AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈಗೆ ಹೊರಟಿದ್ದ ವಿಮಾನ ಬೆಳಗಾವಿಯಲ್ಲಿ ತುರ್ತು ಭೂಸ್ಪರ್ಶ

ಬೆಳಗಾವಿಯಿಂದ ಮುಂಬೈಗೆ ಹೊರಟ ಸ್ಟಾರ್ ಏರ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶವಾಗಿದೆ. 48 ಪ್ರಯಾಣಿಕರು ಸುರಕ್ಷಿತವಾಗಿ ಇಳಿದಿದ್ದಾರೆ. ಪೈಲಟ್‌ನ ತ್ವರಿತ ಕ್ರಮದಿಂದ ಒಂದು ಪ್ರಮುಖ ಅಪಾಯ ತಪ್ಪಿದೆ. ಪ್ರಯಾಣಿಕರಿಗೆ ಬೇರೆ ವಿಮಾನದಲ್ಲಿ ಮುಂಬೈಗೆ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗಿದೆ. ವಿಮಾನದ ತಾಂತ್ರಿಕ ದೋಷದ ತನಿಖೆ ನಡೆಯುತ್ತಿದೆ.

ಮುಂಬೈಗೆ ಹೊರಟಿದ್ದ ವಿಮಾನ ಬೆಳಗಾವಿಯಲ್ಲಿ ತುರ್ತು ಭೂಸ್ಪರ್ಶ
ತುರ್ತು ಭೂಸ್ಪರ್ಶವಾದ ವಿಮಾನ
Sahadev Mane
| Updated By: ವಿವೇಕ ಬಿರಾದಾರ|

Updated on:Aug 16, 2025 | 2:59 PM

Share

ಬೆಳಗಾವಿ, ಆಗಸ್ಟ್​ 16: ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಮುಂಬೈಗೆ (Mumbai) ಹೊರಟ್ಟಿದ್ದ ವಿಮಾನ ಬೆಳಗಾವಿಯಲ್ಲಿ (Belagavi) ತುರ್ತು ಭೂಸ್ಪರ್ಷವಾಗಿದೆ (Emergency Landing). ಪೈಲಟ್​ನ ಸಮಯ ಪ್ರಜ್ಞೆಯಿಂದ 48 ಮಂದಿ ಪ್ರಯಾಣಿಕರ ಜೀವ ಉಳಿದಿದೆ. ಸ್ಟಾರ್ ಏರ್ ಕಂಪನಿಯ ವಿಮಾನ ಶನಿವಾರ (ಆ.16) ಬೆಳಗ್ಗೆ ಬೆಳಗಾವಿಯಿಂದ ಮುಂಬೈಗೆ ಹೊರಟಿತ್ತು. ಬೆಳಗಾವಿ ವಿಮಾನ ನಿಲ್ದಾಣದಿಂದ ಟೇಕ್​ ಆಫ್​ ಆದ ಮೇಲೆ ವಿಮಾನದ ಇಂಜಿನ್​ನಲ್ಲಿ ತಾಂತ್ರಿಕ ದೋಷ ಕಂಡಿದೆ.

ಕೂಡಲೇ ಅಲರ್ಟ್​ ಆದ ಪೈಲೆಟ್​ 15 ನಿಮಿಷಗಳಲ್ಲೇ ಮತ್ತೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಲ್ಯಾಂಡ್​​ ಮಾಡಿದ್ದಾರೆ. ಪೈಲಟ್​ನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರ ಜೀವ ಉಳಿದಿದೆ. ಸ್ಟಾರ್ ಏರ್ ಕಂಪನಿ ಪ್ರಯಾಣಿಕರಿಗೆ ಮತ್ತೊಂದು ವಿಮಾನದ ವ್ಯವಸ್ಥೆ ಮಾಡಿ, ಮುಂಬೈಗೆ ಕಳುಹಿಸಿಕೊಟ್ಟಿದ್ದಾರೆ. ವಿಮಾನಯಾನ ಸಂಸ್ಥೆ ತಾಂತ್ರಿಕ ದೋಷ ಬಗ್ಗೆ ಮಾಹಿತಿ ಪಡೆಯುತ್ತಿದೆ.

ವಿಮಾನ ತುರ್ತು ಭೂಸ್ಪರ್ಶವಾದ ಬಗ್ಗೆ ಬೆಳಗಾವಿ ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ತ್ಯಾಗರಾಜನ್​ ಮಾತನಾಡಿ, ಸ್ಟಾರ್ ಏರ್ ವಿಮಾನ ಬೆಳಗ್ಗೆ 7.50ಕ್ಕೆ ಬೆಳಗಾವಿಯಿಂದ ಮುಂಬೈಗೆ ಹೊರಟ್ಟಿತ್ತು. ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ವಿಮಾನ ಮತ್ತೆ ಲ್ಯಾಂಡ್ ಆಗಿದೆ. ಇಂಜಿನಿಯರ್ ಬಂದಿದ್ದು ಈಗ ವಿಮಾನ ಪರಿಶೀಲನೆ ಮಾಡುತ್ತಿದ್ದಾರೆ. ಬೇರೆ ವಿಮಾನ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಿಂದ ಬಂದಿದ್ದ ವಿಮಾನದಲ್ಲಿ ಪ್ರಯಾಣಿಕರು ಬೆಳಗಾವಿಯಿಂದ ಮುಂಬೈಗೆ ತೆರಳಿದ್ದಾರೆ. ಕೆಲವರು ಟಿಕೆಟ್ ಕ್ಯಾನ್ಸಲ್ ಮಾಡಿದ್ದರೇ, ಇನ್ನೂ ಕೆಲವರು ಈಗ ಪ್ರಯಾಣ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಕೆಸಿ ವೇಣುಗೋಪಾಲ್, ಸಂಸದರಿದ್ದ ಏರ್ ಇಂಡಿಯಾ ವಿಮಾನ ಚೆನ್ನೈನಲ್ಲಿ ತುರ್ತು ಭೂಸ್ಪರ್ಶ

ಘಟನೆ ಸಂಬಂಧ ಪ್ರಯಾಣಿಕರು ಮಾತನಾಡಿ, ಇಂದು ಬೆಳಗ್ಗೆ 7.50ಕ್ಕೆ ವಿಮಾನ ಟೆಕ್ ಅಫ್ ಆಗಿತ್ತು. ಕೆಲವೇ ಹೊತ್ತಿನಲ್ಲಿ ವಿಮಾನ ಏಕಾಏಕಿ ಟರ್ನ್ ಆಯ್ತು. ಈ ವೇಳೆ ಬಹಳಷ್ಟು ಭಯ ಅಗಿತ್ತು. ಲ್ಯಾಂಡ್ ಆಗುವ ಸಂದರ್ಭದಲ್ಲಿ ಪೈಲಟ್, ಮತ್ತೆ ಬೆಳಗಾವಿಯಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡುತ್ತಿದ್ದೇವೆ ಅಂತ ಹೇಳಿದರು ಎಂದು ತಿಳಿಸಿದರು.

ಪೈಲಟ್​ ಆ ರೀತಿ ಹೇಳಿದ ತಕ್ಷನ ನಮಗೆ ಅಹಮದಾಬಾದ್​ನ ಘಟನೆ ನಮ್ಮ ನೆನಪಿಗೆ ಬಂತು. ಅದೃಷ್ಟವಶಾತ್ ಎಲ್ಲರೂ ಬದುಕುಳಿದು ಬಂದಿದ್ದೇವೆ. ಇಂದು ದ್ವಾರಕಾದಲ್ಲಿ ಕೃಷ್ಣನ ದರ್ಶನ ಪಡೆಯಬೇಕಿತ್ತು. ವಿಮಾನ ಸಮಸ್ಯೆಯಾಗಿದ್ದರಿಂದ ಎಲ್ಲವೂ ವಿಳಂಬ ಆಗಿದೆ ಲಾಸ್ ಕೂಡ ಆಗಿದೆ ಎಂದು ಪ್ರಯಾಣಿಕರಾದ ಗಂಗಾ ಪವಾರ್ ಮತ್ತು ಪತಿ ಶ್ರೀನಿವಾಸ ಪವಾರ್ ಹೇಳಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:53 pm, Sat, 16 August 25