ಬೆಳಗಾವಿ: ಬರದಿಂದ ಕಂಗೆಟ್ಟ ಅನ್ನದಾತನಿಗೆ ಆಸರೆಯಾದ ಉದ್ಯೋಗ ಖಾತರಿ ಕೆಲಸ; ಕೂಲಿ ಹೆಚ್ಚಿಸುವಂತೆ ಸರ್ಕಾರಕ್ಕೆ ರೈತರ ಮನವಿ
ಈಗಾಗಲೇ ಚಿಕ್ಕೋಡಿ ಬರಪೀಡಿತ ತಾಲೂಕು ಎಂದು ಸರ್ಕಾರ ಘೋಷಿಸಿದೆ. ಅದರಂತೆ ಬರಪೀಡಿತ ತಾಲೂಕುಗಳಲ್ಲಿ ಹೆಚ್ಚುವರಿ 50 ದಿನ ಉದ್ಯೋಗ ನೀಡುವ ಅವಕಾಶವಿದೆ. ಆದ್ರೆ, ಹೆಚ್ಚುವರಿ 50 ದಿನ ಸಾಲಲ್ಲ, ಕನಿಷ್ಠ ನೂರು ದಿನಗಳವರೆಗೆ ಉದ್ಯೋಗ ದಿನ ಹೆಚ್ಚಿಸಬೇಕು ಎಂದು ರೈತರು ಸರ್ಕಾರಕ್ಕೆ ಮನವಿ ನೀಡಿದ್ದಾರೆ.
ಬೆಳಗಾವಿ, ಸೆ.14: ರಾಜ್ಯಾದ್ಯಂತ ಬರಗಾಲದ ಛಾಯೆ ಮೂಡಿದೆ. ಈ ಹೊತ್ತಲ್ಲಿ ರೈತರಿಗೆ ಆಸರೆಯಾಗಿರುವುದು ಉದ್ಯೋಗ ಖಾತರಿ ಯೋಜನೆ (Udyoga Khatri Yojane). ಹೌದು, ಸಮರ್ಪಕ ಮಳೆ ಆಗದ ಹಿನ್ನೆಲೆ ಚಿಕ್ಕೋಡಿ (Chikkodi) ಭಾಗದಲ್ಲಿ ಭೀಕರ ಬರಗಾಲ ಪರಿಸ್ಥಿತಿ ಎದುರಾಗಿದೆ. ಇದರಿಂದ ಕೆಲಸಗಳಿಗೆ ಬೇಡಿಕೆ ಹೆಚ್ಚಿದ್ದು, ಕೆಲಸವಿಲ್ಲದೇ ಹಳ್ಳದ ಹೂಳೆತ್ತಲು ಬಂದ ಅನ್ನದಾತನಿಗೆ ಈ ಯೋಜನೆಯ ಕೆಲಸವೇ ಆಧಾರವಾಗಿದೆ. ಸದ್ಯ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಪ್ರತಿ ಕುಟುಂಬಕ್ಕೆ ನೂರು ದಿನಗಳ ಕೆಲಸ ನೀಡಿ, ಪ್ರತಿ ದಿನಕ್ಕೆ 316 ರೂಪಾಯಿ ಕೂಲಿ ಹಣವನ್ನು ನೀಡಲಾಗುತ್ತಿದೆ. ಇದೀಗ ಇದನ್ನು ಹೆಚ್ಚಿಸುವಂತೆ ರೈತರು ಒತ್ತಾಯಿಸಿದ್ದಾರೆ.
ಬರಪೀಡಿತ ತಾಲೂಕುಗಳಲ್ಲಿ ಹೆಚ್ಚುವರಿ 50 ದಿನ ಉದ್ಯೋಗ
ಇನ್ನು ಈಗಾಗಲೇ ಚಿಕ್ಕೋಡಿ ಬರಪೀಡಿತ ತಾಲೂಕು ಎಂದು ಸರ್ಕಾರ ಘೋಷಿಸಿದೆ. ಅದರಂತೆ ಬರಪೀಡಿತ ತಾಲೂಕುಗಳಲ್ಲಿ ಹೆಚ್ಚುವರಿ 50 ದಿನ ಉದ್ಯೋಗ ನೀಡುವ ಅವಕಾಶವಿದೆ. ಆದ್ರೆ, ಹೆಚ್ಚುವರಿ 50 ದಿನ ಸಾಲಲ್ಲ, ಕನಿಷ್ಠ ನೂರು ದಿನಗಳವರೆಗೆ ಉದ್ಯೋಗ ದಿನ ಹೆಚ್ಚಿಸುವುದರ ಜೊತೆಗೆ ಕೂಲಿಯನ್ನು ಹೆಚ್ಚಿಸುವಂತೆ ಬಂಬಲವಾಡ ಗ್ರಾಮದ ಅನ್ನದಾತ ಅಪ್ಪಾಸಾಹೇಬ್ ಎಂಬ ರೈತರೊಬ್ಬರು ಟಿವಿ9 ಬಳಿ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:50 ವರ್ಷಗಳ ಬಳಿಕ ಕಾಫಿನಾಡಿನಲ್ಲಿ ಬರಗಾಲದ ಕಾರ್ಮೋಡ; ಕಾಫಿ ಉಳಿಸಿಕೊಳ್ಳಲು ಸ್ಪಿಂಕ್ಲರ್ ಮೊರೆ ಹೋದ ಬೆಳೆಗಾರರು
ಬಿತ್ತನೆ ಮಾಡಿ ಹಾಳಾದ ಬೆಳೆ
ಹೌದು, ಮನೆಯಲ್ಲಿ ದನಕರುಗಳನ್ನು ಬಿಟ್ಟು ಕೆಲಸಕ್ಕೆ ಬರುತ್ತಿದ್ದೇವೆ. ಒಂದೂವರೆ ಎಕರೆ ಹೊಲದಲ್ಲಿ ಮೆಕ್ಕೆಜೋಳ, ಸೋಯಾಬಿನ್ ಬೆಳೆಯನ್ನು ಎರಡೆರಡು ಬಾರಿ ಬಿತ್ತನೆ ಮಾಡಿ ಹಾಳಾಗಿದೆ. ಇದರ ಜೊತೆಗೆ ಈಗಾಗಲೇ ನಮ್ಮ ಕುಟುಂಬದ ಕೆಲಸದ ನೂರು ದಿನಗಳ ಅವಧಿ ಮುಗಿಯಲು ಕೂಡ ಬಂದಿದೆ. ದಯವಿಟ್ಟು ಇನ್ನೂ ನೂರು ದಿನ ಕೆಲಸ ನೀಡಿ, ಕೂಲಿ ಹಣ ಹೆಚ್ಚು ನೀಡಿ ಎಂದು ಉದ್ಯೋಗ ಖಾತ್ರಿ ಕೆಲಸಕ್ಕೆ ಬಂದ ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಇನ್ನಾದರೂ ಸರ್ಕಾರ ಇತ್ತ ಗಮನಹರಿಸಿ, ಇವರಿಗೆ ಸಹಾಯ ಮಾಡಬೇಕಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ