AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಕಾರಣಿಗಳ ಸಕ್ಕರೆ ಕಾರ್ಖಾನೆಗಳ ಸಾಲ ಮನ್ನಾ ಮಾಡದಿರಲು ಬೆಳಗಾವಿಯಲ್ಲಿ ರೈತರ ಆಗ್ರಹ

ಸಕ್ಕರೆ ಕಾರ್ಖಾನೆಗಳ ಸಾಲ ಮನ್ನಾ ಮಾಡಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ವಕೀಲ, ರೈತ ಮುಖಂಡ ಎಂಟಿ ಪಾಟೀಲ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ರಾಜಕಾರಣಿಗಳ ಸಕ್ಕರೆ ಕಾರ್ಖಾನೆಗಳ ಸಾಲ ಮನ್ನಾ ಮಾಡದಿರಲು ಬೆಳಗಾವಿಯಲ್ಲಿ ರೈತರ ಆಗ್ರಹ
ರೈತ ಮುಖಂಡ ಎಂಟಿ ಪಾಟೀಲ್
TV9 Web
| Edited By: |

Updated on:May 12, 2022 | 10:41 AM

Share

ಬೆಳಗಾವಿ: ಸಕ್ಕರೆ ಕಾರ್ಖಾನೆಗಳು (Sugar Factory) ರೈತರ ಬಾಕಿ ಹಣ ಉಳಿಸಿಕೊಂಡ ವಿಚಾರಕ್ಕೆ ಸಂಬಂಧಿಸಿ ಬೆಳಗಾವಿಯಲ್ಲಿ ಸರ್ಕಾರದ ಇಬ್ಬಗೆಯ ನೀತಿಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಮೇಶ್ ಜಾರಕಿಹೊಳಿ (Ramesh Jarkiholi) ಒಡೆತನದ ಸಕ್ಕರೆ ಕಾರ್ಖಾನೆ ವಿರುದ್ಧ ಕಿಡಿಕಾರಿರುವ ರೈತರು, ರಾಜಕಾರಣಿಗಳ ಸಕ್ಕರೆ ಕಾರ್ಖಾನೆಗಳ ಸಾಲ ಮನ್ನಾ ಮಾಡಬೇಡಿ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್​ಗೆ ಮನವಿ ಮಾಡಿದ್ದಾರೆ. ಬ್ಯಾಂಕ್​ನಿಂದ ಸಾಲ ಪಡೆದ ಕಾರ್ಖಾನೆಗಳ ಸಾಲ ಮನ್ನಾ ಮಾಡುತ್ತೀರಿ. ಅಪೆಕ್ಸ್ ಬ್ಯಾಂಕ್​ನಿಂದ ಸಾಲ ಪಡೆದವರಿಗೆ ರಿಯಾಯಿತಿ ನೀಡಬೇಡಿ. ಸಾಲಮನ್ನಾ ಮಾಡುವುದಿದ್ದರೆ ರೈತರ ಸಾಲಮನ್ನಾ ಮಾಡಿ ಎಂದು ಆಗ್ರಹಿಸಿದ್ದಾರೆ.

ಸಕ್ಕರೆ ಕಾರ್ಖಾನೆಗಳ ಸಾಲ ಮನ್ನಾ ಮಾಡಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ವಕೀಲ, ರೈತ ಮುಖಂಡ ಎಂಟಿ ಪಾಟೀಲ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಶಿವಕುಮಾರ್- ರಮೇಶ್ ನಡುವೆ ಶುಗರ್ ವಾರ್: ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ರಮೇಶ್​ ಜಾರಕಿಹೊಳಿಗೆ ಸಕ್ಕರೆ ಕಾರ್ಖಾನೆ ಸಾಲ ಬಾಕಿ ವಿಚಾರ ಮುಳುವಾಗುತ್ತಾ? ಎಂಬ ಪ್ರಶ್ನೆ ಮೂಡಿದೆ. ಸಂಪುಟ ವಿಸ್ತರಣೆ ಮುನ್ಸೂಚನೆ ಬೆನ್ನಲ್ಲೇ ಸಾಲು ಸಾಲು ಆರೋಪ ಕೇಳಿಬಂದಿವೆ. ಸಹಕಾರ ಬ್ಯಾಂಕ್‌ಗಳಿಂದ ಸಾಲ ಪಡೆದು ರಮೇಶ್ ಮರುಪಾವತಿಸದ ಆರೋಪ ಇದೆ. ಈ ವಿಚಾರಕ್ಕೆ ಸಂಬಂಧಿಸಿ ಡಿಕೆ ಶಿವಕುಮಾರ್ ಸಾಹುಕಾರ್​ಗಳೆಲ್ಲಾ ಭಿಕ್ಷುಕರಾಗುತ್ತಿದ್ದಾರೆ ಎಂದಿದ್ದರು. ಈ ಹೇಳಿಕೆಗೆ ಸೂಕ್ತ ಸಂದರ್ಭದಲ್ಲಿ ತಿರುಗೇಟು ನೀಡುತ್ತೇನೆ ಎಂದು ರಮೇಶ್ ಹೇಳಿದ್ದಾರೆ.

ಸಂಪುಟ ವಿಸ್ತರಣೆ ವೇಳೆ ವಿವಾದ ಮೈಮೇಲೆ ಎಳೆದುಕೊಳ್ಳೋದು ಬೇಡ. ಮುಂದಿನ ದಿನಗಳಲ್ಲಿ ರಾಜಕೀಯ ವಿರೋಧಿಗಳ ಬಂಡವಾಳ ಬಯಲು ಮಾಡುವುದಾಗಿ ರಮೇಶ್ ಹೇಳಿರುವ ಬಗ್ಗೆ ಆಪ್ತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ

Sarkaru Vaari Paata Review: ಒಂದೊಳ್ಳೆಯ ಕಥೆಗೆ ಬೇಕಿತ್ತು ಇನ್ನಷ್ಟು ಒಳ್ಳೆಯ ಟ್ರೀಟ್​ಮೆಂಟ್

ಚೀನಾ: ರನ್‌ವೇಯಿಂದ ಸ್ಕಿಡ್ ಆಗಿ ಹೊತ್ತಿ ಉರಿದ ಟಿಬೆಟ್ ಏರ್‌ಲೈನ್ಸ್‌ನ ವಿಮಾನ; ಪ್ರಯಾಣಿಕರು ಸುರಕ್ಷಿತ

Published On - 10:36 am, Thu, 12 May 22