ಬೆಂಕಿ ಬಿದ್ದ ತೋಟದ ಮನೆಗೆ ನುಗ್ಗಿ ಜಾನುವಾರು ರಕ್ಷಣೆಗೆ ಹರಸಾಹಸಪಟ್ಟ ರೈತ

ಅವರೊಳ್ಳಿ ಗ್ರಾಮದಲ್ಲಿ ತಡರಾತ್ರಿ ನವರತ್ನ ಜೋಳದ ಎಂಬುವವರಿಗೆ ಸೇರಿದ ತೋಟದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಜೀವವನ್ನೂ ಲೆಕ್ಕಿಸದೇ ಬೆಂಕಿಯಲ್ಲಿ ನುಗ್ಗಿದ ರೈತ ಜಾನುವಾರು ರಕ್ಷಣೆ ಮಾಡಿದ್ದಾರೆ.

ಬೆಂಕಿ ಬಿದ್ದ ತೋಟದ ಮನೆಗೆ ನುಗ್ಗಿ ಜಾನುವಾರು ರಕ್ಷಣೆಗೆ ಹರಸಾಹಸಪಟ್ಟ ರೈತ
ಬೆಂಕಿ ಬಿದ್ದ ತೋಟದ ಮನೆಗೆ ನುಗ್ಗಿ ಜಾನುವಾರು ರಕ್ಷಣೆಗೆ ಹರಸಹಾಸಪಟ್ಟ ರೈತ
Follow us
TV9 Web
| Updated By: ಆಯೇಷಾ ಬಾನು

Updated on:Jan 20, 2022 | 9:13 AM

ಬೆಳಗಾವಿ: ಬೆಂಕಿ ಬಿದ್ದ ತೋಟದ ಮನೆಗೆ ನುಗ್ಗಿ ಜಾನುವಾರು ರಕ್ಷಣೆಗೆ ರೈತ ಹರಸಾಹಸ ಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ‌ ಅವರೊಳ್ಳಿ ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದು ತೋಟದ ಮನೆ ಹತ್ತಿಕೊಂಡು ಉರಿದಿದ್ದು ಪ್ರಾಣದ ಹಂಗು ತೊರೆದು ಜಾನುವಾರು ರಕ್ಷಣೆಗೆ ರೈತ ಹರಸಾಹಸ ಪಟ್ಟಿದ್ದಾರೆ.

ಅವರೊಳ್ಳಿ ಗ್ರಾಮದಲ್ಲಿ ತಡರಾತ್ರಿ ನವರತ್ನ ಜೋಳದ ಎಂಬುವವರಿಗೆ ಸೇರಿದ ತೋಟದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಜೀವವನ್ನೂ ಲೆಕ್ಕಿಸದೇ ಬೆಂಕಿಯಲ್ಲಿ ನುಗ್ಗಿದ ರೈತ ಜಾನುವಾರು ರಕ್ಷಣೆ ಮಾಡಿದ್ದಾರೆ. 1 ಕರು ಬೆಂಕಿಗಾಹುತಿಯಾಗಿದ್ದು 2 ಎಮ್ಮೆ ಹಾಗೂ 1 ಹಸುವಿಗೆ ಗಂಭೀರ ಗಾಯಗಳಾಗಿವೆ. ತೋಟದ ಮನೆಯಲ್ಲಿದ್ದ ಕೃಷಿ ಸಾಮಗ್ರಿಯಲ್ಲವೂ ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿದೆ. ಅಂದಾಜು 80 ಸಾವಿರಕ್ಕೂ ಹೆಚ್ಚು ಹಾನಿ ಸಂಭವಿಸಿದೆ. ನಂದಗಡ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ಪೊಲೀಸರಿಂದ ಇಬ್ಬರು ಕಳ್ಳರ ಬಂಧನ ಮಳವಳ್ಳಿ ಪೊಲೀಸರ ಕಾರ್ಯಚರಣೆ ಇಬ್ಬರು ಕಳ್ಳರು ಅರೆಸ್ಟ್ ಆಗಿದ್ದಾರೆ. ಮಳವಳ್ಳಿಯ ಅರುಣ್(29) ಮತ್ತು ಗುರುಪ್ರಸಾದ್ (30) ಬಂಧಿತರು. ಬಂಧಿತರಿಂದ 8 ಲಕ್ಷ ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. 8 ಪ್ಯಾಸೆಂಜರ್ ಆಟೋ, ಗೂಡ್ಸ್ ಆಟೋ, 4 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಆರೋಪಿಗಳು ಈ ಹಿಂದೆ ಕೆಲವು ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸಿದ್ದರು. ಮೈಸೂರು, ಮಂಡ್ಯ, ಚಾಮರಾಜನಗರ ಭಾಗದಲ್ಲಿ ಕಳ್ಳತನ ಮಾಡುತ್ತಿದ್ದರು. ಸದ್ಯ ಮಳವಳ್ಳಿ ಠಾಣೆ ಇನ್ಸ್ಪೆಕ್ಟರ್ ಸುನೀಲ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ರೈತಾಪಿ ಜನರೇ ದಯವಿಟ್ಟು ರಸ್ತೆಯಲ್ಲಿ ಕಣ ಹಾಕಬೇಡಿ, ಗರ್ಭಿಣಿಯಿದ್ದ ಆ್ಯಂಬುಲೆನ್ಸ್ ರಸ್ತೆ ಮಧ್ಯೆ ಸಿಲುಕಿ ಪರದಾಟ

Published On - 8:46 am, Thu, 20 January 22