AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರಪ್ಪಂದೇನ್ ಐತಿ ಬೆಳಗಾವಿ ನಂದೈತಿ, ಸಾಮಾಜಿಕ ಜಾಲತಾಣದಲ್ಲಿ ಚಿರತೆ ಫೋಟೋ ಹಾಕಿ ವ್ಯಂಗ್ಯ

ಅರಣ್ಯ ಇಲಾಖೆ ಈವರೆಗೂ ಸುಮಾರು 30 ರಿಂದ 40 ಲಕ್ಷ ಹಣ ಖರ್ಚು ಮಾಡಿದೆ. ನಿತ್ಯವೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ಖರ್ಚಾಗುತ್ತಿದ್ದರು ಚಿರತೆ ಸಿಗುತ್ತಿಲ್ಲ.

ಯಾರಪ್ಪಂದೇನ್ ಐತಿ ಬೆಳಗಾವಿ ನಂದೈತಿ, ಸಾಮಾಜಿಕ ಜಾಲತಾಣದಲ್ಲಿ ಚಿರತೆ ಫೋಟೋ ಹಾಕಿ ವ್ಯಂಗ್ಯ
ಸಾಮಾಜಿಕ ಜಾಲತಾಣದಲ್ಲಿ ಚಿರತೆ ಫೋಟೋ ಹಾಕಿ ವ್ಯಂಗ್ಯ
ಗಂಗಾಧರ​ ಬ. ಸಾಬೋಜಿ
|

Updated on: Aug 26, 2022 | 11:07 AM

Share

ಬೆಳಗಾವಿ: ಜಿಲ್ಲೆಯ ಗಾಲ್ಫ್ ಮೈದಾನದಲ್ಲಿ ಚಿರತೆ (leopard) ಪ್ರತ್ಯಕ್ಷ ಹಿನ್ನೆಲೆ, 22 ದಿನ ಕಳೆದರು ಸಿಗದ ಚಿರತೆ ಕುರಿತು ವಿಭಿನ್ನ ರೀತಿಯಲ್ಲಿ ಪೋಸ್ಟ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ ಮಾಡಲಾಗುತ್ತಿದೆ. ಚಿರತೆ ಪೋಟೊ ಹಾಕಿ ಚಿರತೆ ಹೆಸರಲ್ಲಿ ಆಧಾರ ಕಾರ್ಡ್ ರೆಡಿ ಮಾಡಿ ತಮಾಷೆ ಮಾಡಲಾಗಿದೆ. ಬಿಬತ್ಯಾ ಬೇಲ್ಗಾಂವ್‌ಕರ್ ಅಂತಾ ಚಿರತೆಗೆ ಹೆಸರು ಹಾಕಿ ಆಧಾರ್ ಕಾರ್ಡ್ ವೈರಲ್ ಮಾಡಲಾಗಿದೆ. ಎಷ್ಟು ಬೇಕಾದಷ್ಟು ಪ್ರಯತ್ನ ಮಾಡಿ ನಾನು ಗಣಪತಿ ಹಬ್ಬ ಮುಗಿಸಿಕೊಂಡು ಹೋಗುತ್ತೇನೆ. ಯಾರಪ್ಪಂದೇನ್ ಐತಿ ಬೆಳಗಾವಿ ನಂದೈತಿ ಬೆಳಗಾವಿ ಬಿಟ್ಟು ಹೋಗಲ್ಲ. ನಾನೇ ಆತಂಕವಾದಿನಾ ನನ್ನ ಹಿಡಿಯಲು ಆನೆ, ನಾಯಿ, ಪೊಲೀಸರು ಬಂದಿದ್ದೀರಿ, ಹೀಗೆ ಹಲವು ರೀತಿಯಲ್ಲಿ ಚಿರತೆ ಪೋಟೊ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ವೈರಲ್ ಮಾಡಲಾಗುತ್ತಿದೆ.

ಪ್ರತಿದಿನವು ಸುಮಾರು 3ಲಕ್ಷ ರೂ. ಖರ್ಚು:

ಕಳೆದ 22 ದಿನಗಳಿಂದ ಆಪರೇಷನ್ ಚಿರತೆ ಕಾರ್ಯಾಚರಣೆ ನಡೆಯುತ್ತಿದ್ದು, ಐದು ದಿನಗಳಿಂದ 160 ಸಿಬ್ಬಂದಿ, ಆನೆ, ಜೆಸಿಬಿಗಳಿಂದ ಕಾರ್ಯಾಚರಣೆ ಮಾಡಲಾಗುತ್ತಿದೆ. ಕಳೆದ 5 ದಿನಗಳಿಂದ ಪ್ರತಿದಿನವು ಸುಮಾರು 3ಲಕ್ಷದವರೆಗೂ ಖರ್ಚು ಮಾಡಲಾಗುತ್ತಿದ್ದು, ಅರಣ್ಯ ಇಲಾಖೆ ಈವರೆಗೂ ಸುಮಾರು 30 ರಿಂದ 40 ಲಕ್ಷ ಹಣ ಖರ್ಚು ಮಾಡಿದೆ. ನಿತ್ಯವೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ಖರ್ಚಾಗುತ್ತಿದ್ದರು ಚಿರತೆ ಸಿಗುತ್ತಿಲ್ಲ. ಸಿಬ್ಬಂದಿಗೆ ಊಟದ ವ್ಯವಸ್ಥೆ, ಆನೆಗೆ ಆಹಾರದ ವ್ಯವಸ್ಥೆ ಮಾಡಲು ಕೂಡ ಇಲಾಖೆ ಖರ್ಚು ಭರಿಸುತ್ತಿದೆ.

ಇದನ್ನೂ ಓದಿ: ಇಂದು ಕೂಡ ಚಿರತೆಗಾಗಿ ಮುಂದುವರೆದ ಹುಡುಕಾಟ: ಬೆಳಗಾವಿಯ 22 ಸರ್ಕಾರಿ, ಖಾಸಗಿ ಶಾಲೆಗೆ ರಜೆ ಘೋಷಣೆ

ಗಿಡಗಂಟೆಗಳು ಬೆಳೆದಿರುವುದರಿಂದ ಚಿರತೆ ತಪ್ಪಿಸಿಕೊಳ್ಳುತ್ತಿದೆ: ಡಿಎಫ್ಒ ಅಂಥೋನಿ

ಈ ಕುರಿತಾಗಿ ಟಿವಿ9ಗೆ ಬೆಳಗಾವಿ ಡಿಎಫ್ಒ ಅಂಥೋನಿ ಹೇಳಿಕೆ ನೀಡಿದ್ದು, 6 ಜೆಸಿಬಿ, 2 ಆನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ಮಾಡಲಾಗುತ್ತಿದೆ. ಗಾಲ್ಫ್ ಮೈದಾನದಲ್ಲಿ ಸಾಕಷ್ಟು ಗಿಡಗಂಟೆಗಳು ಬೆಳೆದಿವೆ. ಚಿರತೆ ಸುಲಭವಾಗಿ ತಪ್ಪಿಸಿಕೊಳ್ಳಲು ಅನುಕೂಲ ಆಗುತ್ತಿದೆ. ಮೊದಲು ಜೆಸಿಬಿಗಳಿಂದ ಗಿಡಗಂಟೆ ತೆರವು ಮಾಡುತ್ತೇವೆ. ನಾಳೆಯಿಂದ ಇನ್ನಷ್ಟು ಸಿಬ್ಬಂದಿ ಬಳಸಿಕೊಂಡು ಕೂಂಬಿಂಗ್ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್
ನಿಂತಿದ್ದ ಖಾಸಗಿ ಶಾಲಾ ಬಸ್​​​​ಗೆ ಬೆಂಕಿ; ವ್ಯಕ್ತಿ ಅನುಮಾನಾಸ್ಪದ ಸಾವು
ನಿಂತಿದ್ದ ಖಾಸಗಿ ಶಾಲಾ ಬಸ್​​​​ಗೆ ಬೆಂಕಿ; ವ್ಯಕ್ತಿ ಅನುಮಾನಾಸ್ಪದ ಸಾವು
ಬೆಂಗಳೂರು ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದೆ ಡಿಕೆಶಿ ಹೇಳಿದ್ದೇನು ನೋಡಿ
ಬೆಂಗಳೂರು ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದೆ ಡಿಕೆಶಿ ಹೇಳಿದ್ದೇನು ನೋಡಿ
Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?
Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?
Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
2 ಅಂಕ ಕಡಿಮೆ ಬಂದಿದ್ದಕ್ಕೆ ಶಿಕ್ಷಕಿಯನ್ನು ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿ
2 ಅಂಕ ಕಡಿಮೆ ಬಂದಿದ್ದಕ್ಕೆ ಶಿಕ್ಷಕಿಯನ್ನು ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿ
ನಿಮಗಿಂತ ಹೆಚ್ಚೇ ವಿದ್ಯಾವಂತ; ಬಿಜೆಪಿ ಎಂಎಲ್‌ಸಿ ಮಗನಿಗೆ ಪೊಲೀಸ್ ಕ್ಲಾಸ್
ನಿಮಗಿಂತ ಹೆಚ್ಚೇ ವಿದ್ಯಾವಂತ; ಬಿಜೆಪಿ ಎಂಎಲ್‌ಸಿ ಮಗನಿಗೆ ಪೊಲೀಸ್ ಕ್ಲಾಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ಏನು?
ವಿಷ್ಣುವರ್ಧನ್ ಸಮಾಧಿ ನೆಲಸಮ: ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ಏನು?
ಸೋರುತಿಹುದು ಸಾರಿಗೆ ಬಸ್ ಮೇಲ್ಚಾವಣಿ, ಛತ್ರಿ ಹಿಡಿದು ಕುಳಿತ ಪ್ರಯಾಣಿಕ
ಸೋರುತಿಹುದು ಸಾರಿಗೆ ಬಸ್ ಮೇಲ್ಚಾವಣಿ, ಛತ್ರಿ ಹಿಡಿದು ಕುಳಿತ ಪ್ರಯಾಣಿಕ