ಅಂತರ್ಜಾತಿ ವಿವಾಹಕ್ಕೆ ನೆರವಾದ ಪುರೋಹಿತನ ಕೊಲೆ: ಆರೋಪಿ ಪ್ಲ್ಯಾನ್​​ಗೆ ಪೊಲೀಸರೇ ದಂಗು!

ಅಂತರ್ಜಾತಿ ವಿವಾಹ ನೆರವೇರಿಸಿದ್ದರೆಂಬ ಕೋಪಕ್ಕೆ ಮಹಾರಾಷ್ಟ್ರದ ಪುರೋಹಿತನನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಬಳಿ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ತಾಂತ್ರಿಕ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಹತ್ಯೆಗೆ ಬಳಸಿದ್ದ ಎನ್ನಲಾದ ಆಯುಧವನ್ನೂ ವಶಪಡಿಸಿಕೊಳ್ಳಲಾಗಿದೆ.

ಅಂತರ್ಜಾತಿ ವಿವಾಹಕ್ಕೆ ನೆರವಾದ ಪುರೋಹಿತನ ಕೊಲೆ: ಆರೋಪಿ ಪ್ಲ್ಯಾನ್​​ಗೆ ಪೊಲೀಸರೇ ದಂಗು!
ಸಾಂದರ್ಭಿಕ ಚಿತ್ರ
Image Credit source: Getty Images

Updated on: Nov 06, 2026 | 4:12 PM

ಬೆಳಗಾವಿ, ನವೆಂಬರ್​​ 06: ಅಂತರ್ಜಾತಿ ವಿವಾಹಕ್ಕೆ ನೆರವು ನೀಡಿದ ಕಾರಣಕ್ಕೆ ಮಹಾರಾಷ್ಟ್ರದ ಪುರೋಹಿತ ಮತ್ತು ಮದುವೆ ಮಧ್ಯವರ್ತಿಯೂ ಆಗಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೊಲ್ಹಾಪುರ ಜಿಲ್ಲೆಯ ಇಚಲಕರಂಜಿ ನಿವಾಸಿ ಮಂದಾರ್ ಅಜಿತ್ ರಾಣಡೆ (35) ಮೃತರಾಗಿದ್ದು, ಅಕ್ಟೋಬರ್ 31ರಂದು ನಿಪ್ಪಾಣಿ ತಾಲೂಕಿನ ಮಾಣಕಾಪುರ ಗ್ರಾಮದ ಹೊರವಲಯದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಮಹಾರಾಷ್ಟ್ರದ ಶಿರಡವಾಡ ಗ್ರಾಮದ ಬಬಾಸೊ ಅಲಿಯಾಸ್ ದೀಪಕ್ ಅಣ್ಣಾ ಮಗದುಮ್ ಎಂಬಾತನನ್ನು ಬಂಧಿಸಿದ್ದಾರೆ.

ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಹತ್ಯೆ

ಪೊಲೀಸರ ಪ್ರಕಾರ, ಈ ವರ್ಷದ ಆರಂಭದಲ್ಲಿ ನಡೆದಿದ್ದ ಅಂತರ್ಜಾತಿ ವಿವಾಹವೇ ಹತ್ಯೆಗೆ ಕಾರಣವಾಗಿದೆ. ಆರೋಪಿಯ ಸಂಬಂಧಿಯೊಬ್ಬರು ಮನೆಬಿಟ್ಟು ಬಂದು ಜನವರಿ 13ರಂದು ಬೇರೆ ಜಾತಿಯ ಯುವಕನನ್ನು ವಿವಾಹವಾಗಿದ್ದರು. ಈ ಮದುವೆ ಮಾಡಿಸಲು ರಾಣಡೆ ನೆರವು ನೀಡಿದ್ದಾರೆ ಎಂದು ಆರೋಪಿಗೆ ಸಿಟ್ಟಿತ್ತು. ಹೀಗಾಗಿ ರಾಣಡೆ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಹತ್ಯೆ ಮಾಡಲು ಆರೋಪಿ ಯೋಜನೆ ರೂಪಿಸಿದ್ದ. ಅದರಂತೆ ಅಕ್ಟೋಬರ್ 31ರಂದು ಬೇರೆ ಮೊಬೈಲ್ ಸಂಖ್ಯೆಯಿಂದ ರಾಣಡೆಗೆ ಕರೆ ಮಾಡಿ, ಮದುವೆ ಮಾಡಿಸಲು ಸಹಾಯ ಬೇಕಿದೆ ಎಂದು ಹೇಳಿದ್ದಾನೆ. ಈ ಮನವಿಯನ್ನು ನಿಜವೆಂದು ನಂಬಿದ ರಾಣಡೆ ಇಚಲಕರಂಜಿಯಿಂದ ಮಾಣಕಾಪುರ ಗ್ರಾಮಕ್ಕೆ ಬಂದಿದ್ದರು ಎನ್ನಲಾಗಿದೆ.

Loading...

ಇದನ್ನೂ ಓದಿ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟ ವಾಪಸ್: 3,600 ದರಕ್ಕೆ ತೃಪ್ತಿಪಟ್ಟ ರೈತರು

ಆರೋಪಿ ಮೊದಲು ರಾಣಡೆಯ ಕಣ್ಣಿಗೆ ಮೆಣಸಿನ ಪುಡಿ ಎರಚಿದ್ದು, ಬಳಿಕ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ರಾಣಡೆ ಪ್ರತಿರೋಧ ತೋರುವ ಮೊದಲೇ ಅವರ ಕುತ್ತಿಗೆ ಮತ್ತು ಗಂಟಲಿನ ಭಾಗಕ್ಕೆ ಹಲವು ಬಾರಿ ಇರಿದು ಹತ್ಯೆ ಮಾಡಿದ್ದಾನೆ . ಪ್ರಕರಣ ಸಂಬಂಧ ತಾಂತ್ರಿಕ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಹತ್ಯೆಗೆ ಬಳಸಿದ್ದ ಎನ್ನಲಾದ ಆಯುಧವನ್ನೂ ವಶಪಡಿಸಿಕೊಳ್ಳಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us