AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾವು ಯಾರು ಧಮ್ಕಿ ಹಾಕಿಲ್ಲ, ನ್ಯಾಯಯುತ ಬೇಡಿಕೆ ಇಟ್ಟಿದ್ದೇವೆ: 50 ಸೀಟು ಗೆಲ್ಲಿಸಿಕೊಂಡು ಬಾ ಎಂದು ಅಶೋಕ್​ಗೆ ಟಾಂಗ್ ಕೊಟ್ಟ ಯತ್ನಾಳ್

ಧಮ್ಕಿ ಹಾಕಿ ಮೀಸಲಾತಿ ಪಡಿಯುತ್ತಿದ್ದಾರೆ ಎಂಬ ಸಚಿವ ಆರ್​. ಅಶೋಕ್​ ಹೇಳಿಕೆ ವಿಚಾರಕ್ಕೆ ಬಸನಗೌಡ ಪಾಟೀಲ್ ಯತ್ನಾಳ್​ ಬೆಳಗಾವಿಯಲ್ಲಿ ಕಿಡಿಕಾರಿದರು.

ನಾವು ಯಾರು ಧಮ್ಕಿ ಹಾಕಿಲ್ಲ, ನ್ಯಾಯಯುತ ಬೇಡಿಕೆ ಇಟ್ಟಿದ್ದೇವೆ: 50 ಸೀಟು ಗೆಲ್ಲಿಸಿಕೊಂಡು ಬಾ ಎಂದು ಅಶೋಕ್​ಗೆ ಟಾಂಗ್ ಕೊಟ್ಟ ಯತ್ನಾಳ್
ಆರ್​. ಅಶೋಕ್, ಬಸನಗೌಡ ಪಾಟೀಲ್​ ಯತ್ನಾಳ್
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Dec 23, 2022 | 4:45 PM

Share

ಬೆಳಗಾವಿ: ನಾವು ಯಾರು ಧಮ್ಕಿ ಹಾಕಿಲ್ಲ. ನ್ಯಾಯಯುತ ಬೇಡಿಕೆ ಇಟ್ಟಿದ್ದೇವೆ (2A Reservation) ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಧಮ್ಕಿ ಹಾಕಿ ಮೀಸಲಾತಿ ಪಡಿಯುತ್ತಿದ್ದಾರೆ ಎಂಬ ಸಚಿವ ಆರ್​. ಅಶೋಕ್​ ಹೇಳಿಕೆ ವಿಚಾರಕ್ಕೆ ಬಸನಗೌಡ ಪಾಟೀಲ್ ಯತ್ನಾಳ್​ ಕಿಡಿಕಾರಿದರು. ಡಿ. 29ರಂದು ಮೀಸಲಾತಿ ಪ್ರಕಟಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಾವು ಯಾರಿಗೂ ಧಮ್ಕಿ ಹಾಕಿಲ್ಲವೆಂದರು. ಆರ್.ಅಶೋಕ್​ ಹಳೇ ಮೈಸೂರು ಭಾಗದಲ್ಲಿ 50 ಸೀಟ್ ಗೆಲ್ಲಿಸಿಕೊಂಡು ಬರಲಿ. ಅವಾಗ ಮೀಸಲಾತಿ ನೀಡುವ ಬಗ್ಗೆ ನೋಡೋಣ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹರಿಹಾಯ್ದರು.

2ಎ ಆದರೂ ಕೊಡಲಿ 2Z ಆದರೂ ಕೊಡಲಿ​

ದೇವೇಗೌಡ್ರ ರೀತಿ ಅಶೋಕ್ ಸೀಟು ಗೆದ್ದು ಬರಲಿ. ನಾವು ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಬಿಜೆಪಿ ಹಿಂದೂಗಳನ್ನ ಗೆಲ್ಲಿಸಿ ತರುತ್ತೇವೆ. ಬರಿ ಕಥೆ ಹೇಳಿದ್ರೆ ಸಾಲದು. ನಾವು ಯಾರಿಗೂ ಚಾಲೆಂಜ್ ಮಾಡುವುದಿಲ್ಲ. ಧಮ್ಕಿ ಅಂದಿದಕ್ಕೆ ಉತ್ತರ ಕೊಡುತ್ತಿದ್ದೇನೆ. 29ಕ್ಕೆ ಯಾವುದೇ ಸಮುದಾಯಕ್ಕೆ ಅಸಮದಾನ ಆಗದ ರೀತಿಯಲ್ಲಿ ಮೀಸಲಾತಿಯನ್ನ ವಿಂಗಡನೆ ಮಾಡಿ, ಸಾಮಾಜಿಕ ನ್ಯಾಯ ಒದಗಿಸೋದಾಗಿ ಭರವಸೆ ಇದೆ. ಮಾಡು ಇಲ್ಲವೆ ಮಡಿ ಹೋರಾಟ ಮಾಡುತ್ತಾರೆ ಎಂಬ ವಿಚಾರಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದು, ಯಾಕೆ ಮಡಿಬೇಕು ನಮಗೆ ಬೇರೆ ಕೆಲಸ ಇಲ್ವಾ. 2ಎ ಆದರೂ ಕೊಡಲಿ 2Z ಆದರೂ ಕೊಡಲಿ. ಆದರೆ 2ಎಗೆ ಇರುವ ಎಲ್ಲಾ ಮಾನದಂಡುಗಳು ಅದ್ರಲ್ಲಿ ಇರಬೇಕು ಎಂದು ತಿಳಿಸಿದರು.

ಇದನ್ನೂ ಓದಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಪ್ರಕಟಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚುತ್ತದೆ: ಬಸನಗೌಡ ಯತ್ನಾಳ್

ಒಕ್ಕಲಿಗರಿಗೆ ಮೀಸಲಾತಿ ಕೊಡವಲ್ಲಿ ನಮ್ಮ ಆಕ್ಷೇಪವಿಲ್ಲಾ

2ಎಯಲ್ಲಿರುವ 107 ಜಾತಿಗಳಿಗೆ ಅನ್ಯಾಯವಾಗದಂತೆ ಗೌಡ, ಲಿಂಗಾಯಿತ, ಪಂಚಮಸಾಲಿ ಇವರಿಗೆ ನೀಡಲಿ. ನಾವು ಯಾರದ್ದೇ ಮೀಸಲಾತಿ ಕಸಿದುಕೊಳ್ತಿಲ್ಲಾ. ಅವರಿಗೂ ನೀಡಲಿ ನಮಗೂ ನೀಡಲಿ. ಕೆಲವೊಂದು ಸಮುದಾಯಗಳು 3ಬಿ, 2ಎ ಹಾಗೂ ಅಲ್ಪಸಂಖ್ಯಾತರಲ್ಲಿದ್ದಾರೆ. ಅವರಿಗೆ ಒಂದೇ ವರ್ಗದಲ್ಲಿ ಸೀಮಿತಗೊಳಿಸಿ. ಮುಸ್ಲಿಂರು ಹಿಂದುಳಿದ ವರ್ಗ ಎ ಹಾಗೂ ಅಲ್ಪಸಂಖ್ಯಾತ ವರ್ಗದಲ್ಲಿದ್ದಾರೆ. ಅವರನ್ನ ಒಂದು ಕಡೆ ಹಾಕಿ, ಉಳಿಕೆ ಮೀಸಲಾತಿ ಪ್ರಮಾಣವನ್ನ ಒಕ್ಕಲಿಗರಿಗಾಗಿ ಪಂಚಮಸಾಲಿಗಾಗಿ ಹಂಚಿ. ಒಕ್ಕಲಿಗರಿಗೆ ಮೀಸಲಾತಿ ಕೊಡವಲ್ಲಿ ನಮ್ಮ ಆಕ್ಷೇಪವಿಲ್ಲಾ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಇದನ್ನೂ ಓದಿ: ನಾಳೆ ವಿಧಾನಸಭೆ ಅಧಿವೇಶನದಲ್ಲಿ SC, ST ಮೀಸಲಾತಿ ಹೆಚ್ಚಳ ವಿಧೇಯಕ ಸೇರಿ ಒಟ್ಟು 4 ಮಸೂದೆ ಮಂಡನೆ

ಬಸನಗೌಡ ಪಾಟೀಲ್​ ಯತ್ನಾಳ್​​ ರಾಜಕೀಯ ಮಾತಾಡಬಾರದಿತ್ತು: ಕೆ.ಸುಧಾಕರ್

ಈ ಕುರಿತಾಗಿ ಬೆಂಗಳೂರಿನಲ್ಲಿ ಟಿವಿ9ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದು, ರಾಜಕೀಯ ಶಕ್ತಿಯನ್ನು ಇಟ್ಟುಕೊಂಡು ಮೀಸಲಾತಿ ಕೊಡುವುದಲ್ಲ. ಶಿಕ್ಷಣ, ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಕೊಡುವುದು. ಅದೇ ಮಾನದಂಡ ಇಟ್ಟು ಪಂಚಮಸಾಲಿಗಳು ಮೀಸಲಾತಿ ಕೇಳ್ತಿದ್ದಾರೆ. ಶಿಕ್ಷಣ, ಆರ್ಥಿಕವಾಗಿ ಹಿಂದುಳಿದವರೆಂದು ಮೀಸಲಾತಿ ಕೇಳುತ್ತಿದ್ದೇವೆ. ರಾಜಕೀಯವಾಗಿ ಮೀಸಲಾತಿ ನೀಡಲ್ಲ. ಒಂದೊಮ್ಮೆ ಅವರು ಬಲಾಢ್ಯರು ಅಂದ್ರೆ ಮೀಸಲಾತಿಯನ್ನೇ ನೀಡಲ್ಲ. ಬಸನಗೌಡ ಪಾಟೀಲ್​ ಯತ್ನಾಳ್​​ ರಾಜಕೀಯವಾಗಿ ಮಾತಾಡಬಾರದಿತ್ತು ಎಂದರು.

ಒಕ್ಕಲಿಗ ಸಮುದಾಯದವರು ಭೂಮಿ ನಂಬಿಕೊಂಡು ಬದುಕುತ್ತಿದ್ದಾರೆ. ಒಕ್ಕಲಿಗ ಸಮುದಾಯ ವಿರೋಧ ಮಾಡಿ ಸರ್ಕಾರ ಮಾಡಲು ಆಗಲ್ಲ. ಒಕ್ಕಲಿಗರು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಯಾರ ಸರ್ಟಿಫಿಕೆಟ್ ಬೇಕಿಲ್ಲ. ನಮಗೆ ವಿಶ್ವಾಸವಿದೆ, ಸಿಎಂ ಕಾನೂನಿನ ಅಡಿಯಲ್ಲಿ ನ್ಯಾಯ ಒದಗಿಸ್ತಾರೆ. ಪಂಚಮಸಾಲಿ ಸಮುದಾಯಕ್ಕೂ ಸಿಎಂ ಬೊಮ್ಮಾಯಿ ನ್ಯಾಯ ಒದಗಿಸಲಿ ಎಂದು ಸಚಿವ ಡಾ.ಸುಧಾಕರ್​ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:44 pm, Fri, 23 December 22

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ