AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ: ಪ್ರೀತ್ಸೆ ಪ್ರೀತ್ಸೆ ಅಂತ ಯುವತಿ ಎದುರೇ ಚಾಕುವಿನಿಂದ ಇರಿದುಕೊಂಡ ಪಾಗಲ್​ ಪ್ರೇಮಿ

ಚಾಮರಾಜನಗರದ ಬಸ್ ನಿಲ್ದಾಣದಲ್ಲಿ ಓರ್ವ ಯುವಕ ಪ್ರೀತಿಸುವಂತೆ ತನ್ನ ಎದೆಗೆ ಚಾಕು ಇರಿದುಕೊಂಡ ಹುಚ್ಚಾಟ ಮೆರೆದಿರುವಂತಹ ಘಟನೆ ನಡೆದಿದೆ. ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿಯ ಪೋಷಕರ ದೂರಿನನ್ವಯ ಪೋಕ್ಸೋ ಕೇಸ್ ದಾಖಲಾಗಿದೆ. ಗಾಯಾಳು ಯುವಕನಿಗೆ ಸಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಚಾಮರಾಜನಗರ: ಪ್ರೀತ್ಸೆ ಪ್ರೀತ್ಸೆ ಅಂತ ಯುವತಿ ಎದುರೇ ಚಾಕುವಿನಿಂದ ಇರಿದುಕೊಂಡ ಪಾಗಲ್​ ಪ್ರೇಮಿ
ಪಾಗಲ್​ ಪ್ರೇಮಿಯ ಹುಚ್ಚಾಟ
ಸೂರಜ್ ಪ್ರಸಾದ್ ಎಸ್.ಎನ್
| Updated By: ಗಂಗಾಧರ​ ಬ. ಸಾಬೋಜಿ|

Updated on: Aug 17, 2025 | 1:56 PM

Share

ಚಾಮರಾಜನಗರ, ಆಗಸ್ಟ್​ 17: ಯುವತಿ (girl) ಎದುರೇ ಎದೆಗೆ ಚಾಕುವಿನಿಂದ ಇರಿದುಕೊಂಡು ಪಾಗಲ್​ ಪ್ರೇಮಿ ಹುಚ್ಚಾಟ ಮೆರೆದಿರುವಂತಹ ಘಟನೆ ಚಾಮರಾಜನಗರ (Chamarajanagar) ಬಸ್ ನಿಲ್ದಾಣದಲ್ಲಿ ನಡೆದಿದೆ. ಪ್ರದೀಪ್ ಎಂಬಾತ ಪ್ರೀತಿಸುವಂತೆ ಪದವಿ ವಿದ್ಯಾರ್ಥಿನಿ ಹಿಂದೆ ಬಿದ್ದಿದ್ದ. ಯುವತಿ ಎದುರೇ ತನ್ನ ಎದೆಗೆ ಚಾಕುವನಿಂದ ಇರಿದುಕೊಂಡಿದ್ದಾನೆ. ಸದ್ಯ ಗಾಯಾಳು ಪ್ರದೀಪ್​​ನನ್ನು ಸಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಪ್ರದೀಪ್ ಚಾಮರಾಜನಗರ ತಾಲೂಕಿನ ಸಾಣೇಗಾಲ ಗ್ರಾಮದ ನಿವಾಸಿ. ಪ್ರೀತಿಸುವಂತೆ ಪದವಿ ವಿದ್ಯಾರ್ಥಿನಿ ಹಿಂದೆ ಬಿದ್ದಿದ್ದ. ಸದ್ಯ ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ವಿದ್ಯಾರ್ಥಿನಿಯ ಪೋಷಕರ ದೂರಿನನ್ವಯ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. 

ಇದನ್ನೂ ಓದಿ
Image
ಬೆಂಗಳೂರು: ಸಾಲ ಕೊಟ್ಟವರ ಮನೆಯಲ್ಲೇ ಕನ್ನ; ಆರು ಜನರ ಬಂಧನ
Image
ಫಾರ್ವರ್ಡ್ ಮೆಸೇಜ್​​ ತಂದ ಆಪತ್ತು: ಗೆಳಯನ ಹತ್ಯೆ, ಪೊಲೀಸರೇ ಶಾಕ್!
Image
55 ರ ಮಹಿಳೆಗೆ 33 ರ ಯುವಕನ ಜತೆ ಲವ್! ಗಂಡನನ್ನೇ ಕೊಲೆ ಮಾಡಿಸಿದ ಪತ್ನಿ
Image
ಬಿರಿಯಾನಿ ತಿನ್ನುತ್ತಿರುವಾಗಲೇ ಯುವಕನ ಕೊಲೆ; 18 ಗಂಟೆಯಲ್ಲೇ ಆರೋಪಿಗಳ ಬಂಧನ

ಮನೆ ಮುಂದೆ ಕೂಗು ಹಾಕಿದ್ದಕ್ಕೆ ಯುವಕನಿಗೆ ಚಾಕು ಇರಿದ ದುಷ್ಕರ್ಮಿಗಳು

ಮನೆ ಮುಂದೆ ಕೂಗು ಹಾಕಿದ್ದಕ್ಕೆ ದುಷ್ಕರ್ಮಿಗಳು ಯುವಕನಿಗೆ ಚಾಕು ಇರಿದಿರುವಂತಹ ಘಟನೆ ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಲ್ಲಿ ನಡೆದಿದೆ. ಮುತ್ತಣ್ಣ ಗುಡಬಲಿ (22) ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ಯುವಕ. ಸದ್ಯ ಆತನ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ಶಿಫ್ಟ್​ ಮಾಡಿ ಚಿಕಿತ್ಸೆ ನಡೆದಿದೆ.

ಇದನ್ನೂ ಓದಿ: ಫಾರ್ವರ್ಡ್ ಮೆಸೇಜ್​​ ತಂದ ಆಪತ್ತು: ಮನೆಗೆ ನುಗ್ಗಿ ಗೆಳಯನ ಹತ್ಯೆ, ಪೊಲೀಸರೇ ಶಾಕ್!

ನಿನ್ನೆ ಸ್ನೇಹಿತನ ಹುಟ್ಟುಹಬ್ಬ ಮುಗಿಸಿಕೊಂಡು ಮುತ್ತಣ್ಣ ಮನೆಗೆ ವಾಪಾಸ್ ಆಗುತ್ತಿದ್ದ. ಬೈಕ್ ಮೇಲೆ ತೆರಳುವಾಗ ಆರೋಪಿಗಳ ಮನೆ ಮುಂದೆ ಕೂಗು ಹಾಕಿದ್ದ. ಈ ವೇಳೆ 15 ಜನರು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ಇಂದು ಬೆಳಗ್ಗೆ ಮತ್ತೆ ನಾಲ್ವರು ಮನೆಗೆ ಬಂದು ಏಕಾಏಕಿ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ: 55 ರ ಮಹಿಳೆಗೆ 33 ರ ಯುವಕನ ಜತೆ ಲವ್! ಗಂಡನನ್ನೇ ಕೊಲೆ ಮಾಡಿಸಿ ತಪ್ಪಿಸಿಕೊಂಡಿದ್ದಾಕೆ 2 ತಿಂಗಳ ಬಳಿಕ ಅರೆಸ್ಟ್

ಚಾಕುವಿನಿಂದ ಮುತ್ತಣ್ಣನ ಹೊಟ್ಟೆ ಮತ್ತು ಎದೆ ಭಾಗಕ್ಕೆ ಇರಿದು ಹತ್ಯೆಗೆ ಯತ್ನಿಸಲಾಗಿದೆ. ಮಹೇಶ್ ನಾರಿ, ವಿಶಾಲ್ ನಾರಿ, ಸಿದ್ದಪ್ಪ ಮುತ್ತೆನ್ನವರ್, ಪ್ರಕಾಶ್ ಮುತ್ತೆನ್ನವರ್​​ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದ್ದು, ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.