ಮಹಾರಾಷ್ಟ್ರದಿಂದ ಬೆಳಗಾವಿಗೆ ಬಂದು ಮನೆ ಮುಂದೆ ವಾಮಾಚಾರ ಮಾಡಿದ ವ್ಯಕ್ತಿ, ಪ್ರಶ್ನೆ ಮಾಡಿದಕ್ಕೆ ಗ್ರಾಮಸ್ಥರಿಗೆಯೇ ಬೆದರಿಕೆ

| Updated By: ಆಯೇಷಾ ಬಾನು

Updated on: Sep 12, 2021 | 1:31 PM

ವ್ಯಕ್ತಿಯೊಬ್ಬ ಅಣ್ಣಪ್ಪ ಕಾಕನಕಿ ಎಂಬುವವರ ಮನೆ ಮುಂದೆ ಇಂತಹ ಭಯಗೊಳಗಾಗುವ ಕೃತ್ಯ ಎಸಗಿದ್ದು ಕಾಲೋನಿಯ ತುಂಬ ಹಳದಿ ಭಂಡಾರ ಚೆಲ್ಲಿ ನಿಂಬೆಹಣ್ಣು ಎಸೆದು ವಾಮಾಚಾರ ಮಾಡಿದ್ದಾನೆ. ವ್ಯಕ್ತಿ ನಡೆಸುವ ಕೃತ್ಯದ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.

ಮಹಾರಾಷ್ಟ್ರದಿಂದ ಬೆಳಗಾವಿಗೆ ಬಂದು ಮನೆ ಮುಂದೆ ವಾಮಾಚಾರ ಮಾಡಿದ ವ್ಯಕ್ತಿ, ಪ್ರಶ್ನೆ ಮಾಡಿದಕ್ಕೆ ಗ್ರಾಮಸ್ಥರಿಗೆಯೇ ಬೆದರಿಕೆ
ಮಹಾರಾಷ್ಟ್ರದಿಂದ ಬೆಳಗಾವಿಗೆ ಬಂದು ಮನೆ ಮುಂದೆ ವಾಮಾಚಾರ ಮಾಡಿದ ವ್ಯಕ್ತಿ
Follow us on

ಬೆಳಗಾವಿ: ಹಾಡ ಹಗಲೇ ಮಹಾರಾಷ್ಟ್ರದಿಂದ ಬಂದ ವ್ಯಕ್ತಿಯೊಬ್ಬ ಮನೆ ಮುಂದೆ ಮನಬಂದಂತೆ ಕುಣಿದು ವಾಮಾಚಾರ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ‌ ಕೃಷ್ಣಾಕಿತ್ತೂರಿನಲ್ಲಿ ನಡೆದಿದೆ. ಕೃತ್ಯದ ಬಳಿಕ ಇಡೀ ಗ್ರಾಮ ಆತಂಕಕ್ಕೆ ಒಳಗಾಗಿದೆ.

ವ್ಯಕ್ತಿಯೊಬ್ಬ ಅಣ್ಣಪ್ಪ ಕಾಕನಕಿ ಎಂಬುವವರ ಮನೆ ಮುಂದೆ ಇಂತಹ ಭಯಗೊಳಗಾಗುವ ಕೃತ್ಯ ಎಸಗಿದ್ದು ಕಾಲೋನಿಯ ತುಂಬ ಹಳದಿ ಭಂಡಾರ ಚೆಲ್ಲಿ ನಿಂಬೆಹಣ್ಣು ಎಸೆದು ವಾಮಾಚಾರ ಮಾಡಿದ್ದಾನೆ. ವ್ಯಕ್ತಿ ನಡೆಸುವ ಕೃತ್ಯದ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.

ಅಶೋಕ ಕಾಕನಕಿ ಎಂಬುವರು ಅಣ್ಣಪ್ಪ ಕಾಕನಕಿ ಎಂಬುವವರ ಮನೆ ಮುಂದೆ ವಾಮಾಚಾರ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ವಾಮಾಚಾರ ಮಾಡುತ್ತಿದ್ದ ಅಶೋಕ ಕಾಕನಕಿಯನ್ನ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದು ವಾಮಾಚಾರ ಮಾಡುವುದನ್ನ ಪ್ರಶ್ನಿಸಿದ್ದಾರೆ. ಹೀಗಾಗಿ ಅಶೋಕ ಕಾಕನಕಿ‌ ಕುಟುಂಬ ಗ್ರಾಮಸ್ಥರಿಗೆ ಬೆದರಿಕೆ ಹಾಕಿದ್ದಾರೆ. ಸದ್ಯ ಈಗ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ: ಗ್ರಾಮ ಪಂಚಾಯತ್ ಆವರಣದಲ್ಲಿ ವಾಮಾಚಾರ ಆರೋಪ; ಪೊಲೀಸರಿಂದ ವಿಚಾರಣೆ

ನೆಲಮಂಗಲದಲ್ಲಿ ವಾಮಾಚಾರ: 10 ವರ್ಷದ ಬಾಲಕಿಯ ಅಪಹರಣ, ಬಲಿಗೆ ಯತ್ನ; ಅರ್ಚಕ ಸೇರಿದಂತೆ ಐದು ಮಂದಿ ಅರೆಸ್ಟ್