪರವಾಗಿರುವ, ಬಡವರ ಪರವಾಗಿರುವ ಸರ್ಕಾರವಾಗಿದೆ. ಸಂಗಮ ಬ್ಯಾರೇಜ್ನಿಂದ 6 ಬ್ಯಾರೇಜ್ಗಳನ್ನು ತುಂಬಿಸುವ ಯೋಜನೆಗೆ ಅನುಮೋದನೆ ಕೊಡುತ್ತೇವೆ.
ಜನರ ಆಶೀರ್ವಾದ ಇದ್ದರೆ ಎಂತಹ ಸವಾಲುಗಳನ್ನು ಸಹ ಎದುರಿಸಬಹುದು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಜತೆಗೆ ಯಾವೆಲ್ಲಾ ಯೋಜನೆ ನೆನೆಗುದಿಗೆ ಬಿದ್ದಿವೆ ಅದನ್ನ ಪರಿಹರಿಸುತ್ತೇವೆ. ಜನರಿಗೆ, ಕನ್ನಡ ನಾಡಿಗೆ, ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡುತ್ತೇವೆ ಎಂದು ಅವರು ಆಶ್ವಾಸನೆ ನೀಡಿದರು.
ತಾಲೂಕು, ಜಿಲ್ಲೆಗಳಲ್ಲಿ ಸಮರ್ಪಕವಾಗಿ ವಿದ್ಯುತ್ ವಿತರಣೆ ಮಾಡಲು ಯಾರಾದರೂ ಮುಂದೆ ಬಂದರೆ ನಾವು ಅವರನ್ನು ಬೆಂಬಲಿಸಲು ಸಿದ್ದರಿದ್ದೇವೆ. ವಿದ್ಯುತ್ ವಿತರಣೆ ವಿಕೇಂದ್ರೀಕರಣ ಮಾಡಲು ಮುಖ್ಯಮಂತ್ರಿಯಾಗಿ ನಾನು ಸಿದ್ದನಿದ್ದೇನೆ ಎಂದು ಅವರು ಸೂಚಿಸಿದರು.
ಇದನ್ನೂ ಓದಿ:
Ganesh Chaturthi 2021 Recipe: ಉತ್ತರ ಕರ್ನಾಟಕ ಸ್ಪೆಷಲ್ ಕೊಬ್ಬರಿ ಕಡುಬು ಮಾಡಿ ಸವಿಯಿರಿ
(CM Basavaraj Bommai says will develop North Karnataka and power supply system will decentralised in Future)