ಬೆಳಗಾವಿ: ಮಗಳಿಗೆ ಬಾಲ್ಯವಿವಾಹ ಬೇಡ ಅಂದಿದ್ದಕ್ಕೆ ಪತ್ನಿ ಕಾಲು ಮುರಿದ ಪತಿ, ಮಹಿಳೆ ಆಸ್ಪತ್ರೆಗೆ ದಾಖಲು

ಆಸ್ತಿ ಆಸೆಗೆ ಬಿದ್ದ ಪತಿ ಹುಚ್ಚು ಹುಡುಗನ್ನು ತನ್ನ ಮಗಳಿಗೆ ಮದುವೆ ಮಾಡಲು ಮುಂದಾಗಿದ್ದ. ಆದರೆ ಪತ್ನಿ ಮದುವೆ ನಿರಾಕರಿಸಿದ್ದು ಮಗಳಿಗಿನ್ನು ಕೇವಲ 13 ವರ್ಷ, ಬಾಲ್ಯ ವಿವಾಹ ಬೇಡ. ಆಕೆಯನ್ನು ಚನ್ನಾಗಿ ಓದಿಸೋಣ ಎಂದು ಬುದ್ದಿ ಕೇಳಿದಕ್ಕೆ ಪತ್ನಿ ಮೇಲೆ ಹಲ್ಲೆ ನಡೆಸಿ ಕೈ-ಕಾಲು ಮುರಿದಿದ್ದಾನೆ.

ಬೆಳಗಾವಿ: ಮಗಳಿಗೆ ಬಾಲ್ಯವಿವಾಹ ಬೇಡ ಅಂದಿದ್ದಕ್ಕೆ ಪತ್ನಿ ಕಾಲು ಮುರಿದ ಪತಿ, ಮಹಿಳೆ ಆಸ್ಪತ್ರೆಗೆ ದಾಖಲು
ಸಾಂದರ್ಭಿಕ ಚಿತ್ರ
Follow us
Sahadev Mane
| Updated By: ಆಯೇಷಾ ಬಾನು

Updated on: Mar 12, 2024 | 8:29 AM

ಬೆಳಗಾವಿ, ಮಾರ್ಚ್​.12: ಮಗಳಿಗೆ ಬಾಲ್ಯವಿವಾಹ (Child Marriage) ಮಾಡಿಸುವುದು ಬೇಡ ಅಂದಿದ್ದಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗಿದ್ದು ಪತಿ ತನ್ನ ಪತ್ನಿ ಕಾಲು ಮುರಿದು ವಿಕೃತಿ ಮೆರೆದಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಾರುಗೊಪ್ಪ ಗ್ರಾಮದಲ್ಲಿ ನಡೆದಿದೆ. ಮಗಳಿಗೆ (Daughter) ಕೇವಲ 13 ತುಂಬಿದೆ. ವಯಸ್ಸು ಚಿಕ್ಕದು ಮದುವೆ ಬೇಡ. ಮಗಳನ್ನು ಚನ್ನಾಗಿ ಓದಿಸೋಣ ಎಂದು ಹೇಳಿದಕ್ಕೆ ಬೀರಪ್ಪ ಎಂಬ ವ್ಯಕ್ತಿ ತನ್ನ ಹೆಂಡತಿ ಮಾಯವ್ವಾಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಸದ್ಯ ಮಾಯವ್ವಾ ಬೈಲಹೊಂಗಲ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೂರು ದಾಖಲಿಸಿದ್ದರೂ ಪೊಲೀಸರಿಂದ ಯಾವುದೇ ಕ್ರಮ ಜರುಗಿಲ್ಲ.

ಹಾರುಗೊಪ್ಪ ಗ್ರಾಮದ ಬೀರಪ್ಪ ತನ್ನ ಮಗಳಿಗೆ ಬಾಲ್ಯವಿವಾಹ ಮಾಡಿಸಲು ಮುಂದಾಗಿದ್ದರು. ಪತ್ನಿ ಮಾಯವ್ವಾ ಇದನ್ನು ನಿರಾಕರಿಸಿದಕ್ಕೆ ಹಲ್ಲೆ ನಡೆದಿದೆ. ಮಗಳಿಗೆ 13ವರ್ಷ, ವಯಸ್ಸು ಚಿಕ್ಕದು ಮದುವೆ ಬೇಡ. ಒಳ್ಳೆಯ ಶಿಕ್ಷಣ ಕೊಡಿಸೋಣ ಮದುವೆ ಬೇಡ. ಬಾಲ್ಯ ವಿವಾಹ ಸಮಸ್ಯೆ ಆಗುತ್ತೆ ಎಂದು ಪತಿಗೆ ಬುದ್ದಿವಾದ ಹೇಳಿದಕ್ಕೆ ಕೋಪಗೊಂಡ ಪತಿ, ಮದುವೆ ಬೇಡಾ ಅಂತಿಯಾ? ಎಂದು ಹೆಂಡತಿ ಕೈ ಕಾಲು ಮುರಿದಿದ್ದಾನೆ.

ಇದನ್ನೂ ಓದಿ: Bengaluru Water crisis: ಕುಡಿಯುವ ನೀರಿನ ಬಳಕೆಗೆ ಹಲವು ನಿರ್ಬಂಧ, ಮನೆ ಮಾಲೀಕರಿಗೆ ಸಂಕಷ್ಟ

ತನ್ನ ಅಣ್ಣನ ಹೆಂಡತಿ ಮನೆಯ ಹುಡಗನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿಸಲು ಬೀರಪ್ಪನ ಮುಂದಾಗಿದ್ದ. 40 ಎಕರೆ ಜಮೀನು ಇದೆ, ನಿಮ್ಮ ಮಗಳು ಚೆನ್ನಾಗಿರುತ್ತಾಳೆ ಎಂದು ಬೀರಪ್ಪನ ಅತ್ತಿಗೆ ಮನೆಯವರು ಬೀರಪ್ಪನಿಗೆ ತಲೆ ಕೆಡಿಸಿದ್ದರು. ಹುಡುಗ ಸ್ವಲ್ಪ ಹುಚ್ಚನ ತರ ಇದ್ದಾನೆ, ಅವನಿಗೆ ಕೊಟ್ಟರೆ ಆಸ್ತಿ ಸಿಗುತ್ತೆ ಅಂತಾ ಬೀರಪ್ಪ ಲೆಕ್ಕಾಚಾರ ಹಾಕಿದ್ದ. ಹೀಗಾಗಿ ಮದುವೆ ಮಾಡಲು ಮುಂದಾಗಿದ್ದ. ಆದರೆ ಇದಕ್ಕೆ ಮಾಯವ್ವಾ ನಿರಾಕರಿಸಿದ್ದಾರೆ. ಪತಿಯ ನಿರ್ಧಾರಕ್ಕೆ ವಿರೋಧಿಸಿದ್ದಕ್ಕೆ ಪತ್ನಿಯ ಮೇಲೆ ಹಲ್ಲೆ ನಡೆಸಿ ಕೈ ಕಾಲು ಮುರಿದಿದ್ದಾನೆ. ಮಾಯವ್ವಾ ಅವರನ್ನು ಬೈಲಹೊಂಗಲ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದಕ್ಕೆಲ್ಲಾ ಸೂತ್ರಧಾರಿ ಬೀರಪ್ಪನ ಅಣ್ಣ ಹಾಗೂ ಅವನ ಹೆಂಡತಿ ಮನೆಯವರು ಎಂದು ಮಾಯವ್ವಾ ಆರೋಪ ಮಾಡಿದ್ದಾರೆ. ಪ್ರಕರಣ ದಾಖಲಾದ್ರೂ ಪೋಲಿಸರು ಅವರನ್ನ ಬಂಧಿಸಿಲ್ಲ ಅಂತಾ ಮಹಿಳೆ ಆಕ್ರೋಶ ಹೊರ ಹಾಕಿದ್ದಾರೆ. ಮುರಗೋಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ