ಸೈಬರ್ ಕ್ರೈಂ ತಡೆಯಲು ವಿದೇಶದಿಂದ ಯಂತ್ರೋಪಕರಣ ತರಿಸಲಾಗಿದೆ, ತಜ್ಞರನ್ನು ನೇಮಿಸಲಾಗುತ್ತಿದೆ; ಪರಿಷತ್‌ನಲ್ಲಿ ಆರಗ ಜ್ಞಾನೇಂದ್ರ ಮಾಹಿತಿ
ಸೈಬರ್ ಕ್ರೈಂ ಪ್ರಕರಣಗಳನ್ನು ಪತ್ತೆಹಚ್ಚಲು ವಿದೇಶದಿಂದ ಯಂತ್ರೋಪಕರಣಗಳನ್ನು ತರಿಸಿದ್ದೇವೆ. ತಂತ್ರಜ್ಞಾನದ ಬಗ್ಗೆ ಗೊತ್ತಿರುವವರನ್ನು ಕೆಲಸಕ್ಕೆ ನೇಮಿಸಿದ್ದೇವೆ ಎಂದು ವಿಧಾನ ಪರಿಷತ್‌ನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಬೆಳಗಾವಿ: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ವಿಧಾನ ಪರಿಷತ್‌ನಲ್ಲಿ ಇಂದು ಪ್ರಸ್ತಾಪ ಮಾಡಲಾಗಿದೆ. ಸೈಬರ್ ಕ್ರೈಂ ಪ್ರಕರಣಗಳನ್ನು ನಿಯಂತ್ರಿಸಲು ವಿದೇಶದಿಂದ ಯಂತ್ರೋಪಕರಣಗಳನ್ನು ತರಿಸಿದ್ದೇವೆ. ಅಲ್ಲದೆ, ಸೈಬರ್ ಕ್ರೈಂ ಬಗ್ಗೆ ವ್ಯಾಸಂಗ ಮಾಡಿದವರನ್ನು ಹಾಗೂ ತಜ್ಞರನ್ನು ನೇಮಕ ಮಾಡಿಕೊಂಡು ರಾಜ್ಯದಲ್ಲಿ ಸೈಬರ್ ಕ್ರೈಂ ಕೇಸುಗಳನ್ನು ನಿಯಂತ್ರಣಕ್ಕೆ ತರಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಮುನಿರಾಜು ಗೌಡರ ಪ್ರಸ್ತಾಪಕ್ಕೆ ಉತ್ತರ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಬುದ್ಧಿವಂತರು ಕೋಟ್ಯಂತರ ರೂ. ಗಳಿಸಲು ಸೈಬರ್ ಕ್ರೈಂ ಕೃತ್ಯವೆಸಗುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು. ಯಾವುದೋ ರಾಜ್ಯ, ದೇಶದಲ್ಲಿ ಕುಳಿತುಕೊಂಡು ಅಪರಾಧಗಳನ್ನು ಮಾಡುತ್ತಿದ್ದಾರೆ. ಆರೋಪಿಗಳನ್ನು ಹಿಡಿಯಲು ತುಂಬಾ ಕಷ್ಟವಾಗ್ತಿದೆ ಎಂದಿದ್ದಾರೆ.
ಸೈಬರ್ ಕ್ರೈಂ ಪ್ರಕರಣಗಳನ್ನು ಪತ್ತೆಹಚ್ಚಲು ವಿದೇಶದಿಂದ ಯಂತ್ರೋಪಕರಣಗಳನ್ನು ತರಿಸಿದ್ದೇವೆ. ತಂತ್ರಜ್ಞಾನದ ಬಗ್ಗೆ ಗೊತ್ತಿರುವವರನ್ನು ಕೆಲಸಕ್ಕೆ ನೇಮಿಸಿದ್ದೇವೆ. ಕೃತ್ಯ ನಡೆದ 2 ಗಂಟೆಯಲ್ಲೇ 112 ಸಂಖ್ಯೆಗೆ ಕರೆ ಮಾಡಬೇಕು. ಇದನ್ನು ಗೋಲ್ಡನ್ ಅವರ್ ಎನ್ನಲಾಗುತ್ತದೆ. ಗೋಲ್ಡನ್ ಅವರ್‌ನಲ್ಲಿ ಕರೆ ಮಾಡಿದರೆ ಆರೋಪಿಗಳ ಅಕೌಂಟ್ ಜಪ್ತಿ ಮಾಡಲಾಗುವುದು. ಅಕೌಂಟ್ ಜಪ್ತಿ ಮಾಡಿ ಈಗಾಗಲೇ 70 ಕೋಟಿ ರೂ. ಸಂಗ್ರಹಿಸಿದ್ದೇವೆ. ಇದಕ್ಕೆ ಕೇಂದ್ರ ಸರ್ಕಾರ ಕೂಡ ಪ್ರಶಂಸೆ ವ್ಯಕ್ತಪಡಿಸಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಸೈಬರ್ ಕ್ರೈಂ ಪ್ರಕರಣಗಳ ನಿಯಂತ್ರಣಕ್ಕೆ ಮತ್ತಷ್ಟು ನುರಿತ ತಜ್ಞರನ್ನು ನೇಮಿಸಿ, ಕಾರ್ಯಾಚರಣೆಯನ್ನು ಚುರುಕುಗೊಳಿಸುತ್ತೇವೆ. ಸೈಬರ್ ಕ್ರೈಂ ಬಗ್ಗೆ ವ್ಯಾಸಂಗ ಮಾಡಿದವರನ್ನು ನೇಮಕ ಮಾಡಿಕೊಳ್ಳುತ್ತೇವೆ. ಸೈಬರ್ ಕ್ರೈಂ ಬಗ್ಗೆ ವ್ಯಾಸಂಗ ಮಾಡಿದ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುತ್ತಿದ್ದೇವೆ ಎಂದು ವಿಧಾನ ಪರಿಷತ್‌ನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.
ಸೈಬರ್ ಕ್ರೈಂ ಬಗ್ಗೆ ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪಿಸಿದ್ದ ಮುನಿರಾಜು ಗೌಡ, ರಾಜ್ಯದಲ್ಲಿ ಸೈಬರ್ ಕ್ರೈಂ ಜಾಸ್ತಿಯಾಗ್ತಿದೆ. ಇದನ್ನು ಪತ್ತೆಹಚ್ಚಲು ಪೊಲೀಸರು ಎಡುವುತ್ತಿದ್ದಾರೆ ಎಂದಿದ್ದರು. ಇದಕ್ಕೆ ಉತ್ತರ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಬುದ್ಧಿವಂತರು ಕ್ಷಣಾರ್ಧದಲ್ಲಿ ಕೋಟ್ಯಾಂತರ ರೂ. ಗಳಿಸಲು ಸೈಬರ್ ಕ್ರೈಂ ತಂತ್ರ ಹಣೆಯುತ್ತಿದ್ದಾರೆ. ಸಾರ್ವಜನಿಕರು ಈ ಬಗ್ಗೆ ಎಚ್ಚರ ವಹಿಸಬೇಕು. ಸರ್ಕಾರವೂ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದಿದ್ದಾರೆ.
ಇದನ್ನೂ ಓದಿ: Abolish Legislative Council: ಮೊದಲು ವಿಧಾನ ಪರಿಷತ್ ರದ್ದಾಗಬೇಕು- ಸ್ವತಃ ಮೇಲ್ಮನೆ ಸದಸ್ಯ ಲಕ್ಷ್ಮಣ ಸವದಿ ತೀವ್ರ ವಿಷಾದ
ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಆರಂಭ; ವಿಧಾನಸಭೆ ಕಲಾಪ ನೇರ ಪ್ರಸಾರ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ