400 ಕೋಟಿ ರೂ. ಕಳ್ಳತನ ಪ್ರಕರಣದ ಬಿಗ್ ಅಪ್​ಡೇಟ್: ಅಸಲಿಗೆ ದರೋಡೆ ಹೇಗಾಯ್ತು? ಯಾರಿಗೆ ಯಾವ ಜವಾಬ್ದಾರಿ?

ದೇಶವನ್ನೇ ಬೆಚ್ಚಿಬೀಳಿಸಿದ್ದ ಬೆಳಗಾವಿಯ 400 ಕೋಟಿ ರೂಪಾಯಿ ದರೋಡೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಗೋವಾ, ಕರ್ನಾಟಕ ಹಾಗೂ ಮಹಾರಾಷ್ಟ್ರದ ಲಿಂಕ್ ಹೊಂದಿದ್ದ ಕೇಸ್ ಈಗ ಗುಜರಾತಿಗೂ ವ್ಯಾಪಿಸಿದೆ. ಹಾಗಿದ್ರೆ ಇನ್ನು ಅಸಲಿಗೆ ದರೋಡೆ ಹೇಗಾಯ್ತು? ಯಾರಿಗೆ ಯಾವ ಜವಾಬ್ದಾರಿಯನ್ನ ಕೊಡಲಾಗಿತ್ತು? ಎನ್ನುವ 400 ಕೋಟಿ ರೂ. ದರೋಡೆ ಹಿಂದಿನ ಸ್ಫೋಟಕ ಅಂಶ ಬಯಲಾಗಿದೆ.

400 ಕೋಟಿ ರೂ. ಕಳ್ಳತನ ಪ್ರಕರಣದ ಬಿಗ್ ಅಪ್​ಡೇಟ್: ಅಸಲಿಗೆ ದರೋಡೆ ಹೇಗಾಯ್ತು? ಯಾರಿಗೆ ಯಾವ ಜವಾಬ್ದಾರಿ?
Rs 400 Crore Robbery Case
Edited By:

Updated on: Jan 26, 2026 | 3:54 PM

ಬೆಳಗಾವಿ, ಜನವರಿ 26): ಒಂದಲ್ಲ ಎರಡಲ್ಲ ಬೆಳಗಾವಿಯಲ್ಲಿ (Belagavi) ದರೋಡೆಯಾಗಿದ್ದು ಬರೋಬ್ಬರಿ 400 ಕೋಟಿ ರೂಪಾಯಿ ( Rs 400 Crore Robbery Case). ಈ ದರೋಡೆಯ ರಹಸ್ಯ ಬಟಾಬಯಲಾಗಿದ್ದು,  ಇದು ಸಿನಿಮಾ ಕಥೆಯನ್ನೂ ಮೀರಿಸುವಂತಿದೆ. ದರೋಡೆ ಆಗಿದೆ ಎಂದು ಯಾರು ಬಂದು ದೂರು ಕೊಡಲಿಲ್ಲ. ಅಯ್ಯಯ್ಯೋ ನನ್ನ ಕೋಟ್ಯಾಂತರ ರೂಪಾಯಿ ಹೋಯ್ತು ಎಂದು ಯಾರು ಬಾಯಿ ಬಡೆದುಕೊಳ್ಳಲಿಲ್ಲ.  ಪ್ರಕರಣವನ್ನ ಬಯಲು ಮಾಡಿದ್ದ ಸಂದೀಪ್, ಹಣ ಕಿಶೋರ್ ಸೇಠ್​ಗೆ ಸೇರಿದ್ದು, ಇದರಲ್ಲಿ ವಿರಾಟ್ ಗಾಂಧಿ ಎನ್ನುವರ ಕೈವಾಡವೂ ಇದೆ ಎಂದಿದ್ದ. ಆದ್ರೆ, ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಇಬ್ಬರ ಹೆಸರಿನ ಜೊತೆಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ

ಅಕ್ಟೋಬರ್ 22ರಂದು ಮಹಾರಾಷ್ಟ್ರದ ಸಂದೀಪ್ ಪಾಟೀಲ್ ಎಂಬಾತನನ್ನ ಉದ್ಯಮಿ ಕಿಶೋರ್ ಸೇಠ್ ಮತ್ತವನ ಕಡೆಯವರು ಅಪಹರಿಸಿರುತ್ತಾರೆ. ಹೀಗೆ ಹೊತ್ತೊಯ್ದವನಿಗೆ ಚಿತ್ರಹಿಂಸೆ ಕೊಟ್ಟವರೇ ದರೋಡೆ ಬಗ್ಗೆ ಪ್ರಶ್ನೆ ಕೇಳೋದಕ್ಕೆ ಶುರುಮಾಡ್ತಾರೆ. ಗೋವಾದಿಂದ ಮಹಾರಾಷ್ಟ್ರಕ್ಕೆ 2 ಕಂಟೇನರ್​ನಲ್ಲಿ ಹಣ ಹೋಗ್ತಿತ್ತು. ಈ 400 ಕೋಟಿ ಹಣವನ್ನ ಬೆಳಗಾವಿಯ ಚೋರ್ಲಾ ಘಾಟ್ ಬಳಿ ದರೋಡೆ ಮಾಡಲಾಗಿದೆ. ಇದರಲ್ಲಿ ನೀನು ಕೂಡ ಇದಿಯಾ. ಹಣ ಎಲ್ಲೊಯ್ತು ಎಂದು ಒಂದೇ ಸಮನೇ ಕೇಳೋದಕ್ಕೆ ಶುರುಮಾಡ್ತಾರೆ. ಆಗ್ಲೇ ನೋಡಿ ದರೋಡೆಯಾದ ವಿಚಾರ, ದರೋಡೆ ಮಾಡಿದವರಿಗೆ, ಹಣ ಕೊಟ್ಟವರಿಗೆ ಬಿಟ್ಟು ಮೂರನೇ ವ್ಯಕ್ತಿ ಕಿವಿಗೆ ಬಿದ್ದಿದ್ದು.

ಇದನ್ನೋ ನೋಡಿ: ಕರ್ನಾಟಕ ಗಡಿಯಲ್ಲಿ 400 ಕೋಟಿ ರೂ. ದರೋಡೆ: ಇಷ್ಟೊಂದು ಹಣ ಸೇರಿದ್ಯಾರಿಗೆ? ಸ್ಫೋಟಕ ಮಾಹಿತಿ ಬಯಲಿಗೆ

ಗುಜರಾತ್​ನ ದೊಡ್ಡ ರಾಜಕಾರಣಿ ಕೈವಾಡ

ಪ್ರಕರಣವನ್ನ ಬಯಲು ಮಾಡಿದ್ದ ಸಂದೀಪ್, ಹಣ ಕಿಶೋರ್ ಸೇಠ್​ಗೆ ಸೇರಿದ್ದು, ಇದರಲ್ಲಿ ವಿರಾಟ್ ಗಾಂಧಿ ಎನ್ನುವರ ಕೈವಾಡವೂ ಇದೆ ಎಂದಿದ್ದ. ಆದ್ರೆ, ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಇಬ್ಬರ ಹೆಸರಿನ ಜೊತೆಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಉದ್ಯಮಿ ಕಿಶೋರ್ ಹಾಗೂ ಮತ್ತಿವನ ಸ್ನೇಹಿತ ಜಯೇಶ್ ನಡುವಿನ ಸಂಭಾಷಣೆಯೊಂದು ವೈರಲ್ ಆಗಿದೆ. ಈ ಆಡಿಯೋದ ಪ್ರಕಾರ, ಬರೋಬ್ಬರಿ 400 ಕೋಟಿ ಹಣ ಗುಜರಾತ್​​ನ ರಾಜಕಾರಣಿಗೆ ಸೇರಿದ್ದು ಎನ್ನಲಾಗಿದೆ. ಆಡಿಯೋದಲ್ಲಿ ಹೇಳೋ ರೀತಿ ನೋಡಿದ್ರೆ, ದರೋಡೆಯಾದ ಹಣದಲ್ಲಿ ಗುಜರಾತ್​ನ ರಾಜಕಾರಣಿಯದ್ದು ಬಹುಪಾಲಿದೆ. ಹಾಗಂತ ಕಿಶೋರ್​ನ ಹಣ ಇಲ್ಲ ಅಂತಲ್ಲ. ಇವರ ಪಾಲು ಕೂಡ ಇದೆ. ಹೀಗಾಗಿ ತಿರುಪತಿಯಲ್ಲಿ ದರೋಡೆಯಾದ 2 ಸಾವಿರ ಮುಖಬೆಲೆಯ ಹಳೇ ನೋಟುಗಳನ್ನ ಎಕ್ಸ್​ಚೇಂಜ್ ಆಗಿತ್ತು. ಇದರ ಮಧ್ಯಸ್ಥಿಕೆಯನ್ನ ಕಿಶೋರ್ ವಹಿಸಿಕೊಂಡಿದ್ದ.

400 ಕೋಟಿ ದರೋಡೆ ಆಗಿದ್ಹೇಗೆ?

ಇನ್ನು ಅಸಲಿಗೆ ದರೋಡೆ ಹೇಗಾಯ್ತು? ಯಾರಿಗೆ ಯಾವ ಜವಾಬ್ದಾರಿಯನ್ನ ಕೊಡಲಾಗಿತ್ತು ಅನ್ನೋದನ್ನ ನೋಡೋದಾದ್ರೆ, ಮಧ್ಯವರ್ತಿಯಾಗಿ ಕೆಲಸ ಮಾಡ್ತಿದ್ದ ಕಿಶೋರ್, ಗುಜರಾತ್​​ ರಾಜಕಾರಣಿಯ ಹಣ ಬದಲಾಯಿಸುವ ಜವಾಬ್ದಾರಿ ಹೊತ್ತುಕೊಂಡಿದ್ದ. ಹೀಗಾಗಿ 400 ಕೋಟಿ ಸಾಗಾಟ ಮಾಡೋ ಕೆಲಸವನ್ನ ಸ್ನೇಹಿತ ವಿರಾಟ್​ಗೆ ಕೊಟ್ಟಿದ್ದ. ವಿರಾಟ್ ತನ್ನ ಹುಡುಗರಿಗೆ ಹಣ ಸಾಗಾಟ ಜವಾಬ್ದಾರಿ ನೀಡಿದ್ದ. ಹೀಗಾಗಿ ಈ ಹುಡುಗರು ಎರಡು ಕಂಟೇನರ್​ಗಳಲ್ಲಿ ಹಣ ತೆಗೆದುಕೊಂಡು ಹೋಗಿದ್ರು. ನೋಟು ಎಕ್ಸ್​ಚೇಂಜ್ ಮಾಡೋಕೆ ಗೋವಾದಿಂದ ಸಾಗಾಟ ಮಾಡ್ತಿದ್ರು. ನೆಟ್​ವರ್ಕ್ ಸಿಗದ ಚೋರ್ಲಾ ಘಾಟ್​​ನಲ್ಲಿ ಕಂಟೇನರ್ ಮಿಸ್ ಆಗಿತ್ತು. ಬರೀ ಕಂಟೇನರ್ ಅಷ್ಟೇ ಅಲ್ಲ. ವಿರಾಟ್ ಹುಡುಗರು ಕೂಡ ನಾಪತ್ತೆ ಆಗಿದ್ದಾರೆ. ಸದ್ಯ ಮಹಾರಾಷ್ಟ್ರ ಪೊಲೀಸರು ವಿರಾಟ್​ನನ್ನ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಮಹಾರಾಷ್ಟ್ರ ಎಸ್​ಐಟಿ ಅಧಿಕಾರಿಗಳು ಪ್ರಕರಣವನ್ನ ಕೆದಕುತ್ತಿದ್ದಾರೆ. ಈ ತನಿಖೆಯ ಗುಜರಾತ್​ನ ರಾಜಕಾರಣಿ ಯಾರು? ಇಷ್ಟು ಹಣವನ್ನ ಯಾಕೆ ಎಕ್ಸ್​​ಚೇಂಜ್ ಮಾಡುತ್ತಿದ್ದರು? ತಿರುಪತಿಯಲ್ಲಿ ಹಳೇ ನೋಟುಗಳಿಗೆ ಬದಲಾಗಿ ಯಾರು ನೋಟು ಕೊಡುತ್ತಾರೆ?ಇದು ಬರೀ 4 ಜನರ ನಡುವಿನ ವ್ಯವಹಾರನಾ? ಅಥವಾ ಇದರ ಹಿಂದೆ ದೊಡ್ಡ ಜಾಲವೇ ಇದ್ಯಾ ಎನ್ನುವುದು ಬಯಲಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ