ಬೆಳಗಾವಿ: ಎರಡು ಕಾರುಗಳ ನಡುವೆ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

ಬೆಳಗಾವಿ ಜಿಲ್ಲೆಯ ಬೈಲಹೊಂಗಲ (Bailhongal) ತಾಲೂಕಿನ ಇಂಚಲ ಬಳಿ ಎರಡು ಕಾರುಗಳ ನಡುವೆ ಡಿಕ್ಕಿ(Accident)ಯಾದ ಹಿನ್ನಲೆ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮಂಗಲಾ ಭರಮನಾಯ್ಕರ್(50) ಹಾಗೂ ಚಾಲಕ ಶ್ರೀಶೈಲ(40) ಸಾವನ್ನಪ್ಪಿದ ರ್ದುದೈವಿಗಳು.

ಬೆಳಗಾವಿ: ಎರಡು ಕಾರುಗಳ ನಡುವೆ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
ಕಾರು ಅಪಘಾತ, ಮೃತ ರ್ದುದೈವಿಗಳು
Follow us
Sahadev Mane
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 29, 2023 | 3:59 PM

ಬೆಳಗಾವಿ, ಡಿ.29: ಎರಡು ಕಾರುಗಳ ನಡುವೆ ಡಿಕ್ಕಿ(Accident)ಯಾದ ಹಿನ್ನಲೆ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ (Bailhongal) ತಾಲೂಕಿನ ಇಂಚಲ ಬಳಿ ನಡೆದಿದೆ. ಮಂಗಲಾ ಭರಮನಾಯ್ಕರ್(50) ಹಾಗೂ ಚಾಲಕ ಶ್ರೀಶೈಲ(40) ಸಾವನ್ನಪ್ಪಿದ ರ್ದುದೈವಿಗಳು. ಇನ್ನುಳಿದಂತೆ ನಾಲ್ವರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಮುರಗೋಡ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮರಕ್ಕೆ ಡಿಕ್ಕಿ ಹೊಡೆದ ಕಾರು; ತಪ್ಪಿತ ಭಾರೀ ಅನಾಹುತ

ಮೈಸೂರು: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ KSRTC ಬಸ್​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದಾಗ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಮೈಸೂರಿನ ಎಚ್.ಡಿ.ಕೋಟೆ ರಸ್ತೆ ಸಮೀಪ ನಡೆದಿದೆ. ಬೆಂಗಳೂರು ಮೂಲದ ಕಾರು ಇದಾಗಿದ್ದು, ಅಪಘಾತದಲ್ಲಿ ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಈ ಘಟನೆ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ:ದಟ್ಟ ಮಂಜು: ಯಮುನಾ ಎಕ್ಸ್​ಪ್ರೆಸ್​ವೇನಲ್ಲಿ 20 ವಾಹನಗಳ ನಡುವೆ ಸರಣಿ ಅಪಘಾತ

ಶಾರ್ಟ್ ಸರ್ಕ್ಯೂಟ್​ನಿಂದ ಹೊತ್ತಿಯುರಿದ ಕಬ್ಬು ಕಟಾವಿನ ಯಂತ್ರ

ವಿಜಯನಗರ: ಜಿಲ್ಲೆಯ ಹೂವಿನ ಹಡಗಲಿಯ ಸೋವೆನಹಳ್ಳಿಯಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಕಬ್ಬು ಕಟಾವಿನ ಯಂತ್ರ ಹೊತ್ತಿ ಉರಿದ ಘಟನೆ ನಡೆದಿದೆ. ಅದೃಷ್ಟವಶಾತ್ ಮಷಿನ ಆಪರೇಟರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗದಗ ಮೂಲದ ಕಬ್ಬು ಕಟಾವಿನ ಯಂತ್ರ ಇದಾಗಿದ್ದು, ಕಬ್ಬು ಕಟಾವು ಮಾಡುವ ವೇಳೆ ಯಂತ್ರದ ಮೇಲೆ ಬೆಂಕಿ ಕಾಣಿಸಿಕೊಂಡಿದೆ. ಇದನ್ನರಿತ ಆಪರೇಟರ್‌‌ ಕೂಡಲೇ ಹೊರ ಜಿಗಿದಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಬೆಂಕಿ ಕೆನ್ನಾಲಿಗೆಗೆ ಕಬ್ಬು ಕಟಾವು ಮಷಿನ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಘಟನೆ ಹೂವಿನ ಹಡಗಲಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ