ಬೆಳಗಾವಿಯಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ! ಮೂವರ ಅರೆಸ್ಟ್
ಮೂವರು ಪುರುಷರನ್ನು ವಶಕ್ಕೆ ಪಡೆದ ಪೊಲೀಸರು, 5 ಜನ ಮಹಿಳೆಯರನ್ನ ರಕ್ಷಣೆ ಮಾಡಿದ್ದಾರೆ. ಐವರು ಮಹಿಳೆಯರ ಆರೋಗ್ಯ ತಪಾಸಣೆ ಮಾಡಿ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ.
ಬೆಳಗಾವಿ: ಜಿಲ್ಲೆಯ ನಿಪ್ಪಾಣಿ ಪಟ್ಟಣ ಹೊರವಲಯದ ಗೋಲ್ಡನ್ ಸ್ಟಾರ್ ಹೊಟೇಲ್ನಲ್ಲಿ ವೇಶ್ಯಾವಾಟಿಕೆ (Prostitution) ನಡೆಯುತ್ತಿದ್ದು, ಖಚಿತ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮೂವರು ಅರೆಸ್ಟ್ ಆಗಿದ್ದಾರೆ. ತಡರಾತ್ರಿ ನಿಪ್ಪಾಣಿ ನಗರ ಪೊಲೀಸರು (Police) ದಾಳಿ ನಡೆಸಿ ಎಂಟು ಜನರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಮೂವರು ಪುರುಷರನ್ನು ವಶಕ್ಕೆ ಪಡೆದ ಪೊಲೀಸರು, 5 ಜನ ಮಹಿಳೆಯರನ್ನ ರಕ್ಷಣೆ ಮಾಡಿದ್ದಾರೆ. ಐವರು ಮಹಿಳೆಯರ ಆರೋಗ್ಯ ತಪಾಸಣೆ ಮಾಡಿ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ.
ಸಂಕೇಶ್ವರ ನಿವಾಸಿ ಸಂಜಯ ಭೈರಪ್ಪ ಮಾಳಿ (35), ಹುಕ್ಕೇರಿ ನಿವಾಸಿ ಅರುಣ್ ಜೈಪಾಲ ಶೇಕಣ್ಣವರ್ (34), ಪಿಂಪಲ್ ನಿವಾಸಿ ಪರಶುರಾಮ ಖಂಡೋಬಾ ಚವ್ಹಾಣ (35) ಬಂಧಿತ ಆರೋಪಿಗಳು. ನಿಪ್ಪಾಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿಂದೆ ಅಂದರೆ ಫೆಬ್ರವರಿ 9ಕ್ಕೆ ಮಂಗಳೂರಿನಲ್ಲಿ ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿ ಹೈಟೆಕ್ ವೇಶ್ಯಾವಾಟಿಕೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಮಂಗಳೂರು ಸಿಸಿಬಿ ಪೊಲೀಸರು ಈ ಪ್ರಕರಣದ ಬೆನ್ನು ಬಿದ್ದಿದ್ದರು. ನಗರದ ನಂದಿಗುಡ್ಢ ರಿಯಾನ್ ರೆಸಿಡೆನ್ಸಿಯ ಪೆಂಟ್ ಹೌಸ್ ನಲ್ಲಿ ಹೈಟೆಕ್ ವೇಶ್ಯೆವಾಟಿಕೆ ಪ್ರಕರಣ ನಡೆಯುತ್ತಿರುವುದು ತಿಳಿದುಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ 6 ಜನರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಒಟ್ಟು 10 ಜನರ ವಿರುದ್ಧ ಪೊಕ್ಸೊ ಪ್ರಕರಣ ದಾಖಲು ಮಾಡಲಾಗಿದೆ.
ವಿಡಿಯೋ ಇಟ್ಟುಕೊಂಡು ವಿದ್ಯಾರ್ಥಿಗೆ ಆರೋಪಿಗಳು ಬ್ಲಾಕ್ ಮೇಲ್ ಮಾಡುತ್ತಿದ್ದರು. ಪಿಯುಸಿ ವಿದ್ಯಾರ್ಥಿಯನ್ನು 2- 3 ತಿಂಗಳುಗಳಿಂದ ವೇಶ್ಯಾವಾಟಿಕೆ ಬಳಸಿಕೊಂಡಿದ್ದರು ಎಂದು ತಿಳಿದುಬಂದಿತ್ತು. ಗ್ರಾಹಕರ ರೀತಿಯಲ್ಲಿ ಬಂದು ಲೈಂಗಿಕ ಕಿರುಕುಳ ನೀಡಿದ ಮೂವರ ಬಂಧನ ಮಾಡಲಾಗಿತ್ತು.
ಇದನ್ನೂ ಓದಿ
‘ನಾವೆಲ್ಲ ಸಹೋದರ ಸಹೋದರಿಯರು ಯುದ್ಧವನ್ನು ನಿಲ್ಲಿಸಿ’ ಎಂದು ಮನವಿ ಮಾಡಿದ ಪುಟ್ಟ ಬಾಲಕಿ: ವಿಡಿಯೋ ವೈರಲ್