ಶಿವಮೊಗ್ಗ: ಗ್ರಾಮ ಪಂಚಾಯತ್ ಆವರಣದಲ್ಲಿ ವಾಮಾಚಾರ ಆರೋಪ; ಪೊಲೀಸರಿಂದ ವಿಚಾರಣೆ

ಗ್ರಾಮ ಪಂಚಾಯತ್ ಕಚೇರಿ ಮತ್ತು ಸದಸ್ಯರ ಮನೆ ಮುಂದೆ ವಾಮಾಚಾರ ನಡೆಸಿದ್ದಾನೆ. ಮಹೇಶ್ ನಡೆಸಿದ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಶಿವಮೊಗ್ಗ: ಗ್ರಾಮ ಪಂಚಾಯತ್ ಆವರಣದಲ್ಲಿ ವಾಮಾಚಾರ ಆರೋಪ; ಪೊಲೀಸರಿಂದ ವಿಚಾರಣೆ
ಸಾಂಕೇತಿಕ ಚಿತ್ರ

ಶಿವಮೊಗ್ಗ: ಗ್ರಾಮ ಪಂಚಾಯತ್ ಕಚೇರಿ ಮತ್ತು ಸದಸ್ಯರ ಮನೆಗಳ ಮುಂದೆ ವಾಮಾಚಾರ ನಡೆಸಿದ ಘಟನೆಯೊಂದು ಶಿವಮೊಗ್ಗ ತಾಲೂಕಿನ ಚೋರಡಿ ಗ್ರಾಮ ಪಂಚಾಯಿತ್ ಆವರಣದಲ್ಲಿ ನಡೆದಿದೆ. ಗ್ರಾಮ ಠಾಣಾ ಜಮೀನಿನಲ್ಲಿ ಮನೆ ನಿರ್ಮಿಸಲು ಮಹೇಶ್ ಎಂಬ ವ್ಯಕ್ತಿ ಮುಂದಾಗಿದ್ದ. ಆದರೆ ಗ್ರಾಮ ಪಂಚಾಯತ್ ಸದಸ್ಯರು ಗ್ರಾಮ ಠಾಣಾ ಜಮೀನಿನಲ್ಲಿ ಮನೆ ಕಟ್ಟಲು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ಮಲ್ಲೇಶ್ ಎಂಬ ವ್ಯಕ್ತಿಯ ಸ್ನೇಹಿತ ಮಹೇಶ್ ಎಂಬಾತ ಗ್ರಾಮ ಪಂಚಾಯತ್ ಕಚೇರಿ ಮತ್ತು ಸದಸ್ಯರ ಮನೆ ಮುಂದೆ ವಾಮಾಚಾರ ನಡೆಸಿದ್ದಾನೆ. ಮಹೇಶ್ ನಡೆಸಿದ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಪ್ರಕರಣದ ನಡೆದ ವ್ಯಾಪ್ತಿಯ ಕುಂಸಿ ಠಾಣೆ ಪೊಲೀಸರು ಆರೋಪಿಗಳಾದ ಮಲ್ಲೇಶ್ ಮತ್ತು ಮಹೇಶ್ ಅವರುಗಳ ವಿಚಾರಣೆ ನಡೆಸಿದ್ದಾರೆ.

Covid 19 Karnataka Update: ಕರ್ನಾಟಕದ 1074 ಜನರಲ್ಲಿ ಕೊರೊನಾ ಸೋಂಕು ಪತ್ತೆ, 1136 ಮಂದಿ ಗುಣಮುಖ

ಕರ್ನಾಟಕದಲ್ಲಿ ಗುರುವಾರ ಒಟ್ಟು 1074 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. 1136 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್​ಚಾರ್ಜ್ ಆಗಿದ್ದಾರೆ. ರಾಜ್ಯದ ಪಾಸಿಟಿವಿಟಿ ಪ್ರಮಾಣ ಶೇ 0.63 ಇದ್ದರೆ, ಸಾವಿನ ಸರಾಸರಿ ಪ್ರಮಾಣ ಶೇ 0.37 ಇದೆ. ರಾಜ್ಯದಲ್ಲಿ ಈವರೆಗೆ ಒಟ್ಟು 29,59,164 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 29,04,683 ಮಂದಿ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ 37,462 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರು ನಗರದಲ್ಲಿ ಇಂದು ಒಟ್ಟು 343 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 251 ಮಂದಿ ಚೇತರಿಸಿಕೊಂಡಿದ್ದಾರೆ. ಮೂವರು ಸಾವನ್ನಪ್ಪಿದ್ದಾರೆ. ನಗರದಲ್ಲಿ ಈವರೆಗೆ 12,40,653 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,17,401 ಮಂದಿ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಪ್ರಸ್ತುತ 7,208 ಸಕ್ರಿಯ ಪ್ರಕರಣಗಳಿವೆ. ಈವರೆಗೆ 16,043 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 343, ದಕ್ಷಿಣ ಕನ್ನಡ 176, ಉಡುಪಿ 126, ಹಾಸನ 81, ಚಿಕ್ಕಮಗಳೂರು 68, ಕೊಡಗು 59, ಮೈಸೂರು 48, ಶಿವಮೊಗ್ಗ 39, ಉತ್ತರ ಕನ್ನಡ 25, ತುಮಕೂರು 22, ಮಂಡ್ಯ 15, ಕೋಲಾರ 12, ಬೆಳಗಾವಿ, ಚಿತ್ರದುರ್ಗ 8, ಧಾರವಾಡ, ಕಲಬುರಗಿ 7, ರಾಯಚೂರು 6, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ 5, ದಾವಣಗೆರೆ 3, ಚಾಮರಾಜನಗರ, ರಾಮನಗರ 2, ವಿಜಯಪುರ, ಯಾದಗಿರಿ 1.

ಯಾವ ಜಿಲ್ಲೆಯಲ್ಲಿ ಎಷ್ಟು ಸಾವು?
ಬೆಂಗಳೂರು ನಗರ 3, ಹಾಸನ 1.

ಇದನ್ನೂ ಓದಿ: 

Tv9 Impact: ಗೌರಿ ಗಣೇಶ ಹಬ್ಬಕ್ಕೆ ಟಿವಿ9 ಉಡುಗೊರೆ ನೀಡಿತು: ಸಿಎಂ ಸ್ಪೀಕಿಂಗ್ Tv9 ಕಾರ್ಯಕ್ರಮದಲ್ಲಿ ಪರಿಹಾರ ದೊರೆತವರ ಖುಷಿಯ ವ್ಯಾಖ್ಯಾನ

Travel: ಪ್ರಪಂಚದ ಈ ಸ್ಥಳಗಳಲ್ಲಿ ಸೂರ್ಯ ಮುಳುಗುವುದೇ ಇಲ್ಲ; ಅಚ್ಚರಿಯ ಮಾಹಿತಿ ಇಲ್ಲಿದೆ

(Shivamogga Gram panchayat premises accused of witchcraft police starts Inquiry)

Click on your DTH Provider to Add TV9 Kannada