AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM ನಿಧಿಗೆ ದೇಣಿಗೆ ನೀಡಿ ಮಾದರಿಯಾದ ದಿವ್ಯಾಂಗ ವೃದ್ಧೆ

ಬೆಳಗಾವಿ: ಇಡೀ ದೇಶವೇ ಕೊರೊನಾದಿಂದ ಬಳಲಿ ಬೆಂಡಾಗುತ್ತಿದೆ. ಸರ್ಕಾರದ ಖಜಾನೆ ಖಾಲಿಯಾಗುತ್ತಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರ ದುಡ್ಡು ಇರುವವರು ಸರ್ಕಾರಕ್ಕೆ ಸಹಾಯ ಮಾಡಬಹುದು ಅಂತಾ ಒಂದು ಪರಿಹಾರ ನಿಧಿಯನ್ನ ಸ್ಥಾಪನೆ ಮಾಡಿ ಅಕೌಂಟ್ ನಂಬರ್ ನೀಡಿ ಅದರ ಮೂಲಕ ಹಣ ಹಾಕಲು ಕರೆ ನೀಡಲಾಗಿತ್ತು. ಕೇಂದ್ರದ ಮನವಿಗೆ ಅಜ್ಜಿ ಸ್ಪಂದನೆ ಮಾಡಿದ್ದು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹಣ ನೀಡುವುದರ ಮೂಲಕ ಮಾದರಿಯಾಗಿದ್ದಾಳೆ. ಹೌದು.. ಬೆಳಗಾವಿ ನಗರದ ಟೀಳಕವಾಡಿ ನಿವಾಸಿ ಸ್ವಾಧ್ಯಾಯ ವಿದ್ಯಾ ಕೇಂದ್ರದ ವಿಶ್ರಾಂತ […]

PM ನಿಧಿಗೆ ದೇಣಿಗೆ ನೀಡಿ ಮಾದರಿಯಾದ ದಿವ್ಯಾಂಗ ವೃದ್ಧೆ
ಸಾಧು ಶ್ರೀನಾಥ್​
|

Updated on:May 23, 2020 | 10:30 AM

Share

ಬೆಳಗಾವಿ: ಇಡೀ ದೇಶವೇ ಕೊರೊನಾದಿಂದ ಬಳಲಿ ಬೆಂಡಾಗುತ್ತಿದೆ. ಸರ್ಕಾರದ ಖಜಾನೆ ಖಾಲಿಯಾಗುತ್ತಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರ ದುಡ್ಡು ಇರುವವರು ಸರ್ಕಾರಕ್ಕೆ ಸಹಾಯ ಮಾಡಬಹುದು ಅಂತಾ ಒಂದು ಪರಿಹಾರ ನಿಧಿಯನ್ನ ಸ್ಥಾಪನೆ ಮಾಡಿ ಅಕೌಂಟ್ ನಂಬರ್ ನೀಡಿ ಅದರ ಮೂಲಕ ಹಣ ಹಾಕಲು ಕರೆ ನೀಡಲಾಗಿತ್ತು. ಕೇಂದ್ರದ ಮನವಿಗೆ ಅಜ್ಜಿ ಸ್ಪಂದನೆ ಮಾಡಿದ್ದು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹಣ ನೀಡುವುದರ ಮೂಲಕ ಮಾದರಿಯಾಗಿದ್ದಾಳೆ.

ಹೌದು.. ಬೆಳಗಾವಿ ನಗರದ ಟೀಳಕವಾಡಿ ನಿವಾಸಿ ಸ್ವಾಧ್ಯಾಯ ವಿದ್ಯಾ ಕೇಂದ್ರದ ವಿಶ್ರಾಂತ ಗ್ರಂಥಪಾಲಕಿ ನಳಿನಿ ಕೆಂಭಾವಿ ಪ್ರಧಾನ ಮಂತ್ರಿ ಕೇರ್ ಫಂಡ್‍ಗೆ 1 ಲಕ್ಷ ದೇಣಿಗೆ ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಕಳೆದ 20ವರ್ಷಗಳಿಂದ ದೈಹಿಕ ಅಂಗವಿಕಲತೆಯಿಂದ ಬಳಲುತ್ತಿರುವ ಇವರು ತಮ್ಮ ಇಳಿ ವಯಸ್ಸಿನಲ್ಲಿ ಅನುಕೂಲ ಆಗಲಿ ಅಂತಾ ಕೂಡಿಟ್ಟಿದ್ದ ಹಣದಲ್ಲಿ ಒಂದು ಲಕ್ಷ ಹಣವನ್ನ ಅಕೌಂಟ್ ಮೂಲಕ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಸಲ್ಲಿಸುವ ಮೂಲಕ ಮಾದರಿಯಾಗಿದ್ದಾರೆ.

ಖುದ್ದು ಅಭಿನಂದನೆ ಸಲ್ಲಿಸಿದ ಸುರೇಶ ಅಂಗಡಿ: ದಿವ್ಯಾಂಗ ಮತ್ತು ಈ ಇಳಿ ವಯಸ್ಸಿನಲ್ಲಿ ಈ ರೀತಿ ಸಹಾಯ ಮಾಡಿದ್ದಾರೆ ಎಂಬ ಮಾತು ಕೇಳಿ ಖುದ್ದು ಕೇಂದ್ರ ಸಚಿವ ಸುರೇಶ ಅಂಗಡಿಯೇ ಅವರ ಮನೆಗೆ ತೆರಳಿ ಅಜ್ಜಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಮಹಾಮಾರಿ ಕೊರೊನಾ ವಿರುದ್ಧದ ಹೋರಾಟಕ್ಕೆ ಸಾಕಷ್ಟು ದಾನಿಗಳು, ಸಂಘ-ಸಂಸ್ಥೆಗಳು ಸರ್ಕಾರದ ಜೊತೆ ಕೈಜೋಡಿಸುತ್ತಿದ್ದಾರೆ. ಆದ್ರೆ ಈ ರೀತಿ ದಿವ್ಯಾಂಗ ಅಜ್ಜಿಯೊಬ್ಬರು ತಾವು ಕೂಡಿಟ್ಟ ಹಣವನ್ನ ನೀಡಿ ಸಹಾಯ ಮಾಡುವುದು ಶ್ಲಾಘನೀಯ, ಸ್ವಾವಲಂಬಿ ಭಾರತಕ್ಕೆ ಇಂತಹ ಮಹಾನ್ ವ್ಯಕ್ತಿಗಳೇ ನಮಗೆಲ್ಲಾ ಪ್ರೇರಣೆ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.

ಖುದ್ದು ಕೇಂದ್ರ ಸಚಿವ ಸುರೇಶ್ ಅಂಗಡಿ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಕ್ಕೆ ಇಡೀ ಕುಟುಂಬವೇ ಇಂದು ಖುಷಿಯಲ್ಲಿದೆ. ಇತ್ತ ಕೇಂದ್ರ ಸಚಿವ ಮನೆಗೆ ಬಂದಿದ್ದಕ್ಕೆ ಕುಟುಂಬಸ್ಥರೆಲ್ಲರೂ ಸೇರಿಕೊಂಡು ಅವರೊಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಈ ಹಿಂದೆ ಮೂವರು ಮಕ್ಕಳು ಪಿಎಂ ಕೇರ್​ಗೆ ತಮ್ಮ ಸ್ಕಾಲರ್ಶಿಪ್ ಹಣದ ಜತೆಗೆ ಕೂಡಿಟ್ಟ ಹಣವನ್ನೂ ಸಹ ದೇಣಿಗೆ ನೀಡುವ ಮೂಲಕ ಔದಾರ್ಯತೆ ಮೆರೆದಿದ್ದರು.

ಮಕ್ಕಳು ಮತ್ತು ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ದೇಣಿಗೆ ನೀಡುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ. ಉಳ್ಳವರು ಮುಂದೆ ಬಂದು ಬಡವರಿಗೆ ಸಹಾಯ ಮಾಡಿದರೆ ಉಪವಾಸ ಮಲಗುವ ಪರಿಸ್ಥಿತಿ ಯಾರಿಗೂ ಬರುವುದಿಲ್ಲ ಅಂತಿದ್ದಾರೆ ದಾನಿಗಳು. ನಿಜಕ್ಕೂ ಇಂತಹ ದಾನಿಗಳ ಕಾರ್ಯಕ್ಕೆ ಹ್ಯಾಟ್ಸಪ್ ಹೇಳಲೇಬೇಕು.

Published On - 7:06 am, Sat, 23 May 20

ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ