Nagara Palike Election: 3 ನಗರ ಪಾಲಿಕೆಗಳಿಗೆ ಚುನಾವಣೆ ಘೋಷಿಸಿದ ಆಯೋಗದ ವಿರುದ್ಧ ಸಚಿವ ಈಶ್ವರಪ್ಪ ಅಸಮಾಧಾನ
ಮೂರನೇ ಅಲೆ ಬಗ್ಗೆ ಹುಷಾರಾಗಿರಿ ಎಂದು ಪ್ರಧಾನಮಂತ್ರಿಗಳು ಹೇಳುತ್ತಿದ್ದಾರೆ. ಕೋರ್ಟ್‌ಗಳು ಸಹ ಹೀಗೆ ಹೇಳುತ್ತಿವೆ. ಚುನಾವಣೆ ಆಯೋಗ ಚುನಾವಣೆ ಘೋಷಣೆ ಮಾಡಿದರೆ ನಾವು ಯಾರಿಗೆ ಕೇಳೋಣ ಎಂದು ಅವರು ಅಸಮಾಧಾನ ಹೊರಹಾಕಿದರು.
ಬೆಳಗಾವಿ: ರಾಜ್ಯದಲ್ಲಿ ಮೂರು ಮಹಾನಗರ ಪಾಲಿಕೆಗಳಿಗೆ ಈಗ ಚುನಾವಣೆ ಮಾಡುವ ಅಗತ್ಯ ಏನಿತ್ತು? ಕೊವಿಡ್- ಕೊವಿಡ್ ಅಂತಾರೆ ಚುನಾವಣೆ ಘೋಷಣೆ ಮಾಡಿಬಿಟ್ಟಿದ್ದಾರೆ. ಇದಂತೂ ನನಗೆ ಆಶ್ಚರ್ಯ ಮೂಡಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಚುನಾವಣಾ ಆಯೋಗದ ವಿರುದ್ಧ ಬೆಳಗಾವಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ನಾವು ಇವತ್ತು ರಿಪೋರ್ಟ್ ಕೊಡ್ತಾಇದ್ವಿ ಅಷ್ಟರೊಳಗೆ ಚುನಾವಣೆ ಘೋಷಣೆ ಮಾಡಿದ್ದಾರೆ ನಾನೇನು ಹೇಳಲಿ. ಚುನಾವಣೆ ಆಯೋಗ ತೆಗೆದುಕೊಂಡ ಈ ತೀರ್ಮಾನದ ಬಗ್ಗೆ ನನಗಂತೂ ಸಮಾಧಾನ ಇಲ್ಲ. ಬೆಳಗಾವಿ ಮತ್ತು ಕಲಬುರಗಿ ಗಡಿ ಜಿಲ್ಲೆಗಳಾಗಿವೆ. ಸುತ್ತಮುತ್ತ ಹಳ್ಳಿ ಜನರು ನಗರಕ್ಕೆ ಬಂದು ಹೋಗ್ತಿರ್ತಾರೆ. ಇಂತಹ ಸಂದರ್ಭದಲ್ಲಿ ಇವರು ಚುನಾವಣೆ ಮಾಡಿಕೊಂಡು ಕುಳಿತುಕೊಳ್ಳುತ್ತೇನೆ ಅಂದರೆ ಹೇಗೆ? ಮೂರನೇ ಅಲೆ ಬಗ್ಗೆ ಹುಷಾರಾಗಿರಿ ಎಂದು ಪ್ರಧಾನಮಂತ್ರಿಗಳು ಹೇಳುತ್ತಿದ್ದಾರೆ. ಕೋರ್ಟ್‌ಗಳು ಸಹ ಹೀಗೆ ಹೇಳುತ್ತಿವೆ. ಚುನಾವಣೆ ಆಯೋಗ ಚುನಾವಣೆ ಘೋಷಣೆ ಮಾಡಿದರೆ ನಾವು ಯಾರಿಗೆ ಕೇಳೋಣ ಎಂದು ಅವರು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ:
ಸಚಿವ ಸಂಪುಟ ಆಗುವುದಕ್ಕೆ ಕಾಂಗ್ರೆಸ್, ಜೆಡಿಎಸ್ನಿಂದ ಬಂದವರು ಕಾರಣ; ಅವರ ಋಣ ತೀರಿಸಬೇಕು: ಕೆಎಸ್ ಈಶ್ವರಪ್ಪ
ನನಗೆ ಬಿಪಿ ಶುಗರ್ ಇಲ್ಲ, ನನ್ನ ತಂಟೆಗೆ ಬಂದವರಿಗೆ ಬಿಪಿ ಶುಗರ್ ಬರುತ್ತೆ- ಸಚಿವ ಕೆ.ಎಸ್.ಈಶ್ವರಪ್ಪ
(Minister KS Eshwarappa agitated against the election commission announcing elections to 3 local bodies)
Published On - 8:42 pm, Wed, 11 August 21