AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಪ್ರದೇಶ ಹೆದ್ದಾರಿಯಲ್ಲಿ ವಾಹನ ಅಪಘಾತ; ಟ್ರಕ್​​ನಲ್ಲಿದ್ದ ಕೋಳಿಗಳನ್ನು ಹೊತ್ತೊಯ್ದ ಜನರು

ವಾಹನವೊಂದು ಮಾಂಸ ಉತ್ಪಾದನೆಗಾಗಿ ಸಾಕಣೆ ಮಾಡಲಾಗಿದ್ದ ಬ್ರಾಯ್ಲರ್ ಕೋಳಿಯನ್ನು ಸಾಗಿಸುತ್ತಿತ್ತು ಈ ವಾಹನವೂ ಸಿಲುಕಿರುವುದನ್ನು ನೋಡಿದ ಜನರು ಟ್ರಕ್ ನಿಂದ ಕೋಳಿಗಳನ್ನು ಹೊರತೆಗೆದು ಮನೆಗಳಿಗೆ ಒಯ್ದಿದ್ದಾರೆ. ಅವರಲ್ಲಿ ಕೆಲವರು ಚೀಲಗಳೊಂದಿಗೆ ಬಂದರು.ಕೆಲವರು ನಡೆದುಕೊಂಡು ಹೋಗಿದ್ದರೆ ಇನ್ನು ಕೆಲವರು ವಾಹನಗಳಲ್ಲಿ ಬಂದು ಹೊತ್ತೊಯ್ದರು

ಉತ್ತರಪ್ರದೇಶ ಹೆದ್ದಾರಿಯಲ್ಲಿ ವಾಹನ ಅಪಘಾತ; ಟ್ರಕ್​​ನಲ್ಲಿದ್ದ ಕೋಳಿಗಳನ್ನು ಹೊತ್ತೊಯ್ದ ಜನರು
ಚಿಕನ್ ಲೂಟಿ ಮಾಡುತ್ತಿರುವ ಜನರು
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: Dec 27, 2023 | 7:10 PM

Share

ಆಗ್ರಾ ಡಿಸೆಂಬರ್ 27: ಪ್ರತಿ ಸಂಕಷ್ಟದಲ್ಲೂ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವ ಭಾರತೀಯರ ಸಾಮರ್ಥ್ಯ ಇಂದು ಉತ್ತರ ಪ್ರದೇಶದ (Uttar Pradesh) ಆಗ್ರಾದಲ್ಲಿ  (Agra) ಪ್ರದರ್ಶನಗೊಂಡಿದೆ. ದಟ್ಟ ಮಂಜು ಕವಿದಿದ್ದರಿಂದ ಕಾರುಗಳು ಪರಸ್ಪರ ಗುದ್ದಿ ಅಪಘಾತ (Accident) ಸಂಭವಿಸಿದೆ. ಹೀಗೆ ವಾಹನಗಳು ಒಂದಕ್ಕೊಂದು ಢಿಕ್ಕಿ ಹೊಡೆದಿದ್ದರಲ್ಲಿ ಟ್ರಕ್ ಕೂಡಾ ಇದ್ದು ಇದರಲ್ಲಿ ಕೋಳಿ ಸಾಗಿಸಲಾಗುತ್ತಿತ್ತು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಕನಿಷ್ಠ ಹನ್ನೆರಡು ವಾಹನಗಳಿಗೆ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ, ಅಪಘಾತದಲ್ಲಿ ಒಬ್ಬರು ಸಾವಿಗೀಡಾಗಿದ್ದು ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಕ್ರೇನ್ ಕರೆಸಿ ಹಾನಿಗೊಳಗಾದ ವಾಹನಗಳನ್ನು ತೆಗೆದು ರಸ್ತೆಯನ್ನು ತೆರವುಗೊಳಿಸಲಾಗಿದೆ.

ದಟ್ಟವಾದ ಮಂಜಿನಿಂದಾಗಿ ಉಂಟಾದ ಅಪಘಾತದಲ್ಲಿ ಟ್ರಕ್‌ಗಳು ಸೇರಿದಂತೆ ಕನಿಷ್ಠ ಮೂರು ವಾಹನಗಳು ಹಾನಿಗೊಳಗಾಗಿವೆ.

ವಾಹನವೊಂದು ಮಾಂಸ ಉತ್ಪಾದನೆಗಾಗಿ ಸಾಕಣೆ ಮಾಡಲಾಗಿದ್ದ ಬ್ರಾಯ್ಲರ್ ಕೋಳಿಯನ್ನು ಸಾಗಿಸುತ್ತಿತ್ತು ಈ ವಾಹನವೂ ಸಿಲುಕಿರುವುದನ್ನು ನೋಡಿದ ಜನರು ಟ್ರಕ್ ನಿಂದ ಕೋಳಿಗಳನ್ನು ಹೊರತೆಗೆದು ಮನೆಗಳಿಗೆ ಒಯ್ದಿದ್ದಾರೆ. ಅವರಲ್ಲಿ ಕೆಲವರು ಚೀಲಗಳೊಂದಿಗೆ ಬಂದರು.ಕೆಲವರು ನಡೆದುಕೊಂಡು ಹೋಗಿದ್ದರೆ ಇನ್ನು ಕೆಲವರು ವಾಹನಗಳಲ್ಲಿ ಬಂದು ಹೊತ್ತೊಯ್ದರು. ಲಾರಿಯಲ್ಲಿ ಸುಮಾರು 500 ಕೋಳಿಗಳಿದ್ದು, ಸುಮಾರು ₹ 1.5 ಲಕ್ಷ ಬೆಲೆ ಬಾಳುತ್ತಿತ್ತು.

ಇದನ್ನೂ ಓದಿ: ದಟ್ಟ ಮಂಜು: ಯಮುನಾ ಎಕ್ಸ್​ಪ್ರೆಸ್​ವೇನಲ್ಲಿ 20 ವಾಹನಗಳ ನಡುವೆ ಸರಣಿ ಅಪಘಾತ

ಉತ್ತರ ಭಾರತದಲ್ಲಿ ಚಳಿ ಹೆಚ್ಚಾಗಿದ್ದು ಮಂಜು ಆವರಿಸಿದ್ದರಿಂದ ಜನರು ಪರದಾಡುವಂತಾಗಿದೆ. ದೆಹಲಿ, ಪಂಜಾಬ್​ನಲ್ಲಿ ದಟ್ಟ ಮಂಜು ಆವರಿಸಿಕೊಂಡಿದ್ದು, 110 ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ವಿಳಂಬವಾಗಿದೆ.

ರೈಲು, ವಾಹನ ಸಂಚಾರಕ್ಕೂ ಮಂಜು ಅಡ್ಡಿಯಾಗಿದೆ. 8 ಗಂಟೆಗೆ 40ಕ್ಕೂ ಹೆಚ್ಚು ವಿಮಾನಗಳು ದಟ್ಟವಾದ ಮಂಜಿನಿಂದಾಗಿ ಹಾರಾಟ ವಿಳಂಬ ಕಂಡಿವೆ. ದೆಹಲಿಯಲ್ಲಿ ತೀವ್ರ ಮಂಜಿನಿಂದಾಗಿ ಗಾಳಿಯ ಗುಣಮಟ್ಟ ತೀವ್ರ ಕಳಪೆ ವಿಭಾದಲ್ಲೇ ಉಳಿದಿದೆ. ಗಾಳಿಯ ಗುಣಮಟ್ಟ ಮಾಪಕದ 500ರಷ್ಟಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್