ಟ್ರಾಫಿಕ್ ನಿಯಮ ಉಲ್ಲಿಂಘನೆ: ಗಾಡಿ ಬಿಡಿಸಿಕೊಳ್ಳಲು ಸವಾರರ ಹಿಂದೇಟು

ಬೆಳಗಾವಿ: ಟ್ರಾಫಿಕ್​​ ರೂಲ್ಸ್​​​ ಬಿಗಿಯಾಗಿದ್ದೇ ಆಗಿದ್ದು, ವಾಹನ ಸವಾರರು ದಂಡದ ಮೊತ್ತ ನೋಡಿ ಬೆಚ್ಚಿ ಬಿದಿದ್ರು. ದಂಡದ ಹೊಡೆತ ತಿಂದು ಕೆಲವ್ರು ಕಕ್ಕಾಬಿಕ್ಕಿಯಾಗಿದ್ರು. ಅದ್ರಲ್ಲೂ ಕೆಲವು ಸವಾರರು ಮಾಡಿರೋ ಕೆಲಸ, ಪೊಲೀಸ್ರಿಗೆ ತಲೆ ನೋವು ತಂದಿದೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಿ ಖಾಕಿ ಸುಪರ್ದಿಯಲ್ಲಿರೋ ಬೈಕ್​​ಗಳು ಧೂಳು ಹಿಡಿತಿವೆ. ಸುಸ್ಥಿತಿಯಲ್ಲೇ ಇದ್ರೂ, ನಿಂತಲ್ಲೇ ನಿಂತು ಎಲ್ಲವೂ ಹಾಳಾಗ್ತಿದೆ. ಆದ್ರೆ, ಇವುಗಳ ಮೇಲೆ ಬಿದ್ದಿರೋ ಭಾರಿ ದಂಡದ ಮೊತ್ತಗಳಿಂದ ಬೆಚ್ಚಿ, ಮಾಲೀಕರು ಇವುಗಳತ್ತ ಕ್ಯಾರೇ ಅಂತಿಲ್ಲ. ದಂಡದ ಮೊತ್ತಕ್ಕೆ […]

ಟ್ರಾಫಿಕ್ ನಿಯಮ ಉಲ್ಲಿಂಘನೆ: ಗಾಡಿ ಬಿಡಿಸಿಕೊಳ್ಳಲು ಸವಾರರ ಹಿಂದೇಟು
ಸಾಧು ಶ್ರೀನಾಥ್​

Updated on: Jan 21, 2020 | 12:28 PM

ಬೆಳಗಾವಿ: ಟ್ರಾಫಿಕ್​​ ರೂಲ್ಸ್​​​ ಬಿಗಿಯಾಗಿದ್ದೇ ಆಗಿದ್ದು, ವಾಹನ ಸವಾರರು ದಂಡದ ಮೊತ್ತ ನೋಡಿ ಬೆಚ್ಚಿ ಬಿದಿದ್ರು. ದಂಡದ ಹೊಡೆತ ತಿಂದು ಕೆಲವ್ರು ಕಕ್ಕಾಬಿಕ್ಕಿಯಾಗಿದ್ರು. ಅದ್ರಲ್ಲೂ ಕೆಲವು ಸವಾರರು ಮಾಡಿರೋ ಕೆಲಸ, ಪೊಲೀಸ್ರಿಗೆ ತಲೆ ನೋವು ತಂದಿದೆ.

ಸಂಚಾರಿ ನಿಯಮ ಉಲ್ಲಂಘನೆ ಮಾಡಿ ಖಾಕಿ ಸುಪರ್ದಿಯಲ್ಲಿರೋ ಬೈಕ್​​ಗಳು ಧೂಳು ಹಿಡಿತಿವೆ. ಸುಸ್ಥಿತಿಯಲ್ಲೇ ಇದ್ರೂ, ನಿಂತಲ್ಲೇ ನಿಂತು ಎಲ್ಲವೂ ಹಾಳಾಗ್ತಿದೆ. ಆದ್ರೆ, ಇವುಗಳ ಮೇಲೆ ಬಿದ್ದಿರೋ ಭಾರಿ ದಂಡದ ಮೊತ್ತಗಳಿಂದ ಬೆಚ್ಚಿ, ಮಾಲೀಕರು ಇವುಗಳತ್ತ ಕ್ಯಾರೇ ಅಂತಿಲ್ಲ.

ದಂಡದ ಮೊತ್ತಕ್ಕೆ ಹೆದರಿ ವಾಹನ ಬಿಡಿಸಿಕೊಳ್ಳಲು ಹಿಂದೇಟು:
ಹೌದು.. ಬೆಳಗಾವಿ ಪೊಲೀಸ್ರಿಗೆ ಸಂಚಾರಿ ನಿಯಮ ಉಲ್ಲಂಘಿಸೋ, ಸವಾರರಿಗೆ ದಂಡ ಹಾಕೋದು ಒಂದು ಕೆಲಸವಾದ್ರೆ, ಕೇಸ್​​​​​​ ಬಿದ್ದಿರೋ ವೆಹಿಕಲ್​​ ಕಾಯೋದು ಇನ್ನೊಂದು ಕೆಲಸ ಆಗ್ಬಿಟ್ಟಿದೆ. ಯಾಕಂದ್ರೆ, ಕಳೆದ ಒಂದು ತಿಂಗಳ ಅವಧಿಯಲ್ಲಿ, ನೂರಾರು ಬೈಕ್​​ಗಳಿಗೆ ದಂಡ ವಿಧಿಸಿದ್ದಾರೆ. ಅನೇಕ ನಿಯಮಗಳ ಉಲ್ಲಂಘನೆ ಸೇರಿಸಿ, ಐದು, ಹತ್ತು, ಹನ್ನೆರಡು ಸಾವಿರದ ವರೆಗೂ ಫೈನ್​​ ಹಾಕಿದ್ದಾರೆ. ಆದ್ರೆ, ದಂಡ ಕಟ್ಟಿ ಗಾಡಿ ಬಿಡಿಸಿಕೊಳ್ಳಬೇಕಾದ ಮಾಲೀಕರು, ಅಷ್ಟು ಹಣ ಕಟ್ಟಲಾಗದೆ ಸುಮ್ಮನಾಗಿದ್ದಾರೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಸುಮಾರು ಅರವತ್ತಕ್ಕೂ ಅಧಿಕ ಬೈಕ್​​ಗಳನ್ನ, ಸಂಚಾರಿ ನಿಯಮ ಉಲ್ಲಂಘನೆಯಡಿ ವಶಕ್ಕೆ ತೆಗೆದುಕೊಂಡಿದ್ದಾರೆ. ಕಾನೂನು ಪ್ರಕಾರ, ಕೋರ್ಟ್​​​​ನಲ್ಲಿ ದಂಡ ಕಟ್ಟಿ ಬೈಕ್​ ಬಿಡಿಸಿಕೊಂಡು ಹೋಗ್ಬೇಕು. ಆದ್ರೆ, ಒಂದು ತಿಂಗಳಾದ್ರೂ ಬೈಕ್​ ಮಾಲೀಕರು, ದಂಡ ಕಟ್ಟಿ ಬೈಕ್​ ಬಿಡಿಸಿಕೊಳ್ತಿಲ್ಲ. ಹೀಗಾಗಿ, ಪೊಲೀಸ್ ಠಾಣೆ ಮುಂಭಾಗದಲ್ಲೇ ಬೈಕ್​ಗಳು ನಿಂತಿವೆ. ಇನ್ನು, ವೆಹಿಕಲ್​ಗಳಿಗೆಲ್ಲ ಸರಪಳಿ ಕಟ್ಟಿದ್ದು, ಅದನ್ನ ಕಾಯೋದಕ್ಕಾಗೇ ಕಾನ್ಸ್​​ಸ್ಟೇಬಲ್​​​ ಒಬ್ಬರು ನಿಂತಿದ್ದಾರೆ.

ಒಟ್ನಲ್ಲಿ ದಂಡದಿಂದ ಭಯ ಮೂಡಿ, ನಿಯಮ ಪಾಲಿಸ್ತಾರೆ ಅನ್ನೋದು ಪೊಲೀಸ್ರ ಲೆಕ್ಕಾಚಾರ. ಆದ್ರೆ, ದಂಡ ಕಟ್ಟೋ ಬದಲು ಗಾಡಿಯನ್ನೇ ಬಿಡಲು ಮಾಲೀಕರು ಮುಂದಾಗಿರೋದು, ಪೊಲೀಸ್ರಿಗೆ ಹೊಸ ಫಜೀತಿ ತಂದಿಟ್ಟಿದೆ.

Published On - 12:25 pm, Tue, 21 January 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us