ಸಿದ್ಧರಾಮಯ್ಯ ಪ್ರತಿಯೊಂದು ಊರಲ್ಲಿ ಪಾಕಿಸ್ತಾನ ನಿರ್ಮಾಣ ಮಾಡುವ ಕನಸು ಕಾಣುತ್ತಿದ್ದಾರೆ: ಶಾಸಕ ಅಭಯ್ ಪಾಟೀಲ್
ಮುಸ್ಲಿಂ ಏರಿಯಾಗಳಲ್ಲಿ ಹಿಂದೂಗಳು ಓಡಾಡಬೇಡಿ ಅಂತಾರೆ. ಮುಂದೆ ಮುಸ್ಲಿಂ ಏರಿಯಾದಲ್ಲಿ ಇರುವ ಹಿಂದೂಗಳು ಹೊರಗೆ ಹೋಗಿ ಅಂತಾರೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನವರು ಈ ರೀತಿ ಹೇಳಿಕೆ ಬರ್ತವೆ.
ಬೆಳಗಾವಿ: ಸಿದ್ದರಾಮಯ್ಯ (Siddaramaiah) ರಾಜ್ಯದ ಸಿಎಂ ಆಗಿದ್ದರೂ ಅನ್ನೋದು ಮರೆತಿದ್ದಾರೆ. ಪ್ರತಿ ಊರಿನಲ್ಲಿ ಪಾಕಿಸ್ತಾನ (Pakistan) ನಿರ್ಮಾಣ ಮಾಡುವ ಕನಸು ಕಾಣುತ್ತಿದ್ದಾರೆ ಎಂದು ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಹಾಕಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ನಗರದಲ್ಲಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು. ಪಾಕಿಸ್ತಾನದಲ್ಲಿ ಪಂಜಾಬ್ ಪ್ರಾಂತ್ಯ ಇದೆ. ಆ ರಾಜ್ಯದ ಸಿಎಂ ಅಂತಾ ತಿಳಿದುಕೊಂಡು ಮಾತಾಡುತ್ತಿದ್ದಾರೆ. ಮುಸ್ಲಿಂ ಏರಿಯಾದಲ್ಲಿ ಇವತ್ತು ಭಾವಚಿತ್ರ ಹಚ್ಚಬೇಡಿ ಅಂತಾರೆ. ನಾಳೆ ಮುಸ್ಲಿಂ ಏರಿಯಾದಲ್ಲಿ ಹಿಂದೂಗಳು ಓಡಾಡಬೇಡಿ ಅಂತಾರೆ. ಹಿಂದೂಗಳು ಸಿದ್ದರಾಮಯ್ಯನವರ ಆಟವನ್ನ ತಿಳಿದುಕೊಳ್ಳಬೇಕು. ಮುಸ್ಲಿಮರ ಓಲೈಕೆಗಿಂತ ಹೆಚ್ಚಿನದ್ದು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಬುದ್ಧಿ ಕಲಿಸುವ ವ್ಯವಸ್ಥೆ ಬರುವ ಚುನಾವಣೆಯಲ್ಲಿ ಮಾಡಬೇಕು ಎಂದು ಶಾಸಕ ಅಭಯ್ ಪಾಟೀಲ್ ಹೇಳಿಕೆ ನೀಡಿದರು.
ಈ ರಾಜ್ಯದಲ್ಲಿ ಮತ್ತೊಂದು ದೇಶವನ್ನ ನಿರ್ಮಾಣ ಮಾಡುವಂತ ವ್ಯವಸ್ಥೆ ಸಿದ್ದರಾಮಯ್ಯ ಪ್ರಾರಂಭ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರ ಈ ಹೇಳಿಕೆಯ ಮುಂದಿನ ಪರಿಣಾಮ ಈ ರಾಜ್ಯದಲ್ಲಿ ಪ್ರತಿಯೊಂದು ಜಿಲ್ಲೆಯ ಪ್ರತಿಯೊಂದು ಊರಲ್ಲಿ ಒಂದು ಸಮಾಜದ ವಿಶಿಷ್ಠವಾದ ದೇಶ ನಿರ್ಮಾಣ ಮಾಡುವ ಹುನ್ನಾರ ಇದೆ. ಸಮಾಜವನ್ನ ಒಡೆದಿದ್ದಾರೆ ಈಗ ರಾಜ್ಯ, ದೇಶ ಒಡೆಯುವುದಕ್ಕೆ ನಿಂತಿದ್ದಾರೆ. ಈ ದೇಶ ಹಿಂದೂಗಳದ್ದು ಹಿಂದುತ್ವದ ಮೇಲೆ ದೇಶ ಒಡೆಯುವುದೇನಿದೆ? ಸಿದ್ದರಾಮಯ್ಯನವರ ಎಲ್ಲಾ ವಿಚಾರ ಮಾಡಿಕೊಂಡೇ ಆ ಹೇಳಿಕೆ ನೀಡಿದ್ದಾರೆ.
ಮುಸ್ಲಿಂ ಏರಿಯಾಗಳಲ್ಲಿ ಹಿಂದೂಗಳು ಓಡಾಡಬೇಡಿ ಅಂತಾರೆ. ಮುಂದೆ ಮುಸ್ಲಿಂ ಏರಿಯಾದಲ್ಲಿ ಇರುವ ಹಿಂದೂಗಳು ಹೊರಗೆ ಹೋಗಿ ಅಂತಾರೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನವರು ಈ ರೀತಿ ಹೇಳಿಕೆ ಬರ್ತವೆ. ಈಗ ಎಚ್ಚೆತ್ತುಕೊಳ್ಳದಿದ್ರೇ ಪ್ರತಿಯೊಂದು ಊರಲ್ಲಿ ಪಾಕಿಸ್ತಾನ ಮಾಡುವ ಕನಸು ಕಂಡಿದ್ದಾರೆ ಎಂದು ಟಿವಿ9ಗೆ ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೇಳಿಕೆ ನೀಡಿದರು.
ಅವರಿಗೆ ಸ್ವದೇಶಿ, ವಿದೇಶಿ ಯಾರು ಅಂತಾ ಗೊತ್ತಿಲ್ಲ
ಧಾರವಾಡದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಾವರ್ಕರ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಅವರಿಗೆ ಸ್ವದೇಶಿ, ವಿದೇಶಿ ಯಾರು ಅಂತಾ ಗೊತ್ತಿಲ್ಲ. ಅವರ ಹೆಡ್ ವಿದೇಶಿ ಇರೋದ್ರಿಂದ ಈ ರೀತಿ ಮಾಡುವುದು ಸಹಜ. ಅವರ ಅಧ್ಯಕ್ಷರೇ ವಿದೇಶದಿಂದ ಬಂದವರು ಹೀಗಾಗಿ ವಿದೇಶಿ ಮಾನಸಿಕತೆ ತೋರಿಸುತ್ತದೆ. ಇಪ್ಪತ್ತೈದು ವರ್ಷ ನಿರಂತರವಾಗಿ ಜೈಲಿನಲ್ಲಿ ಇದ್ದ ಕುಟುಂಬ ಸಾವರ್ಕರ್‌ದ್ದು. ಅಂತವರ ಬಗ್ಗೆ ಪೂರ್ವ ಜ್ಞಾನ ಇಲ್ಲದೇ ಮಾಡುವುದನ್ನ ನಾನು ಖಂಡಿಸುತ್ತೇನೆ. ಸಾವರ್ಕರ್ ಅವರ ಬಗ್ಗೆ ಇತಿಹಾಸ ಇವರು ಪೂರ್ಣ ಓದಿಕೊಳ್ಳಲಿ. ಅಂಡಮಾನ್ ಜೈಲಿನಿಂದ ಯಾರು ಜೀವಂತ ಬರಲು ಸಾಧ್ಯವಿಲ್ಲ.
ಸಾವರ್ಕರ್ ಅವರು ಅಂತಾ ಅಲ್ಲಿಂದ ಜೀವಂತ ವಾಪಾಸ್ ಬಂದಿದ್ದಾರೆ. ಸಾವರ್ಕರ್ ಅಂತ ದೇಶ ಭಕ್ತರಿಗೆ ಅಪಮಾನ ಮಾಡುವುದು. ಒಂದು ಕುಟುಂಬದ ಕಿತಾಪತಿಯಿಂದ ಶುರುವಾಗಿದೆ. ಈ ರೀತಿ ಯಾರು ಮಾಡ್ತಾರೆ ಕಠಿಣ ಶಿಕ್ಷೆ ವಿಧಿಸುವಂತೆ ಹೊಸ ಕಾನೂನು ಮಾಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಶಾಸಕ ಅಭಯ್ ಪಾಟೀಲ್ ಒತ್ತಾಯಿಸಿದರು. ಇವರನ್ನ ಬರೀ ಅರೆಸ್ಟ್ ಮಾಡಿ ಜೈಲಿಗೆ ಹಾಕಬಾರದು, ಕಠಿಣ ಕ್ರಮ ಆಗಬೇಕು ಎಂದು ಹೇಳಿದರು.
Published On - 4:14 pm, Sat, 20 August 22