ಶಾಸಕಿ ಅಂಜಲಿ ನಿಂಬಾಳ್ಕರ್ ಟ್ವಿಟರ್ ಖಾತೆ ಹ್ಯಾಕ್! ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಟ್ವಿಟರ್, ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣದಲ್ಲಿ (Social Media) ಬಹುತೇಕರು ಕಾಲ ಕಳೆಯುತ್ತಾರೆ. ಜೊತೆಗೆ ದಿನದಿತ್ಯದ ಸುದ್ದಿ, ಸಂದೇಶಗಳನ್ನ ಗ್ರಹಿಸುತ್ತಾರೆ. ಆದರೆ ಕೆಲ ಕಿಡಿಗೇಡಿಗಳು ಖಾತೆಗಳನ್ನ ಹ್ಯಾಕ್ ಮಾಡುವ ಮೂಲಕ ದುರುಪಯೋಗ ಮಾಡಿಕೊಳ್ಳುತ್ತಾರೆ.
ಬೆಳಗಾವಿ: ತಂತ್ರಜ್ಞಾನ ಬೆಳೆದಂತೆ ಕೆಲ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಇದಕ್ಕೆ ಉತ್ತಮ ಉದಾಹಾರಣೆ ಅಂದರೆ ಹ್ಯಾಕ್ (Hack). ಟ್ವಿಟರ್, ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣದಲ್ಲಿ (Social Media) ಬಹುತೇಕರು ಕಾಲ ಕಳೆಯುತ್ತಾರೆ. ಜೊತೆಗೆ ದಿನದಿತ್ಯದ ಸುದ್ದಿ, ಸಂದೇಶಗಳನ್ನ ಗ್ರಹಿಸುತ್ತಾರೆ. ಆದರೆ ಕೆಲ ಕಿಡಿಗೇಡಿಗಳು ಖಾತೆಗಳನ್ನ ಹ್ಯಾಕ್ ಮಾಡುವ ಮೂಲಕ ದುರುಪಯೋಗ ಮಾಡಿಕೊಳ್ಳುತ್ತಾರೆ. ಇಂತಹ ಘಟನೆಗಳು ರಾಜ್ಯದಲ್ಲಿ ಬಾರಿ ನಡೆದಿವೆ. ಸದ್ಯ ಖಾನಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಟ್ವಿಟರ್ ಖಾತೆ ಹ್ಯಾಕ್ ಆಗಿದೆ. ಎರಡು ದಿನಗಳ ಹಿಂದೆ ಟ್ವಿಟರ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ಶಾಸಕಿ ಮಾಹಿತಿ ನೀಡಿದ್ದು, ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಿನ್ನೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರ ಟ್ವಿಟರ್ ಖಾತೆ ಹ್ಯಾಕ್ ಆಗಿತ್ತು. ಈ ಕುರಿತು ಶಾಸಕರೇ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು. ನನ್ನ ಖಾತೆ ಇದ್ದಕ್ಕಿದ್ದಂತೆ ನಿಷ್ಕ್ರಿಯವಾಗಿದೆ. ಖಾತೆಯನ್ನು ತೆರೆಯದಂತೆ ನಿಯಂತ್ರಣ ತಪ್ಪಿಸಿಲಾಗಿದೆ ಎಂದು ತಿಳಿಸಿದ್ದರು. ನನ್ನ ಖಾತೆಯಿಂದ ಯಾವುದೇ ಅಸಂಬದ್ಧ ಪೋಸ್ಟ್ ಕಂಡುಬಂದರೆ ಅದು ನನ್ನದಾಗಿರಲ್ಲ ಎಂದು ತಿಳಿಯಬೇಕು ಅಂತ ಮನವಿ ಮಾಡಿದ್ದರು.
ರಾಜಕಾರಣಿಗಳ ಖಾತೆಗಳನ್ನ ಹ್ಯಾಕ್ ಮಾಡುವುದು ಇದು ಮೊದಲೇನಲ್ಲ. 2021ರ ಡಿಸೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಟ್ವಿಟರ್ ಅಕೌಂಟ್ ಹ್ಯಾಕ್ ಆಗಿತ್ತು. ಹೀಗೆ ಹ್ಯಾಕ್ ಮಾಡಿದ್ದ ಕಿಡಿಗೇಡಿಗಳು, ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನು ಬದ್ಧವಾಗಿದೆ. ಅದಕ್ಕೆ ಸಂಬಂಧಪಟ್ಟು ಕಾನೂನು ರಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಟ್ವೀಟ್ ಮಾಡಿದ್ದರು. ಬಳಿಕ ಪ್ರಧಾನಿ ಮಂತ್ರಿ ಕಚೇರಿಯ ಟ್ವಿಟರ್ ಅಕೌಂಟ್ನಿಂದ ಟ್ವೀಟ್ ಮಾಡಿ, ಪಿಎಂ ಮೋದಿ ವೈಯಕ್ತಿಕ ಟ್ವಿಟರ್ ಖಾತೆ ಹ್ಯಾಕ್ ಆಗಿದ್ದು, ಅದನ್ನು ಮರುಸ್ಥಾಪಿಸಲು ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ. ಬಿಟ್ಕಾಯಿನ್ ಕುರಿತು ಮಾಡಲಾದ ಯಾವುದೇ ಟ್ವೀಟ್ನ್ನೂ ನಂಬಬೇಡಿ ಎಂದು ತಿಳಿಸಲಾಗಿತ್ತು.
ಇದನ್ನೂ ಓದಿ
ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರ ಭೇಟಿಗೆ ಕೆಲವೇ ಗಂಟೆಗಳ ಮೊದಲು ಸಮಾವೇಶ ಸ್ಥಳದಿಂದ 8 ಕಿಮೀ ದೂರದಲ್ಲಿ ಸ್ಫೋಟ
ಬೆಂಗಳೂರಿನಲ್ಲಿ ಮತ್ತೆ ಕೊರೊನಾ ಪ್ರಕರಣ ದಿಢೀರ್ ಹೆಚ್ಚಳ; ನಿನ್ನೆ ಒಂದೇ ದಿನ 132 ಜನರಿಗೆ ಸೋಂಕು
Published On - 10:11 am, Sun, 24 April 22