AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

55 ರ ಮಹಿಳೆಗೆ 33 ರ ಯುವಕನ ಜತೆ ಲವ್! ಗಂಡನನ್ನೇ ಕೊಲೆ ಮಾಡಿಸಿ ತಪ್ಪಿಸಿಕೊಂಡಿದ್ದಾಕೆ 2 ತಿಂಗಳ ಬಳಿಕ ಅರೆಸ್ಟ್

ಅನೈತಿಕ ಸಂಬಂಧದ‌ ಗುಟ್ಟು ಎಲ್ಲಿ ಬಯಲಾಗುತ್ತೆ ಎಂದು ಸ್ಕೆಚ್ ಹಾಕಿ ತನ್ನ ಗಂಡನನ್ನು ಪ್ರಿಯಕರನಿಂದ ಕೊಲೆ ಮಾಡಿಸಿದ್ದ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ಎರಡು ತಿಂಗಳ ಬಳಿಕ ಹತ್ಯೆಯ ಅಸಲಿ ಕಹಾನಿಯನ್ನು ಕಡೂರು ಪೊಲೀಸರು ಬೇಧಿಸಿದ್ದಾರೆ. ಈ ಪ್ರಕರಣದಲ್ಲಿ ಮುಂಚೆ ಮೂವರ ಬಂಧನವಾಗಿತ್ತು.

55 ರ ಮಹಿಳೆಗೆ 33 ರ ಯುವಕನ ಜತೆ ಲವ್! ಗಂಡನನ್ನೇ ಕೊಲೆ ಮಾಡಿಸಿ ತಪ್ಪಿಸಿಕೊಂಡಿದ್ದಾಕೆ 2 ತಿಂಗಳ ಬಳಿಕ ಅರೆಸ್ಟ್
ಪತಿ ಸುಬ್ರಹ್ಮಣ್ಯ, ಪತ್ನಿ ಮೀನಾಕ್ಷಿ
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ವಿವೇಕ ಬಿರಾದಾರ|

Updated on:Aug 16, 2025 | 3:27 PM

Share

ಚಿಕ್ಕಮಗಳೂರು, ಆಗಸ್ಟ್​ 16: ಲವ್ವರ್ ಜೊತೆ ಸೇರಿ ಪತಿಯ (Husband) ಹತ್ಯೆಗೆ (kill) ಸ್ಕೆಚ್​ ಹಾಕಿದ್ದ ಪತ್ನಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಅನೈತಿಕ ಸಂಬಂಧದ‌ ಗುಟ್ಟು ಬಯಲಾಗುತ್ತೆ ಎಂದು ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದ ಪತ್ನಿ ಮೀನಾಕ್ಷಿಯನ್ನು ಅರೆಸ್ಟ್ ಮಾಡಲಾಗಿದೆ. ಆ ಮೂಲಕ ಕಡೂರು ಪೊಲೀಸರ ನಿರಂತರ ತನಿಖೆಯಿಂದ ಎರಡು ತಿಂಗಳ ಬಳಿಕ ಹತ್ಯೆ ಕಹಾನಿಯ ಅಸಲಿ ಸತ್ಯ ಬಯಲಾಗಿದೆ.

ಗಂಡನ ಕೊಲೆಗೆ ಪತ್ನಿ ಸ್ಕೆಚ್

55 ವರ್ಷದ ಮೀನಾಕ್ಷಿ ಮತ್ತು 33 ವರ್ಷದ ಪ್ರದೀಪ್​ ಮಧ್ಯೆ ಲವ್ವಿ-ಡವ್ವಿ ನಡೆದಿತ್ತು. ಈ ಅನೈತಿಕ ಸಂಬಂಧದ‌ ಗುಟ್ಟು ಎಲ್ಲಿ ಬಯಲಾಗುತ್ತೆ ಎಂದು ತನ್ನ ಗಂಡನ ಕೊಲೆಗೆ ಪತ್ನಿ ಸ್ಕೆಚ್ ಹಾಕಿದ್ದಳು. ಪ್ರದೀಪ್ ಜೊತೆಗಿನ ಅನೈತಿಕ ಸಂಬಂಧದ‌ ಬಗ್ಗೆ ಇತ್ತ ಸುಬ್ರಹ್ಮಣ್ಯಗೂ ಅನುಮಾನ ಮೂಡಿತ್ತು. ಹೀಗಾಗಿ ಸುಬ್ರಹ್ಮಣ್ಯನನ್ನು ಹತ್ಯೆ ಮಾಡುವಂತೆ ಪ್ರದೀಪ್​​ಗೆ ಮೀನಾಕ್ಷಿ ತಿಳಿಸಿದ್ದಳು. ಅವಳ ಸೂಚನೆ ಮೇರೆಗೆ ಸ್ನೇಹಿತರ ಜೊತೆ ಸೇರಿ ಪ್ರದೀಪ್ ಹತ್ಯೆ ಮಾಡಿದ್ದ.

ಇದನ್ನೂ ಓದಿ: ಗದಗ: ಬಿರಿಯಾನಿ ತಿನ್ನುತ್ತಿರುವಾಗಲೇ ಯುವಕನ ಕೊಲೆ; 18 ಗಂಟೆಯಲ್ಲೇ ಆರೋಪಿಗಳ ಬಂಧನ

ಇದನ್ನೂ ಓದಿ
Image
ಬಿರಿಯಾನಿ ತಿನ್ನುತ್ತಿರುವಾಗಲೇ ಯುವಕನ ಕೊಲೆ; 18 ಗಂಟೆಯಲ್ಲೇ ಆರೋಪಿಗಳ ಬಂಧನ
Image
ಬೆಂಗಳೂರು: ಲೇಡಿಸ್ ಪಿಜಿಗೆ ನುಗ್ಗಿದ ಖದೀಮ; ಚಾಕು ತೋರಿಸಿ ಲೈಂಗಿಕ ದೌರ್ಜನ್ಯ
Image
ವಿಡಿಯೋ: ಮಧ್ಯರಾತ್ರಿ ಎಟಿಎಂ ಕಳವು ಮಾಡ್ತಿದ್ದವನ ಹೆಡೆಮುರಿ ಕಟ್ಟಿದ ಪೊಲೀಸ್
Image
ಹಾಸನ: ಅಪ್ಪನ ಸಾವಿನಿಂದ ಬಯಲಾಯ್ತು ಮಗನ ಹತ್ಯೆ ರಹಸ್ಯ!

ಪ್ರಿಯಕರ ಪ್ರದೀಪ್‌ಗೆ ಮಾಹಿತಿ ನೀಡಿ ಹತ್ಯೆ ಮಾಡಿಸಿದ್ದ ಮೀನಾಕ್ಷಿ, ಜೂನ್ 2 ರಂದು ಗಂಡ ನಾಪತ್ತೆ ಎಂದು ಪೊಲೀಸ್​ ಠಾಣೆಗೆ ದೂರು ನೀಡಿದ್ದಳು. ಪ್ರದೀಪ್‌ ತಾಯಿಯ ಮೊಬೈಲ್‌ ಮೂಲಕ ಆತನೊಂದಿಗೆ ಸಂಪರ್ಕದಲ್ಲಿದ್ದಳು. ಪೊಲೀಸರಿಗೆ ಚಿಕ್ಕ ಸುಳಿವು ಸಿಗದಂತೆ ಪ್ರಕರಣದಿಂದ ಮೀನಾಕ್ಷಿ ಬಚಾವ್ ಆಗಿದ್ದಳು. ಆದರೆ ಕಡೂರು ಪೊಲೀಸರ ನಿರಂತರ ತನಿಖೆಯಿಂದ ಜೂನ್ ‌8 ರಂದು ಆರೋಪಿಗಳಾದ ಪ್ರದೀಪ್, ಸಿದ್ದೇಶ್ ಮತ್ತು ವಿಶ್ವಾಸ್ ಎಂಬಾತನನ್ನು​ ಬಂಧಿಸಿದ್ದರು.

ಇದನ್ನೂ ಓದಿ: ಹಾಸನ: ಅಪ್ಪನ ಸಾವಿನಿಂದ ಬಯಲಾಯ್ತು ಮಗನ ಹತ್ಯೆ ರಹಸ್ಯ! ಉತ್ಖನನ ನಡೆಸಿದಾಗ ಸಿಕ್ತು ಅಸ್ಥಿಪಂಜರ

ಅನೈತಿಕ ಸಂಬಂಧಕ್ಕೆ ‌ಅಡ್ಡಿ, ಹಣದ ವ್ಯವಹಾರಕ್ಕೆ ‌ಹತ್ಯೆ ಮಾಡಲಾಗಿದೆ ಎಂದು ಆರೋಪಿ ಪ್ರದೀಪ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದ. ಆರೋಪಿಗಳ ಬಂಧನವಾಗಿ 2 ತಿಂಗಳ ಬಳಿಕ ಇದೀಗ ಕಡೂರು ಪೊಲೀಸರಿಂದ ಮೀನಾಕ್ಷಿ ಬಂಧನವಾಗಿದೆ.

ಹತ್ಯೆ ಮಾಡಿ ಸುಟ್ಟು ಹಾಕಿದ್ದ ಆರೋಪಿಗಳು

ಮೇ 31ರ ರಾತ್ರಿ ಕಡೂರು ಪಟ್ಟಣದ ಕೋಟೆ ಬಡಾವಣೆಯ ನಿವಾಸಿ ಪತಿ ಸುಬ್ರಹ್ಮಣ್ಯರ ಬರ್ಬರ ಹತ್ಯೆ ನಡೆದಿತ್ತು. ಚಿಕ್ಕಮಗಳೂರಿಗೆ ಕರೆತಂದು ದಾರಿ ಮಧ್ಯೆ ಹತ್ಯೆ ಮಾಡಿ ಪ್ರದೀಪ್ ಸುಟ್ಟು ಹಾಕಿದ್ದ. ಮೃತ ಸುಬ್ರಹ್ಮಣ್ಯ ಟೈಲರ್​ ಕೆಲಸ ಮಾಡುತ್ತಿದ್ದರು. ಆತನ ಶಾಪ್ ಕೀ ಯಿಂದ ಹತ್ಯೆ ರಹಸ್ಯ ಸಂಪೂರ್ಣ ಹೊರಬಂದಿತ್ತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:08 pm, Sat, 16 August 25