ಮೀರಜ್-ಬೆಳಗಾವಿ ವಿಶೇಷ ರೈಲುಗಳ ಸಮಯದಲ್ಲಿ ಬದಲಾವಣೆ: ಇಲ್ಲಿದೆ ಮಾಹಿತಿ
ಮೀರಜ್‌ನಿಂದ ಬೆಳಗಾವಿಗೆ ಆಗಮಿಸುವ ವಿಶೇಷ ರೈಲುಗಳ ಸಮಯವನ್ನು ಪರಿಷ್ಕರಿಸಲಾಗಿದೆ. ರೈಲು ಸಂಖ್ಯೆ 07302 ಮತ್ತು 07304 ರ ಆಗಮನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಬೆಲ್ಲಂಪಲ್ಲಿಯಲ್ಲಿ ಕೆಲವು ರೈಲುಗಳ ನಿಲುಗಡೆಯನ್ನು ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಳಗಾವಿ, ಜೂನ್ 20: ಮೀರಜ್‌ನಿಂದ ಬೆಳಗಾವಿಗೆ (Miraj to Belagavi) ಆಗಮಿಸುವ ರೈಲು ಸಮಯವನ್ನು ಪರಿಷ್ಕರಿಸಲಾಗಿದ್ದು, ಜೂನ್ 19ರಿಂದ ಜಾರಿಗೆ ಬಂದಿದೆ. ಈ ಬಗ್ಗೆ ನೈಋತ್ಯ ರೈಲ್ವೆ (South Western Railway) ಮಾಹಿತಿ ನೀಡಿದೆ. ರೈಲು ಸಂಖ್ಯೆ 07302 ಮತ್ತು 07304 ಮೀರಜ್ ಟು ಬೆಳಗಾವಿ ವಿಶೇಷ ರೈಲುಗಳ ಬೆಳಗಾವಿ ನಿಲ್ದಾಣಕ್ಕೆ ಆಗಮನದ ಸಮಯವನ್ನು ಪರಿಷ್ಕರಿಸಿದೆ.
ಬೆಳಗಾವಿಗೆ 12:50ಕ್ಕೆ ಬರುತ್ತಿದ್ದ ಕಾಯ್ದಿರಿಸದ್ದ ಮೀರಜ್ ಟು ಬೆಳಗಾವಿ ವಿಶೇಷ ರೈಲು (ರೈಲು ಸಂಖ್ಯೆ 07302) ಇನ್ಮುಂದೆ ಮಧ್ಯಾಹ್ನ 1 ಗಂಟೆಗೆ ಆಗಮಿಸಲಿದೆ. ಅದೇ ರೀತಿಯಾಗಿ ರಾತ್ರಿ 08:35ಕ್ಕೆ ಆಗಮಿಸುತ್ತಿದ್ದ ಮೀರಜ್ ಟು ಬೆಳಗಾವಿ (ರೈಲು ಸಂಖ್ಯೆ 073040) ವಿಶೇಷ ರೈಲು ರಾತ್ರಿ 21 ಗಂಟೆಗೆ ಆಗಮಿಸಲಿದೆ. ಈ ಎರಡೂ ರೈಲುಗಳು ಮೀರಜ್ ಮತ್ತು ಸಾಂಬ್ರೇ ನಿಲ್ದಾಣಗಳ ನಡುವಿನ ಸಮಯಗಳಲ್ಲಿ ಯಾವುದೇ ಬದಲಾವಣೆ ಇಲ್ಲ.
ಬೆಲ್ಲಂಪಲ್ಲಿಯಲ್ಲಿ ರೈಲುಗಳ ನಿಲುಗಡೆ ರದ್ದು
ಸಿಕಂದರಾಬಾದ್ ವಿಭಾಗದ ಬಲ್ಲರ್ಷಾ ಕಾಜಿಪೇಟೆ ವಿಭಾಗದಲ್ಲಿ ರೆಚಿನ ರೋಡ್ ಮತ್ತು ಬೆಲ್ಲಂಪಲ್ಲಿ ನಿಲ್ದಾಣಗಳ ನಡುವಿನ ಹೊಸ ಮೂರನೇ ಮಾರ್ಗದ ಕಾರ್ಯಾರಂಭಕ್ಕೆ ಸಂಬಂಧಿಸಿದಂತೆ, ಬೆಲ್ಲಂಪಲ್ಲಿ ಯಾರ್ಡ್ನಲ್ಲಿ ಇಂಜಿನಿಯರಿಂಗ್ ಕೆಲಸಗಳು ನಡೆಯುತ್ತಿವೆ. ಈ ಕಾರಣದಿಂದಾಗಿ ಎರಡು ರೈಲುಗಳಿಗೆ ಬೆಲ್ಲಂಪಲ್ಲಿಯಲ್ಲಿ ನಿಲುಗಡೆ ರದ್ದುಪಡಿಸಿರುವುದಾಗಿ ದಕ್ಷಿಣ ಮಧ್ಯ ರೈಲ್ವೆ ತಿಳಿಸಿದೆ.
ನೈಋತ್ಯ ರೈಲ್ವೆ ಟ್ವೀಟ್
Kindly note: I. Revision in Arrival Timings of Miraj – Belagavi Special Trains II. Elimination of Stoppage of trains at Bellampalli I. ಮಿರಜ್ – ಬೆಳಗಾವಿ ವಿಶೇಷ ರೈಲುಗಳ ಆಗಮನದ ವೇಳೆಯಲ್ಲಿ ಪರಿಷ್ಕರಣೆ II. ಬೆಲ್ಲಂಪಲ್ಲಿಯಲ್ಲಿ ರೈಲುಗಳ ನಿಲುಗಡೆ ರದ್ದು#SWRupdates pic.twitter.com/kK7V9kBzc5
— South Western Railway (@SWRRLY) June 19, 2025
ಜೂನ್ 21 ರಂದು ಹುಬ್ಬಳ್ಳಿಯಿಂದ ಪ್ರಾರಂಭವಾಗುವ ಎಸ್‌ಎಸ್‌ಎಸ್ ಹುಬ್ಬಳ್ಳಿ ಟು ಬನಾರಸ್ (ರೈಲು ಸಂಖ್ಯೆ 07323) ವೀಕ್ಲಿ ಎಕ್ಸಪ್ರೆಸ್ ವಿಶೇಪ ರೈಲು ಬೆಲ್ಲಂಪಲ್ಲಿಯಲ್ಲಿ ನಿಲ್ಲುವುದಿಲ್ಲ. ಪರ್ಯಾಯವಾಗಿ ಸಿರ್ಪುರ್ ಕಾಗಜ್ ನಗರದಲ್ಲಿ ನಿಲುಗಡೆಯನ್ನು ಒದಗಿಸಲಾಗಿದೆ.
ಇದನ್ನೂ ಓದಿ: ಮಂಡ್ಯ ಮೈಶುಗರ್ ಶಾಲೆ ಮೇಲೆ ಖಾಸಗಿ ಕಣ್ಣು: ಕೋಟ್ಯಂತರ ರೂ ಆಸ್ತಿ ಕಬಳಿಸಲು ಹುನ್ನಾರ ಆರೋಪ
ಜೂನ್21 ರಂದು ಮೈಸೂರಿನಿಂದ ಪ್ರಾರಂಭವಾಗುವ ಮೈಸೂರು ಟು ಜೈಪುರ ದ್ವಿಸಾಪ್ತಾಹಿಕ ಎಕ್ಸಪ್ರೆಸ್ ರೈಲು (ರೈಲು ಸಂಖ್ಯೆ 12975) ಬೆಲ್ಲಂಪಲ್ಲಿಯಲ್ಲಿ ನಿಗದಿತ ನಿಲುಗಡೆಯನ್ನು ಸಹ ಇರುವುದಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.








