ಬೆಳಗಾವಿಯಲ್ಲಿ ಮಳೆಯ ಆರ್ಭಟ; ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿ ಶವವಾಗಿ ಪತ್ತೆ

| Updated By: sandhya thejappa

Updated on: Jul 24, 2021 | 9:29 AM

ಜಿಲ್ಲೆಯ ಚಿಕ್ಕೋಡಿ ಪಟ್ಟಣದ ರಾಮನಗರ ಕಾಲೋನಿಯ ಕಿರಣಾ ವಿಭೂತಿ (10) ಶವವಾಗಿ ಪತ್ತೆಯಾದ ಬಾಲಕಿ. ನಿನ್ನೆ (ಜುಲೈ 23) ಸಂಜೆ ಮನೆಗೆ ವಾಪಾಸ್ ಆಗುತ್ತಿರುವಾಗ ಬಾಲಕಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಳು.

ಬೆಳಗಾವಿಯಲ್ಲಿ ಮಳೆಯ ಆರ್ಭಟ; ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿ ಶವವಾಗಿ ಪತ್ತೆ
ಬಾಲಕಿ ಕಿರಣಾ ವಿಭೂತಿ, ಬಾಲಕಿ ಶವ ಕಂಡು ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Follow us on

ಬೆಳಗಾವಿ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಜಿಲ್ಲೆಯ ಚಿಕ್ಕೋಡಿ ಪಟ್ಟಣದ ರಾಮನಗರ ಕಾಲೋನಿಯ ಕಿರಣಾ ವಿಭೂತಿ (10) ಶವವಾಗಿ ಪತ್ತೆಯಾದ ಬಾಲಕಿ. ನಿನ್ನೆ (ಜುಲೈ 23) ಸಂಜೆ ಮನೆಗೆ ವಾಪಾಸ್ ಆಗುತ್ತಿರುವಾಗ ಬಾಲಕಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಳು. ಇಂದು ಎಸ್​ಡಿಆರ್​ಎಫ್ ತಂಡ ಕಾರ್ಯಾಚರಣೆ ಮಾಡಿ ಬಾಲಕಿಯ ಶವವನ್ನು ಹೊರತೆಗೆದಿದ್ದಾರೆ. ಬಾಲಕಿ ಶವ ಹೊರ ತೆಗೆಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿದೆ.

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ

ಜಿಲ್ಲೆಯ ಖಾನಾಪುರ ತಾಲೂಕಿನ ವಾಘವಾಡೆ ಬಳಿ ಏಕಾಏಕಿ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದ ಹಿನ್ನೆಲೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಹಳ್ಳದ ನೀರಿನಲ್ಲಿ ಸಿಲುಕಿ ಕೊಚ್ಚಿ ಹೋಗುತ್ತಿದ್ದ. ಈ ವೇಳೆ ಹಗ್ಗ ಎಸೆದು ಯುವಕನನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಈ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

ಹುಕ್ಕೇರಿ ತಾಲೂಕಿನ ಚಿಕ್ಕಾಲಗುಡ್ಡ ಗ್ರಾಮದಲ್ಲಿ ಮನೆ ಕಳೆದುಕೊಂಡವರು ಕಣ್ಣೀರು ಹಾಕುತ್ತಿದ್ದಾರೆ. ಈಗಾಗಲೇ ನಮ್ಮ ಮನೆಗಳು ಬಿದ್ದು ಹೋಗಿವೆ. ಬಟ್ಟೆ ಬಿಟ್ಟರೆ ಬೇರೆ ಏನೂ ತೆಗೆದುಕೊಳ್ಳದೆ ಮನೆಯಿಂದ ಬಂದಿದ್ದೇವೆ. ಜೀವ ಉಳಿದರೆ ಸಾಕು ಅಂತಾ ಬಂದಿದ್ದೇವೆ. ಈಗ ಮನೆಗಳು ಬಿದ್ದಿವೆ. ಮುಳುಗಿದ ಮನೆ ಕಡೆ ಹೋದರೆ ನಮ್ಮ ಕೈಕಾಲು ನಡುಗುತ್ತೆ. ಸರ್ಕಾರ ಸಹಾಯ ಮಾಡಿದರೆ ನಾವು ಬದುಕುತ್ತೇವೆ ಅಂತಾ ಟಿವಿ9 ಕ್ಯಾಮೆರಾ ಮುಂದೆ ಕಣ್ಣೀರಿಡುತ್ತಾ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ

ಚಾರ್ಮಾಡಿ ಘಾಟ್​ ಬಳಿ ಟ್ರಾಫಿಕ್​ ಜಾಮ್​; ಭಾರೀ ಮಳೆಯ ನಡುವೆ ವಾಹನ ಸವಾರರ ಪರದಾಟ

ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಿರಣ್ಯಕೇಶಿ ನದಿ; ಹೊಸದಾಗಿ ಕಟ್ಟಿಕೊಂಡಿದ್ದ ಮನೆಗಳು ಸಂಪೂರ್ಣ ಜಲಾವೃತ

(Heavy Rain in Belagavi and Girl dead body found)

Published On - 9:26 am, Sat, 24 July 21