ಅನ್ಯಕೋಮಿನ ವ್ಯಕ್ತಿಯೊಂದಿಗೆ ಹಿಂದೂ ಮಹಿಳೆ ಅನೈತಿಕ ಸಂಬಂಧ: ಮತಾಂತರಕ್ಕೆ ಪೀಡಿಸಿ ಕೊಂದ್ರಾ?
ಅನ್ಯಕೋಮಿನ ವ್ಯಕ್ತಿಯ ಕಿರುಕುಳಕ್ಕೆ ಗೃಹಿಣಿ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೋಣಗನೂರು ಗ್ರಾಮದ ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಆಗಿದೆ. ಸದ್ಯ ಕಟಕೋಳ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಬೆಳಗಾವಿ, ಡಿಸೆಂಬರ್ 05: ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ (woman deadbody) ಪತ್ತೆ ಆಗಿರುವಂತಹ ಘಟನೆ ಬೆಳಗಾವಿ (Belagavi) ಜಿಲ್ಲೆಯ ರಾಮದುರ್ಗ ತಾಲೂಕಿನ ಗೋಣಗನೂರು ಗ್ರಾಮದಲ್ಲಿ ನಡೆದಿದೆ. ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಅನ್ಯಕೋಮಿನ ವ್ಯಕ್ತಿಯ ಕಿರುಕುಳಕ್ಕೆ ಗೃಹಿಣಿ ಸಾವನ್ನಪಿರುವ ಆರೋಪ ಕೇಳಿಬಂದಿದೆ. ನಾಗವ್ವ ವಂಟಮೂರಿ(28) ಮೃತ ಮಹಿಳೆ. ನಾಗವ್ವ ಸಾವಿಗೆ ಮಕ್ತುಮಸಾಬ್ ಪಾಟೀಲ್ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದು, ಕಟಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದದ್ದೇನು?
9 ವರ್ಷಗಳ ಹಿಂದೆ ದೇಮಪ್ಪ ಜತೆ ನಾಗವ್ವ ಮದುವೆಯಾಗಿದ್ದರು. ಮದುವೆಯಾದ 1 ವರ್ಷಕ್ಕೆ ನಾಗವ್ವಗೆ ಮಕ್ತುಮ್ಸಾಬ್ ಪರಿಚಯವಾಗಿದೆ. ಪರಿಚಯ ಮುಂದೆ ಅನೈತಿಕ ಸಂಬಂಧವಾಗಿ ಬೆಳೆದಿತ್ತು. ಈ ವಿಚಾರ ನಾಗವ್ವನ ಮನೆಯಲ್ಲಿ ಗೊತ್ತಾಗಿ ಬುದ್ಧಿವಾದ ಹೇಳಿದ್ದರು. ಮಕ್ತುಮ್ಸಾಬ್ ಪಾಟೀಲ್ ಸಹವಾಸಕ್ಕೆ ಹೋಗದಂತೆ ಎಚ್ಚರಿಕೆ ನೀಡಿದ್ದರು.
ಮನೆಯವರ ಸೂಚನೆ ಮೇರೆಗೆ ನಾಗವ್ವ ಆತನ ಸಹವಾಸ ಬಿಟ್ಟಿದ್ದರು. ಸಹವಾಸ ಬಿಟ್ಟಿದ್ದಕ್ಕೆ ಮಕ್ತುಮಸಾಬ್ ಪಾಟೀಲ್ ಧಮ್ಕಿ ಹಾಕುತ್ತಿದ್ದ. ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಕಿರುಕುಳ ನೀಡುತ್ತಿದ್ದ. ಮತಾಂತರ ಆಗದಿದ್ದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿರುವ ಆರೋಪ ಕೂಡ ಮಾಡಲಾಗಿದೆ.
ಇದನ್ನೂ ಓದಿ: ಮದ್ವೆಯಾಗಿದ್ರೂ ಅತ್ತೆ ಮಗಳ ಮೇಲಾಸೆ: ಆಕೆ ದೂರವಾದ ಸಿಟ್ಟಿಗೆ ಮಾವ ಮಾಡಿದ್ದೇನು ಗೊತ್ತಾ?
ಆದರೆ ಇಂದು ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ನಾಗವ್ವ ಶವ ಪತ್ತೆ ಆಗಿದೆ. ಸ್ಥಳಕ್ಕೆ ಕಟಕೋಳ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸದ್ಯ ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ನಾಗವ್ವ ಶವ ಶಿಫ್ಟ್ ಮಾಡಲಾಗಿದೆ.
ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ
ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಡಿಕ್ರಾಸ್ ಬಳಿ ನಡೆದಿದೆ. ಸದ್ಯ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಇದನ್ನೂ ಓದಿ: ಮಹಿಳೆ ಜತೆ ಲಿವಿಂಗ್ ರಿಲೇಶನ್ ಶಿಪ್: ಪ್ರೇಯಸಿಗಾಗಿ ಕಳ್ಳನಾದ ಪ್ರಿಯಕರ ಈಗ ಜೈಲು ಪಾಲು
ದೊಡ್ಡಬಳ್ಳಾಪುರದ ದೀಪಕ್(30) ಕೊಲೆಯಾದ ಯುವಕ. ರಸ್ತೆಯಲ್ಲಿ ಹೋಗ್ತಿದ್ದವನ ಮೇಲೆ ಲಾಂಗು, ಮಚ್ಚುಗಳಿಂದ ಅಟ್ಯಾಕ್ ಮಾಡಲಾಗಿದೆ. ಮೃತ ದೀಪಕ್ ಖಾಸಗಿ ಕಂಪನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:37 pm, Fri, 5 December 25



