AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಪೊಲೀಸರನ್ನು ನಾಯಿಗಳಿಗೆ ಹೋಲಿಸಿದ ಎಂಇಎಸ್​ ಪುಂಡರು​: ಆಕ್ರೋಶ

ಬೆಳಗಾವಿಯಲ್ಲಿ ಕೆಎಸ್​ಆರ್​ಟಿಸಿ ಬಸ್​ ನಿರ್ವಾಹಕನ ಮೇಲೆ ನಡೆದ ಹಲ್ಲೆಯನ್ನು ಸಮರ್ಥಿಸಿಕೊಂಡು ಕನ್ನಡಪರ ಹೋರಾಟಗಾರರನ್ನು ಅವಮಾನಿಸಿದ ಎಂಇಎಸ್ ಕಾರ್ಯಕರ್ತ ಶುಭಂ ಶಳಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಶಳಕೆ ಬಂಧನ ಹಿನ್ನೆಲೆಯಲ್ಲಿ ಎಂಇಎಸ್​ ಕಾರ್ಯಕರ್ತರು ಕರ್ನಾಟಕದ ಪೊಲೀಸರನ್ನು 'ನಾಯಿ' ಗೆ ಹೋಲಿಕೆ ಮಾಡಿ ವಿವಾದಾತ್ಮಕ ಪೋಸ್ಟ್​ ಹಾಕಿದ್ದಾರೆ.

ಸಹದೇವ್​ ಮಾನೆ
| Edited By: ವಿವೇಕ ಬಿರಾದಾರ|

Updated on:Mar 25, 2025 | 2:38 PM

Share

ಬೆಳಗಾವಿ, ಮಾರ್ಚ್​ 25: ಎಂಇಎಸ್ (MES) ಪುಂಡ ಶುಭಂ ಶಳಕೆ ಬಂಧನ ಬೆನ್ನಲ್ಲೇ ಪೊಲೀಸರಿಗೆ (Police) ನಾಯಿಗಳು ಎಂದು ಎಂಇಎಸ್ ಸಂಘಟನೆಯ ಯುವ ಸಮಿತಿ ಸೀಮಾಭಾಗ್ ಪೇಜ್​ನಲ್ಲಿ ವಿವಾದಾತ್ಮಕವಾಗಿ ಪೋಸ್ಟ್ ಹಾಕಿದೆ. ಪುಂಡ ಶಳಕೆ ಹಿಡಿದುಕೊಂಡು ನಿಂತಿದ್ದ ಪೊಲೀಸರ ಫೋಟೊ ಹಾಕಿ, “ಸಮಿತಿಯ ಸಿಂಹ ಒಬ್ಬನೇ ಫೈಟ್ ಮಾಡುತ್ತಿದ್ದಾನೆ. ಸಾವಿರಾರು ನಾಯಿಗಳು ಅವನ ಬೆನ್ನು ಬಿದ್ದಿವೆ‌. ಆದರೂ ನಾಯಿಗಳಿಗೆ ಸಿಂಹವನ್ನು ಮುಗಿಸಲು ಅಗುತ್ತಿಲ್ಲ” ಎಂದು ಪೋಸ್ಟ್​ ಹಾಕಲಾಗಿದೆ.

ಕೆಎಸ್​ಆರ್​ಟಿಸಿ ಬಸ್​ ನಿರ್ವಾಹಕನ ಮೇಲಿನ ಹಲ್ಲೆ ಸಮರ್ಥಿಸಿಕೊಂಡು, ಕನ್ನಡಪರ ಹೋರಾಟಗಾರರಿಗೆ ನಾಲಾಯಕ್ ಅಂತ ಶುಭಂ ಶಳಕೆ ಕರೆದಿದ್ದನು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ದಾಖಲಾಗುವಂತೆ ಶುಭಂ ಶಳಕೆ ಪರಾರಿಯಾಗಿದ್ದನು. ಇದೀಗ, ಮಾಳಮಾರುತಿ ಠಾಣೆ ಪೊಲೀಸರು ಸೋಮವಾರ ಎಂಇಎಸ್ ಪುಂಡ ಶುಭಂ ಶಳಕೆ ಬಂಧಿಸಿದ್ದಾರೆ.

ಏನಿದು ಘಟನೆ

ಕಳೆದ ತಿಂಗಳು, ಬೆಳಗಾವಿಯಿಂದ ಬಾಳೇಕುಂದ್ರಿಗೆ ಚಲಿಸುತ್ತಿದ್ದ ಬಸ್ಸಿನ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಮೇಲೆ ಮರಾಠಿ ಪರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು ಮರಾಠಿಯಲ್ಲಿ ಮಾತನಾಡದ ಕಾರಣ ಹಲ್ಲೆ ನಡೆಸಿದ್ದರು. ಈ ಘಟನೆಯ ನಂತರ, ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಅಂತರರಾಜ್ಯ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ಕಂಡಕ್ಟರ್ ಮೇಲಿನ ದಾಳಿಯು ಎರಡು ರಾಜ್ಯಗಳ ನಡುವಿನ ಭಾಷಾ ವಿವಾದಗಳ ಬಗ್ಗೆ ಮತ್ತೆ ಚರ್ಚೆಯನ್ನು ಹುಟ್ಟುಹಾಕಿತ್ತು. ಈ ಪ್ರದೇಶದಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ಕೋಮು ಸಾಮರಸ್ಯವನ್ನು ಕದಡುವ ಮರಾಠಿ ಪರ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟವು ಪ್ರತಿಭಟನೆ ನಡೆಸಿತ್ತು.

ಇದನ್ನೂ ಓದಿ: ಮರಾಠಿ ಯುವಕನಿಂದ ಗೂಂಡಾಗಿರಿ, ಪಿಡಿಒ ಮೇಲೆ ಹಲ್ಲೆ ನಡೆಸುವ ಬೆದರಿಕೆ ಮತ್ತು ನಿಂದನೆ

ಈ ವೇಳೆ ಎಂಇಎಸ್ ಪುಂಡ ಶುಭಂ ಶಳಕೆ ಕನ್ನಡಪರ ಹೋರಾಟಗಾರರಿಗೆ ನಾಲಾಯಕ್​ ಎಂದಿದ್ದನು. ಈ ಹಿನ್ನೆಲೆಯಲ್ಲಿ ಶುಭಂ ಶಳಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಪ್ರಕರಣ ದಾಖಲಿಸಿಕೊಂಡು, ಆರೋಪಿಗಾಗಿ ಬಲೆ ಬೀಸಿದ್ದರು. ಕೊನೆಗೂ ಬೆಳಗಾವಿ ಪೊಲೀಸರು ಸೋಮವಾರ ಆರೋಪ ಶುಭಂ ಶಳಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:38 pm, Tue, 25 March 25

Follow Us
ವಿಮಾನಯಾನ ಕ್ಷೇತ್ರದ ಪ್ರಗತಿ ಒತ್ತಿಹೇಳಿದ ಪ್ರಧಾನಿ ಮೋದಿ
ವಿಮಾನಯಾನ ಕ್ಷೇತ್ರದ ಪ್ರಗತಿ ಒತ್ತಿಹೇಳಿದ ಪ್ರಧಾನಿ ಮೋದಿ
ಮೈಸೂರಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಭರ್ಜರಿ ರೋಡ್ ಶೋ
ಮೈಸೂರಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಭರ್ಜರಿ ರೋಡ್ ಶೋ
ಶಿರಸಿ ನಗರದ ಹಲವು ಬಡಾವಣೆಗಳು ಮುಳುಗಡೆ, ನಿವಾಸಿಗಳ ಪರದಾಟ
ಶಿರಸಿ ನಗರದ ಹಲವು ಬಡಾವಣೆಗಳು ಮುಳುಗಡೆ, ನಿವಾಸಿಗಳ ಪರದಾಟ
ರಾಜ್ಯದಲ್ಲಿ ನಾಳೆ ನಡೆಯುವ ನೇಮಕಾತಿ ಪರೀಕ್ಷೆಗಳಿಗೆ ಬಿಗಿ ಭದ್ರತೆ
ರಾಜ್ಯದಲ್ಲಿ ನಾಳೆ ನಡೆಯುವ ನೇಮಕಾತಿ ಪರೀಕ್ಷೆಗಳಿಗೆ ಬಿಗಿ ಭದ್ರತೆ
ಸರ್ಕಾರಿ ಹುದ್ದೆಗಳ ನೇಮಕಾತಿಗೆ ಕಟ್ಟುನಿಟ್ಟಿನ ಕ್ರಮ; ಖರ್ಗೆ ಘೋಷಣೆ
ಸರ್ಕಾರಿ ಹುದ್ದೆಗಳ ನೇಮಕಾತಿಗೆ ಕಟ್ಟುನಿಟ್ಟಿನ ಕ್ರಮ; ಖರ್ಗೆ ಘೋಷಣೆ
ಖಾಲಿ ಸೈಟ್​ಗಳಲ್ಲಿ 5 ವರ್ಷದ ಒಳಗೆ ಕಟ್ಟಡ ಕಟ್ಟಲೇಬೇಕು: ಸಿಎಂ ಖಡಕ್ ಸೂಚನೆ
ಖಾಲಿ ಸೈಟ್​ಗಳಲ್ಲಿ 5 ವರ್ಷದ ಒಳಗೆ ಕಟ್ಟಡ ಕಟ್ಟಲೇಬೇಕು: ಸಿಎಂ ಖಡಕ್ ಸೂಚನೆ
‘ಪ್ರಜ್ವಲ್​​ಗೆ ಜಿಮ್ ಟ್ರೇನರ್ ಕೊಟ್ಟಿದ್ವಿ, ಆದರೂ ಅಚಿವ್​ ಮಾಡಿಲ್ಲ’
‘ಪ್ರಜ್ವಲ್​​ಗೆ ಜಿಮ್ ಟ್ರೇನರ್ ಕೊಟ್ಟಿದ್ವಿ, ಆದರೂ ಅಚಿವ್​ ಮಾಡಿಲ್ಲ’
'ತಮಿಳುನಾಡಿಗೆ ಇನ್ನೂ ನೀರು ಹರಿಸಿಲ್ಲ': ಡಿಕೆ ಶಿವಕುಮಾರ್
'ತಮಿಳುನಾಡಿಗೆ ಇನ್ನೂ ನೀರು ಹರಿಸಿಲ್ಲ': ಡಿಕೆ ಶಿವಕುಮಾರ್
ಮೋದಿ ಭೇಟಿ ಹಿನ್ನೆಲೆ ಮೈಸೂರಿನಲ್ಲಿ ಬಿಗಿ ಬಂದೋಬಸ್ತ್: ಭದ್ರತೆ ಹೇಗಿದೆ ನೋಡಿ
ಮೋದಿ ಭೇಟಿ ಹಿನ್ನೆಲೆ ಮೈಸೂರಿನಲ್ಲಿ ಬಿಗಿ ಬಂದೋಬಸ್ತ್: ಭದ್ರತೆ ಹೇಗಿದೆ ನೋಡಿ
ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ; ಗುರುದತ್
ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ; ಗುರುದತ್