AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ಯಾರಂಟಿಗಳಿಗಾಗಿ NDRF ಹಣವೂ ಬಳಕೆ: ವಿಪಕ್ಷ ನಾಯಕ ಅಶೋಕ್​ ಆರೋಪ

ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಸಿಎಂ ಮತ್ತು ಡಿಸಿಎಂ ಮಜಾಮಾಡಿಕೊಂಡು ಇದ್ದಾರೆ ಎಂದು ವಿಪಕ್ಷ ನಾಯಕ ಆರ್​.ಅಶೋಕ್​ ವಾಗ್ದಾಳಿ ನಡೆಸಿದ್ದಾರೆ. 4 ತಿಂಗಳಿಗೊಮ್ಮೆ ಬರುವ ಎನ್‌ಡಿಆರ್‌ಎಫ್ ಹಣವನ್ನೂ ಗ್ಯಾರಂಟಿಗಳಿಗಾಗಿ ಬಳಸಿಕೊಳ್ಳಲಾಗ್ತಿದೆ. ಇವರಿಗೆ ನಾಚಿಕೆ ಆಗಬೇಕು ಎಂದು ಅವರು ಕಿಡಿ ಕಾರಿದ್ದಾರೆ.

ಗ್ಯಾರಂಟಿಗಳಿಗಾಗಿ NDRF ಹಣವೂ ಬಳಕೆ: ವಿಪಕ್ಷ ನಾಯಕ ಅಶೋಕ್​ ಆರೋಪ
ವಿಪಕ್ಷ ನಾಯಕ ಆರ್​. ಅಶೋಕ್​
Sahadev Mane
| Updated By: ಪ್ರಸನ್ನ ಹೆಗಡೆ|

Updated on: Oct 03, 2025 | 8:21 PM

Share

ಚಿಕ್ಕೋಡಿ, ಅಕ್ಟೋಬರ್​ 03: ರಾಜ್ಯದಲ್ಲಿ ಸರ್ಕಾರ ಸಂಪೂರ್ಣವಾಗಿ ದಿವಾಳಿಯಾಗಿದ್ದು, 4 ತಿಂಗಳಿಗೊಮ್ಮೆ ಬರುವ ಎನ್‌ಡಿಆರ್‌ಎಫ್ ಹಣವನ್ನೂ ಗ್ಯಾರಂಟಿಗಳಿಗಾಗಿ ಬಳಸಿಕೊಳ್ಳಲಾಗ್ತಿದೆ. ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದರೂ ರಾಜ್ಯ ಸರ್ಕಾರ ಕೇಂದ್ರಕ್ಕೆ ಇನ್ನೂ ಪತ್ರ ಬರೆದಿಲ್ಲ. ಇವರೂ ಹಣ ಕೊಡ್ತಿಲ್ಲ. ಸಿಎಂ ಮತ್ತು ಡಿಸಿಎಂ ಮಜಾಮಾಡಿಕೊಂಡು ಇದ್ದಾರೆ ಎಂದು ವಿಪಕ್ಷ ನಾಯಕ ಆರ್​. ಅಶೋಕ್ (R. Ashok)​ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಮಾತನಾಡಿದ ಅಶೋಕ್​, ನವೆಂಬರ್​ ಕ್ರಾಂತಿ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ರಾಜಣ್ಣರಿಗೆ ಗೇಟ್​ ಪಾಸ್​​ ಕೊಟ್ಟಿದ್ದಾರೆ. ಶಿವರಾಮೇಗೌಡ, ರಂಗನಾಥ ಇಬ್ಬರೂ ಡಿಕೆಶಿ ಸಿಎಂ ಆಗ್ತಾರೆ ಅಂತಾ ಹೇಳಿದ್ದು, ಸಿದ್ದರಾಮಯ್ಯನವರು ಸದ್ಯ ಔಟ್ ಗೋಯಿಂಗ್ ಮುಖ್ಯಮಂತ್ರಿ. ಈ ದಸರಾ ಸಿದ್ದರಾಮಯ್ಯನವರ ಕೊನೆಯ ದಸರಾ. ಡಿಕೆಶಿ, ಡಾ.ಜಿ.ಪರಮೇಶ್ವರ್​, ಸತೀಶ್​ ಜಾರಕಿಹೊಳಿ ಯಾರೇ ಮುಖ್ಯಮಂತ್ರಿ ಆದರೂ ನಮಗೇನು ಆಗ್ಬೇಕಿಲ್ಲ. ಒಟ್ಟಿನಲ್ಲಿ ಸಿದ್ದರಾಮಯ್ಯ ಹೋಗ್ತಾರೆ ಎಂದು ಅವರು ತಿಳಿಸಿದ್ದಾರೆ.

2 ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯನವರ ಹೇಳಿಕೆಗೂ ಪ್ರತಿಕ್ರಿಯಿಸಿದ ಅಶೋಕ್​, ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಶನಿ ಹೆಗಲೇರಿದೆ. ಡಿಸಿಎಂ ಡಿ.ಕೆ.ಶಿವಕುಮಾರ್​​ ದೇವಸ್ಥಾನ ಸುತ್ತುತ್ತಾ ಹೋಮ-ಹವನ, ಮಾಟ ಮಂತ್ರ ಎಲ್ಲಾ ಮಾಡಿಸ್ತಿದ್ದಾರೆ. ನವೆಂಬರ್​ನಲ್ಲಿ ಎಲ್ಲವೂ ಗೊತ್ತಾಗುತ್ತೆ ಎಂದು ಅಶೋಕ್​ ಭವಿಷ್ಯ ನುಡಿದಿದ್ದಾರೆ. ಲೇಖಕಿ ಬಾನು ಮುಷ್ತಾಕ್ ಕರೆಸಿ ಮೈಸೂರು ದಸರಾ ಉದ್ಘಾಟಿಸಿದ್ದು ಸರಿಯಲ್ಲ. ಅವರು ನಡೆಸಿದ ಉದ್ಘಾಟನೆಯನ್ನ ಜನರೇ ಒಪ್ಪಿಲ್ಲ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.