Viral Video: ಮನೆಗೆ ಬಂದ ಹಾವನ್ನು ಕೊರಳಲ್ಲಿ ಸುತ್ತಿಕೊಂಡು ಹೋಗಿ ಕಾಡಿಗೆ ಬಿಟ್ಟ ವೃದ್ಧ; ವಿಡಿಯೋ ವೈರಲ್!

| Updated By: ganapathi bhat

Updated on: Jul 04, 2021 | 6:54 PM

Belagavi News: ಹಾವನ್ನು ಕೊರಳಿನಲ್ಲಿ ಸುತ್ತಿಕೊಂಡು ವೃದ್ಧನೊಬ್ಬ ಸೈಕಲ್ ಸವಾರಿ ನಡೆಸಿದ್ದಾನೆ. ಈ ಘಟನೆ ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ ನಡೆದಿದೆ.

Viral Video: ಮನೆಗೆ ಬಂದ ಹಾವನ್ನು ಕೊರಳಲ್ಲಿ ಸುತ್ತಿಕೊಂಡು ಹೋಗಿ ಕಾಡಿಗೆ ಬಿಟ್ಟ ವೃದ್ಧ; ವಿಡಿಯೋ ವೈರಲ್!
ಕೊರಳಲ್ಲಿ ಹಾವು!
Follow us on

ಬೆಳಗಾವಿ: ಕೆಲವೊಂದು ವಿಚಿತ್ರ ಘಟನೆಗಳು ನೋಡುಗರನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ. ಸಾಮಾನ್ಯ ವಿಷಯಗಳನ್ನು ಅಸಾಮಾನ್ಯ ವಿಧಾನದಲ್ಲಿ ಅಥವಾ ಅಸಹಜ ವಿಧಾನದಲ್ಲಿ ನಡೆಸಿಕೊಂಡರೆ ಅದು ವಿಚಿತ್ರ ಎನಿಸಿಬಿಡುತ್ತದೆ. ಅದಕ್ಕೆ ಉದಾಹರಣೆ ಎಂಬಂತೆ ಬೆಳಗಾವಿಯಲ್ಲಿ ಇಂದೊಂದು ಘಟನೆ ನಡೆದಿದೆ. ನಿಮ್ಮ ಮನೆಗೆ ಹಾವು ಬಂದರೆ ಏನು ಮಾಡಬಹುದು? ಒಂದೋ ಅದರ ಪಾಡಿಗೆ ಅದು ಹೋಗಬೇಕು. ಅಥವಾ ಅದನ್ನು ತಿಳಿದವರು ತೆಗೆದುಕೊಂಡು ಹೋಗಿ ಕಾಡಿಗೆ ಬಿಡಬೇಕು. ಆದರೆ, ಇಲ್ಲಾಗಿರುವುದೇ ಬೇರೆ.

ಹಾವನ್ನು ಕೊರಳಿನಲ್ಲಿ ಸುತ್ತಿಕೊಂಡು ವೃದ್ಧನೊಬ್ಬ ಸೈಕಲ್ ಸವಾರಿ ನಡೆಸಿದ್ದಾನೆ. ಈ ಘಟನೆ ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ ನಡೆದಿದೆ. 2 ದಿನಗಳ ಹಿಂದೆ ವೃದ್ಧನ ಮನೆಯಲ್ಲಿ ಹಾವು ಪ್ರತ್ಯಕ್ಷವಾಗಿತ್ತು. ಮನೆಗೆ ಬಂದಿದ್ದ ಹಾವನ್ನು ಹಿಡಿದ ವೃದ್ಧ ಅದನ್ನು ಕಾಡಿಗೆ ಬಿಟ್ಟು ಬಂದಿದ್ದಾನೆ.

ಹಾಗೇ ಹಾವು ಹಿಡಿದು ಕಾಡಿಗೆ ಬಿಟ್ಟು ಬಂದರೆ, ಅಂಥಾ ದೊಡ್ಡ ವಿಷಯವೇನೂ ಆಗುತ್ತಿರಲಿಲ್ಲ. ಆದರೆ, ಇಲ್ಲಾಗಿರುವುದು ವಿಚಿತ್ರ. ಹಿಡಿದ ಹಾವನ್ನು ವೃದ್ಧ ಕೊರಳಿಗೆ ಸುತ್ತಿಕೊಂಡು ಹೋಗಿ ಕಾಡಿಗೆ ಬಿಟ್ಟಿದ್ದಾನೆ. ಹಾವು ಸುತ್ತಿಕೊಂಡು ಸೈಕಲ್ ಸವಾರಿ ಮಾಡಿದ್ದಾನೆ.

ವೃದ್ಧನ ಧೈರ್ಯ ನೋಡಿ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೊರಳಲ್ಲಿ ಹಾವು ಹಾಕಿಕೊಂಡು ಊರ ತುಂಬ ಸೈಕಲ್ ಸವಾರಿ ನಡೆಸಿದ ವೃದ್ಧ ಭಾರೀ ಸುದ್ದಿಯಾಗಿದ್ದಾನೆ. ಹಾವು ಸುತ್ತಿಕೊಂಡು ಸೈಕಲ್ ಸವಾರಿ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Bihar Rain: ನೋಡನೋಡುತ್ತಿದ್ದಂತೆ ಕುಸಿದು ನದಿಗೆ ಬಿದ್ದ ಮನೆ; ಭಯಾನಕ ದೃಶ್ಯದ ವಿಡಿಯೋ ವೈರಲ್​

ಬೆಳಗಾವಿಯಲ್ಲೇ ಈ ಬಾರಿಯ ಅಧಿವೇಶನ ನಡೆಸಬೇಕು: ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಪಟ್ಟು?

Published On - 6:39 pm, Sun, 4 July 21