AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಪಿಟಿಸಿಎಲ್​ ಪರೀಕ್ಷೆಯಲ್ಲಿ ನಕಲು ವಿಚಾರ: ಒಬ್ಬೊಬ್ಬ ಅಭ್ಯರ್ಥಿಗಳಿಂದ ಎಂಟು ಲಕ್ಷಕ್ಕೆ ಡೀಲ್

ಕೀ ಆನ್ಸರ್ ಬಂದಕೂಡಲೇ ಮೂರು ಲಕ್ಷ, ರಿಸಲ್ಟ್ ಬಂದ ನಂತರ ಐದು ಲಕ್ಷ ನೀಡುವಂತೆ ಅಭ್ಯರ್ಥಿಗಳೊಂದಿಗೆ ಒಪ್ಪಂದ ಮಾಡಲಾಗಿತ್ತು ಎನ್ನಲಾಗುತ್ತಿದೆ.

ಕೆಪಿಟಿಸಿಎಲ್​ ಪರೀಕ್ಷೆಯಲ್ಲಿ ನಕಲು ವಿಚಾರ: ಒಬ್ಬೊಬ್ಬ ಅಭ್ಯರ್ಥಿಗಳಿಂದ ಎಂಟು ಲಕ್ಷಕ್ಕೆ ಡೀಲ್
ಹಣ (ಸಂಗ್ರಹ ಚಿತ್ರ)
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 26, 2022 | 8:57 AM

Share

ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗೆ (KPTCL) ನಡೆದ ಪರೀಕ್ಷೆಯಲ್ಲಿ ನಕಲು ವಿಚಾರ ಸಂಬಂಧ ನಾಲ್ಕೂವರೆ ಲಕ್ಷಕ್ಕೆ ಪ್ರಶ್ನೆ ಪತ್ರಿಕೆ ಲೀಕ್ ಮಾಡಿ ಕಳುಹಿಸಲು ಗದಗ ಮುನ್ಸಿಪಲ್ ಕಾಲೇಜು ಉಪ ಪ್ರಾಂಶುಪಾಲ ಮಾರುತಿ ಜತೆಗೆ ಡೀಲ್ ಮಾಡಲಾಗಿದೆ. ಮಾರುತಿ ಮಗ ಸಮಿತಕುಮಾರ್ ಸೋನವಣಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದ. ಒಬ್ಬೊಬ್ಬ ಅಭ್ಯರ್ಥಿಗಳಿಗೆ ಎಂಟು ಲಕ್ಷಕ್ಕೆ ಡೀಲ್ ಮಾಡಿದ್ದು, ಕಿಂಗ್ ಪಿನ್ ಸಂಜು ಭಂಡಾರಿ ಜತೆಗೆ ಅಭ್ಯರ್ಥಿಗಳು ಹಣದ ವ್ಯವಹಾರ ಮಾಡಿದ್ದರು. ಕೀ ಆನ್ಸರ್ ಬಂದಕೂಡಲೇ ಮೂರು ಲಕ್ಷ, ರಿಸಲ್ಟ್ ಬಂದ ನಂತರ ಐದು ಲಕ್ಷ ನೀಡುವಂತೆ ಒಪ್ಪಂದ ಮಾಡಲಾಗಿದೆ. ಆರೋಪಿ ಸುನೀಲ್ ಭಂಗಿ ಪರೀಕ್ಷಾರ್ಥಿಗಳನ್ನ ಸಂಜು ಭಂಡಾರಿಗೆ ಪರಿಚಯ ಮಾಡ್ತಿದ್ದ. ಹೀಗೆ ಪರೀಕ್ಷೆ ಪಾಸ್ ಮಾಡಿಸಿ ಕೊಡುವ ಡೀಲ್ ಮಾಡಿ  ಕಿಂಗ್ ಪಿನ್ ಸಂಜು ಕೋಟ್ಯಾಂತರ ಹಣ ಸಂಪಾದಿಸಿದ್ದ. ಕಳೆದ ವರ್ಷ ಸಿವಿಲ್ ಪೊಲೀಸ್ ಕಾಂಸ್ಟೆಬಲ್ ಪರೀಕ್ಷೆಯಲ್ಲಿ ನಕಲು ಮಾಡಿಸಿ ಸಂಜು ಭಂಡಾರಿ ಅರೆಸ್ಟ್ ಕೂಡ ಆಗಿದ್ದ.

ಪ್ರಶ್ನೆ ಪತ್ರಿಕೆಯ ಪೋಟೊ ತೆಗೆದು ಕಿಂಗ್ ಪಿನ್​​ಗೆ ರವಾನೆ:

ಜಾಮೀನು ಮೇಲೆ ಹೊರ ಬಂದು ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲೂ ನಕಲು ಮಾಡಿದ್ದು, ಸದ್ಯ ತಲೆಮರೆಸಿಕೊಂಡಿರುವ ಸಂಜು ಭಂಡಾರಿಗೆ ಶೋಧಕಾರ್ಯ‌ ಮುಂದುವರೆದಿದೆ. ಗದಗ ಮುನ್ಸಿಪಲ್ ಪಿಯು ಕಾಲೇಜಿನಿಂದ ಪ್ರಶ್ನೆಪತ್ರಿಕೆ ಲೀಕ್ ಮಾಡಿದ್ದು, ಮುನ್ಸಿಪಲ್ ಕಾಲೇಜು ಉಪಪ್ರಾಂಶುಪಾಲ, ಆತನ ಮಗ ಮತ್ತು ರೂಮ್ ಸುಪರ್ ವೈಸರ್​ನಿಂದ ಪತ್ರಿಕೆ ಸೋರಿಕೆ ಮಾಡಲಾಗಿದೆ. ಗೈರಾದ ಅಭ್ಯರ್ಥಿ ಪ್ರಶ್ನೆ ಪತ್ರಿಕೆಯ ಪೋಟೊ ತೆಗೆದು ಕ್ಯಾಮ್ ಸ್ಕ್ಯಾನರ್‌ದಿಂದ ಕಿಂಗ್ ಪಿನ್ ಸಂಜು ಭಂಡಾರಿ ಮೊಬೈಲ್‌ಗೆ ಪೇಪರ್ ರವಾನೆ ಮಾಡಲಾಗಿದೆ.

ಇದನ್ನೂ ಓದಿ: KPTCL: ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ: ಮತ್ತೆ ಮೂವರ ಬಂಧನ

ಮೂರು ಜನ ಅಭ್ಯರ್ಥಿ ಸೇರಿ 12 ಜನr ಬಂಧನ:

ಗೋಕಾಕ್ ಡಿವೈಎಸ್‌ಪಿ ಮನೋಜಕುಮಾರ್ ನಾಯಕ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಿ ಪರೀಕ್ಷೆಯಲ್ಲಿ ನಕಲು ಮಾಡಿದ ಮತ್ತು ಪೇಪರ್ ಲೀಕ್ ಮಾಡಿದ ಕತರ್ನಾಕ್ ಆಸಾಮಿಗಳ ಬಂಧನ ಮಾಡಲಾಗಿದೆ. ಈವರೆಗೂ ಪ್ರಕರಣದಲ್ಲಿ ಮೂರು ಜನ ಅಭ್ಯರ್ಥಿ ಸೇರಿ 12 ಜನ ಆರೋಪಿಗಳ ಬಂಧನ ಮಾಡಿದ್ದು, ಬೆಳಗಾವಿ, ಗದಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲಾಗಿತ್ತು. ಸ್ಮಾರ್ಟ್ ವಾಚ್, ಬ್ಲ್ಯೂಟೂತ್ ಡಿವೈಸ್ ಬಳಸಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಅಕ್ರಮ ಮಾಡಿದ್ದು, ಗೋಕಾಕ್​ನಲ್ಲಿ ನಕಲು ಮಾಡಿ ಪರೀಕ್ಷಾರ್ಥಿ ಸಿದ್ದಪ್ಪ ಮದೀಹಳ್ಳಿ‌ ಸಿಕ್ಕಿ ಬಿದ್ದಿದ್ದ.

ಸಿದ್ದಪ್ಪನನ್ನ ಬಂಧಿಸಿ ವಿಚಾರಣೆ ಕೈಗೊಂಡಾಗ ಪರೀಕ್ಷಾ ಅಕ್ರಮದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಹೇಳಿಕೆ, ಆಗ ಬಳಸಿದ್ದ ಸೀಮ್, ಕಾಲ್ ರೆಕಾರ್ಡ್ ಆಧರಿಸಿ ತನಿಖೆ ನಡೆಸಿ 12 ಜನರ ಬಂಧನ ಮಾಡಲಾಗಿದೆ. ಮೂರು ಜನ ಕಿಂಗ್ ಪಿನ್​ಗಾಗಿ ಶೋಧ ಕಾರ್ಯ ಮುಂದುವರೆದಿದ್ದು, ಪ್ರಕರಣದ ತನಿಖೆಗೆ ಎಸ್‌.ಪಿ ಸಂಜೀವ ಪಾಟೀಲ್ ಪ್ರತ್ಯೇಕ ತಂಡ ರಚನೆ ಮಾಡಿದ್ದಾರೆ. 1400 ಹುದ್ದೆಗಳಿಗೆ ನಡೆದಿದ್ದ ಪರೀಕ್ಷೆಗೆ ರಾಜ್ಯಾದ್ಯಂತ 3ಲಕ್ಷ ಜನ‌ ಅಭ್ಯರ್ಥಿಗಳು ಹಾಜರಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:50 am, Fri, 26 August 22

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!