ಟಿಪ್ಪು ಸೇರಿದಂತೆ ಮುಸ್ಲಿಂ ರಾಜರನ್ನು ಅವಮಾನಿಸುವ ಸ್ಟೇಟಸ್, ಬ್ಯಾನರ್; ಚಿಕ್ಕೋಡಿಯಲ್ಲಿ ಬಿಗುವಿನ ವಾತಾವರಣ

ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಹೊಸಪೇಟೆ ಗಲ್ಲಿಯಲ್ಲಿ ಕೆಲವರು ಟಿಪ್ಪು ಸುಲ್ತಾನ್ ಸೇರಿದಂತೆ ಮುಸ್ಲಿಂ ರಾಜರನ್ನು ಅವಮಾನಿಸುವ ರೀತಿ ವಾಟ್ಸಾಪ್ ಸ್ಟೇಟಸ್ ಇಟ್ಟಿದ್ದರು. ಹಾಗೂ ಬ್ಯಾನರ್ ಹಾಕಿದ್ದರು. ವಿಚಾರ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಟಿಪ್ಪು ಸೇರಿದಂತೆ ಮುಸ್ಲಿಂ ರಾಜರನ್ನು ಅವಮಾನಿಸುವ ಸ್ಟೇಟಸ್, ಬ್ಯಾನರ್; ಚಿಕ್ಕೋಡಿಯಲ್ಲಿ ಬಿಗುವಿನ ವಾತಾವರಣ
ಟಿಪ್ಪು ಸುಲ್ತಾನ್
Follow us
ಮಹಾಂತೇಶ ಕುರಬೇಟ, ಟಿವಿ9 ಚಿಕ್ಕೋಡಿ
| Updated By: ಆಯೇಷಾ ಬಾನು

Updated on: Nov 11, 2023 | 7:48 AM

ಚಿಕ್ಕೋಡಿ, ನ.11: ಟಿಪ್ಪು ಸುಲ್ತಾನ್ (Tipu Sultan) ಸೇರಿದಂತೆ ಮುಸ್ಲಿಂ ರಾಜರನ್ನು (Muslim Kings) ಅವಮಾನಿಸುವ ರೀತಿ ವಾಟ್ಸಾಪ್ ಸ್ಟೇಟಸ್ ಹಾಗೂ ಬ್ಯಾನರ್ ಅಳವಡಿಕೆ ಮಾಡಲಾಗಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ (Chikodi) ತಾಲೂಕಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗೃತ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಹೊಸಪೇಟೆ ಗಲ್ಲಿಯಲ್ಲಿ ಕೆಲವರು ಟಿಪ್ಪು ಸುಲ್ತಾನ್ ಸೇರಿದಂತೆ ಮುಸ್ಲಿಂ ರಾಜರನ್ನು ಅವಮಾನಿಸುವ ರೀತಿ ವಾಟ್ಸಾಪ್ ಸ್ಟೇಟಸ್ ಇಟ್ಟಿದ್ದರು. ಹಾಗೂ ಬ್ಯಾನರ್ ಹಾಕಿದ್ದರು. ವಿಚಾರ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಇನ್ನು ಮತ್ತೊಂದೆಡೆ ವಾಟ್ಸಪ್ ಸ್ಟೇಟಸ್ ಇಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಒಂದು ಸಮುದಾಯದ ಜನ ಜಮಾಯಿಸಿದ್ದರು. ಇದೇ ವೇಳೆ ಅಖಂಡ‌ ಭಾರತ ಹೆಸರಿನಡಿ ಭೂಪಟದ ಬ್ಯಾನರ್ ಅಳವಡಿಕೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ‘ಅಖಂಡ ಭಾರತ್ ಸಪ್ನಾ ಹೈ ಆಫ್ಘಾನಿಸ್ತಾನ್ ತಕ್ ಅಪ್ನಾ ಹೈ’ ಅಖಂಡ ಭಾರತ ಹೆಸರಿನ ಬ್ಯಾನರ್ ಗೆ ಕೆಲವರು ಆಕ್ರೋಶ ಹೊರ ಹಾಕಿದರು. ಸದ್ಯ ಘಟನಾ ಸ್ಥಳಕ್ಕೆ ಚಿಕ್ಕೋಡಿ ಡಿವೈಎಸ್ಪಿ ಸಿ.ಬಿ ಗೌಡರ, ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿವಾದಿತ ವಾಟ್ಸಪ್ ಸ್ಟೇಟಸ್ ಹಾಕಿದ್ದವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕೋಡಿಯ ಹೊಸಪೇಟೆ ಗಲ್ಲಿಯಲ್ಲಿ 50 ಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆ ನೀಡಲಾಗಿದೆ. ಅಖಂಡ ಭಾರತ ಹೆಸರಿನಡಿ ಭೂಪಟದ ಬ್ಯಾನರ್‌ ಅಳವಡಿಸಿದ ಸ್ಥಳದಲ್ಲೂ ಭದ್ರತೆ ನೀಡಲಾಗಿದೆ.

ಇದನ್ನೂ ಓದಿ: ಟಿಪ್ಪು ಜಯಂತಿ ಆಚರಣೆ: ಶ್ರೀರಂಗಪಟ್ಟಣದಲ್ಲಿ ಇಂದು ನಿಷೇಧಾಜ್ಞೆ ಜಾರಿ

ಗಡಿ ಭಾಗದಲ್ಲಿ ದೀಪಾವಳಿ ನಿಮಿತ್ಯ ನಿರ್ಮಿಸುವ ಕೋಟೆ ಮಾದರಿ ಬಳಿ ಬ್ಯಾನರ್ ಅಳವಡಿಸಲಾಗಿತ್ತು. ಬ್ಯಾನರ್ ಅಳವಡಿಸಿರುವ ಸ್ಥಳದಲ್ಲೂ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆದಂತೆ ಪೊಲೀಸರಿಂದ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ ಘಟನೆ ಕುರಿತಂತೆ ಚಿಕ್ಕೋಡಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ