ಚಿಕ್ಕೋಡಿಯಲ್ಲಿ ಸಿದ್ದೇಶ್ವರನಿಗೆ ಭಂಡಾರ ಎರಚಿ ಭಕ್ತಿಯ ಪರಾಕಾಷ್ಠೆ; ದೇವರ ಕಾಲಜ್ಞಾನದಲ್ಲಿ ಚಿಕ್ಕಮಕ್ಕಳು, ಪಶುಗಳಿಗೆ ಗಂಡಾಂತರ ಸೂಚನೆ
ಈ ಬಾರಿ ಕೆಲ ಕಡೆ ಅಲ್ಪ, ಹಲವೆಡೆ ಉತ್ತಮ ಮತ್ತು ಮಧ್ಯಮ ಮಳೆಯಾಗುತ್ತೆ ಅಂತಾ ಭವಿಷ್ಯ ಹೇಳಿದೆ. ಕೆಲವೆಡೆ ಭೂ ಕಂಪನ ಆಗುತ್ತೆ. ಚಿಕ್ಕಮಕ್ಕಳು, ಪಶುಗಳಿಗೆ ಗಂಡಾಂತರವಿದೆ. ಹಾಗಾಗಿ ಚೆನ್ನಾಗಿ ನೋಡಿಕೊಳ್ಳಿ ಆಂತಾ ದೈವವಾಣಿ ಸಲಹೆ ನೀಡಿದೆ.
ಚಿಕ್ಕೋಡಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದಲ್ಲಿ ಅರಣ್ಯ ಸಿದ್ದೇಶ್ವರ ಮತ್ತು ಮಲಕಾರ ಸಿದ್ದೇಶ್ವರ ಜಾತ್ರೆಯು ಅದ್ಧೂರಿಯಾಗಿ ನೆರವೇರಿತು. ಅಲ್ಲಿ ಭಂಡಾರದ ಒಡೆಯನೇ ಧರೆಗೆ ಇಳಿದಂತ ವಾತಾವರಣ ಸೃಷ್ಟಿಯಾಗಿತ್ತು. ಮಂಜಿನ ಅಲೆಯಂತೆ, ಸಿಂಚನದಂತೆ ಭಂಡಾರ ಚೆಲ್ಲಾಡಲಾಗ್ತಿತ್ತು. ಪ್ರಸಿದ್ಧ ತಾಣ ಪೂರ್ಣ ಹಳದಿಮಯವಾಗಿ ಭಕ್ತರನ್ನ ಪರಾಕಾಷ್ಠೆಗೆ ನೂಕಿತ್ತು. ನೆರೆದವ್ರನ್ನ ಭಾವಪರವಶತೆಗೆ ದೂಡಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಕಾಲ ಜ್ಞಾನ ನುಡಿ ನೆರೆದ ಭಕ್ತರನ್ನ ಚಕಿತಗೊಳಿಸಿತ್ತು.
ಅಂದಹಾಗೆ ಕಳೆದ 57 ವರ್ಷಗಳಿಂದ ಕೆರೂರಲ್ಲಿ ಸಿದ್ದೇಶ್ವರ ಸ್ವಾಮಿ ಜಾತ್ರೆ ಮಾಡಲಾಗ್ತಿದೆ. ಜಾತ್ರೆ ಭಾಗವಾಗಿ ಇಂದು ವರ್ಷದ ಕಾಲಜ್ಞಾನ ಜತೆಗೆ ದೇವರ ಉತ್ಸವ ಮಾಡಲಾಯ್ತು. ಇನ್ನು 1965ರಲ್ಲಿ ಕೆರೂರಿನ ಪಕ್ಕದ ಅಲ್ಪಾರಟ್ಟಿಯಲ್ಲಿ ಜಾತ್ರೆ ನಡೀತಿತ್ತು. ಆ ಬಳಿಕ 1965ರಿಂದ ಕೆರೂರಲ್ಲಿ ಸಣ್ಣದಾಗಿ ಶುರುವಾದ ಜಾತ್ರೆ 57 ವರ್ಷ ಪೂರೈಸಿದೆ. ಹೀಗಾಗಿ ಮಹಾರಾಷ್ಟ್ರದ ಪುಣೆ, ಮುಂಬೈನಿಂದ ಬಂದಿದ್ದ ಲಕ್ಷ-ಲಕ್ಷ ಭಕ್ತರು ಜಾತ್ರೆಯಲ್ಲಿ ಭಾಗಿಯಾಗಿದ್ರು. ಹರಕೆ ಹೊತ್ತವರು ದೇವರ ಮೂರ್ತಿ ಮೇಲೆ ಭಂಡಾರ ಎರಚಿ ಇಷ್ಟಾರ್ಥಕ್ಕೆ ಪ್ರಾರ್ಥಿಸಿದ್ರು. ಸುಮಾರು 25 ಟನ್ ಭಂಡಾರ ತೂರಾಡಿ ಭಕ್ತಿ ಮೆರೆದ್ರು. ಇನ್ನು 5 ದಿನ ನಡೆದ ಜಾತ್ರೆಯಲ್ಲಿ ಪ್ರತಿ ದಿನ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೊನೆಯ ದಿನವಾದ ಇಂದು ಡೊಳ್ಳು ಕುಣಿತದ ಜತೆ ದೇವರನ್ನ ಪಲ್ಲಕ್ಕಿಯಲ್ಲಿ ಕೂರಿಸಿ ಅದ್ಧೂರಿಯಾಗಿ ಉತ್ಸವ ಮಾಡಲಾಯ್ತು.
ಉತ್ಸವದ ಬಳಿಕ ಮೂಲ ಗದ್ದುಗೆ ಬಳಿ ಬಂದ ದೇವರು, ವರ್ಷದ ಕಾಲಜ್ಞಾನವನ್ನ ನುಡಿದಿದೆ. ಈ ಬಾರಿ ಕೆಲ ಕಡೆ ಅಲ್ಪ, ಹಲವೆಡೆ ಉತ್ತಮ ಮತ್ತು ಮಧ್ಯಮ ಮಳೆಯಾಗುತ್ತೆ ಅಂತಾ ಭವಿಷ್ಯ ಹೇಳಿದೆ. ಕೆಲವೆಡೆ ಭೂ ಕಂಪನ ಆಗುತ್ತೆ. ಚಿಕ್ಕಮಕ್ಕಳು, ಪಶುಗಳಿಗೆ ಗಂಡಾಂತರವಿದೆ. ಹಾಗಾಗಿ ಚೆನ್ನಾಗಿ ನೋಡಿಕೊಳ್ಳಿ ಆಂತಾ ದೈವವಾಣಿ ಸಲಹೆ ನೀಡಿದೆ. ಭೇದವಿಲ್ಲದೆ ನೆರೆದ ಭಕ್ತರು, ಅರಣ್ಯ ಸಿದ್ದೇಶ್ವರ, ಮಲಕಾರಸಿದ್ದೇಶ್ವರನ್ನ ಸಾಕ್ಷಾತ್ ದೈವೀ ಸ್ವರೂಪದಂತೆ ಕಾಣುತ್ತಾರೆ. ಜಾತ್ರೆ ಕಣ್ತುಂಬಿಕೊಂಡ ಭಕ್ತರು, ದೇವರ ದರ್ಶನ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿದ್ದಾರೆ. ಭಂಡಾರ ಎರಚಿದ್ರೆ ಸಕಲವೂ ಕೈಗೂಡುತ್ತೆ ಅಂತಾ ನಂಬಿ ಭಂಡಾರದೋಕುಳಿ ಆಡಿದ್ದಾರೆ. ಆ ಮೂಲಕ ಭಂಡಾರದಲ್ಲಿ ಮಿಂದೆದಿದ್ದಾರೆ.
ವರದಿ: ವಿನಾಯಕ್ ಗುರವ್, ಟಿವಿ9, ಚಿಕ್ಕೋಡಿ
ಸಭಾಪತಿ ವಿರುದ್ಧ ಎಫ್ಐಆರ್: ಬೆಳಗಿನ ಜಾವ 3 ಗಂಟೆಗೆ ಧಾರವಾಡ ಎಸ್.ಪಿ ಫೋನ್ ಮಾಡ್ತಾರೆ ಎಂದು ಸಭಾಪತಿ ಹೊರಟ್ಟಿ ಗರಂ