ಬೆಳಗಾವಿ: ಅಧಿವೇಶನದಲ್ಲಿ ಬಿಜೆಪಿ ಎಂಎಲ್ಸಿಯಿಂದ ಹಲಾಲ್ ಮಾಂಸ ನಿಷೇಧಿಸುವಂತೆ ಖಾಸಗಿ ವಿಧೇಯಕ ಮಂಡನೆ ಸಾಧ್ಯತೆ
ಚಳಿಗಾಲ ಅಧಿವೇಶನದಲ್ಲಿ ಹಲಾಲ್ ಪ್ರಮಾಣೀಕೃತ ಮಾಂಸವನ್ನು ನಿಷೇಧಿಸುವಂತೆ ಎಂಎಲ್ಸಿ ರವಿಕುಮಾರ್ ಖಾಸಗಿ ವಿಧೇಯಕ ಮಂಡಿಸುವ ಸಾಧ್ಯತೆ ಇದೆ.

ಬೆಳಗಾವಿ: ಹಲಾಲ್ ಕಟ್ ಮಾಂಸವನ್ನು ನಿಷೇಧಿಸುವಂತೆ ಹಿಂದೂ ಸಂಘಟನೆಗಳು ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ಈ ಹಿನ್ನೆಲೆ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಬಿಜೆಪಿ ಸರ್ಕಾರ ಹಲಾಲ್ ಮಾಂಸವನ್ನು (Halal Meat) ನಿಷೇಧಿಸುವ, ಹಲಾಲ್ ಮಾಂಸ ವಿರೋಧಿ ಮಸೂದೆಯನ್ನು ಪರಿಚಯಿಸಲು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಈ ಸಂಬಂಧ ಅಧಿವೇಶನಲ್ಲಿ ಹಲಾಲ್ ಪ್ರಮಾಣೀಕೃತ ಮಾಂಸವನ್ನು ನಿಷೇಧಿಸುವಂತೆ ಎಂಎಲ್ಸಿ ಎನ್.ರವಿಕುಮಾರ್ (Ravikuamr) ಖಾಸಗಿ ವಿಧೇಯಕ ಮಂಡಿಸಲಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ಹಿಂದುಸ್ಥಾನ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ: ಕೆಪಿಟಿಸಿಎಲ್ ಎಇ,ಜೆಇ ನೇಮಕ ಪರೀಕ್ಷೆ, ಜನವರಿ ಮೊದಲ ವಾರದಲ್ಲಿ ಫಲಿತಾಂಶ: ಸಚಿವ ಸುನೀಲ್ ಕುಮಾರ್
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಎನ್.ರವಿಕುಮಾರ್ ಅವರು 2006ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆಗೆ ತಿದ್ದುಪಡಿ ತರುವ ವಿಧೇಯಕವನ್ನು ಅಧಿವೇಶನದಲ್ಲಿ ಮಂಡಿಸಲು ಅನುಮತಿ ಕೋರಿ ವಿಧಾನ ಪರಿಷತ್ತಿನ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ಪತ್ರದಲ್ಲಿ ಯಾವುದೇ ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗಳು ಆಹಾರ ಪದಾರ್ಥಗಳ ಪ್ರಮಾಣೀಕರಣವನ್ನು ನೀಡುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದರು.
ಪ್ರಸ್ತಾವಿತ ತಿದ್ದುಪಡಿಯು ಸರ್ಕಾರದ ಮೇಲೆ ಯಾವುದೇ ಆರ್ಥಿಕ ಹೊರೆಯನ್ನು ಉಂಟುಮಾಡುವುದಿಲ್ಲ ಮತ್ತು ರಾಜ್ಯದ ಬೊಕ್ಕಸಕ್ಕೆ 5,000 ರೂ. ಕೋಟಿಗಳಷ್ಟು ಹೆಚ್ಚುವರಿ ಆದಾಯವನ್ನು ತರುತ್ತದೆ ಎಂದು ಪತ್ರದ ಮೂಲಕ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:31 pm, Tue, 20 December 22