AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೀವ್ರ ಸ್ವರೂಪಕ್ಕೆ ತಿರುಗಿದ ಕಬ್ಬು ಬೆಳೆಗಾರರ ಹೋರಾಟ: ನ 7ರಂದು ರಾಷ್ಟ್ರೀಯ ಹೆದ್ದಾರಿ ಬಂದ್​ಗೆ ನಿರ್ಧಾರ

ಕಬ್ಬು ಬೆಲೆ ಏರಿಕೆಗೆ ಆಗ್ರಹಿಸಿ ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಕಬ್ಬು ಬೆಳೆಗಾರರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರಕ್ಕೆ ಕೊಟ್ಟ ಡೆಡ್​ಲೈನ್ ಮುಗಿದ ಬಳಿಕ ಮತ್ತೆ ಆಕ್ರೋಶ ಹೊರಹಾಕಿರುವ ರೈತರು, ನವೆಂಬರ್ 7 ರಂದು ಬೆಂಗಳೂರಿನಿಂದ ಬೆಳಗಾವಿ ತನಕ ರಾಷ್ಟ್ರೀಯ ಹೆದ್ದಾರಿ 4ಅನ್ನ ಬಂದ್ ಮಾಡಲು ಕರೆ ನೀಡಿದ್ದಾರೆ.

ತೀವ್ರ ಸ್ವರೂಪಕ್ಕೆ ತಿರುಗಿದ ಕಬ್ಬು ಬೆಳೆಗಾರರ ಹೋರಾಟ: ನ 7ರಂದು ರಾಷ್ಟ್ರೀಯ ಹೆದ್ದಾರಿ ಬಂದ್​ಗೆ ನಿರ್ಧಾರ
ರೈತರ ಪ್ರತಿಭಟನೆ
Sahadev Mane
| Updated By: ಗಂಗಾಧರ​ ಬ. ಸಾಬೋಜಿ|

Updated on: Nov 04, 2025 | 10:06 PM

Share

ಬೆಳಗಾವಿ, ನವೆಂಬರ್​ 04: ರಾಜ್ಯದ ಕಬ್ಬು ಬೆಳೆಗಾರರು (Sugarcane Farmers) ಸಿಡಿದೆದ್ದಿದ್ದಾರೆ. ತಾವು ಬೆಳೆದ ಪ್ರತಿ ಟನ್​ ಕಬ್ಬಿಗೆ 3500 ರೂ. ಕೊಡುವಂತೆ ಆಗ್ರಹಿಸಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಹಲವೆಡೆ ಬೀದಿಗೆ ಇಳಿದಿದ್ದಾರೆ. ಈಗಾಗಲೇ ಇಂದು ರೈತರು ಸರ್ಕಾರಕ್ಕೆ ಕೊಟ್ಟ ಡೆಡ್​ಲೈನ್ ಸಹ ಮುಗಿದಿದ್ದು, ಪಂಜಾಬ್​ ಮಾದರಿಯ ಹೋರಾಟಕ್ಕೂ ಮುಂದಾಗಿದ್ದಾರೆ. ಹೀಗಾಗಿ ನವೆಂಬರ್ 7ರಂದು ರಾಷ್ಟ್ರೀಯ ಹೆದ್ದಾರಿ 4 ಬಂದ್​ಗೆ (Bandh) ಕರೆ ನೀಡಿದ್ದಾರೆ.

ಹಸಿರು ಸೇನೆ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಹೇಳಿದ್ದಿಷ್ಟು 

ಈ ಕುರಿತಾಗಿ ಗುರ್ಲಾಪುರ ಕ್ರಾಸ್‌ನಲ್ಲಿ ಹಸಿರು ಸೇನೆ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಪ್ರತಿಕ್ರಿಯಿಸಿದ್ದು, ನವೆಂಬರ್ 7ರಂದು ರಾಷ್ಟ್ರೀಯ ಹೆದ್ದಾರಿ ನಾಲ್ಕು ಬಂದ್‌ಗೆ ನಿರ್ಧರಿಸಲಾಗಿದೆ. ಬೆಂಗಳೂರು ಪುಣೆ ಹೆದ್ದಾರಿಗುಂಟ, ಜಿಲ್ಲೆ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಮಂಡ್ಯ, ಮೈಸೂರು, ಶಿವಮೊಗ್ಗ, ಹಾವೇರಿ, ಧಾರವಾಡದಲ್ಲಿ ಧರಣಿ ಮಾಡಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡಕ್ಕೂ ರೈತರು ಬೇಡಿಕೆ ಇಟ್ಟಿದ್ದಾರೆ. ಈ ಹಿಂದೆ ಇದ್ದ ಹಳೇ ರಿಕವರಿ ಮಾದರಿಯಲ್ಲಿ ಕಬ್ಬು ಖರೀದಿಸಲು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ರೈತರ ಪಾಲಿಗೆ ಕಹಿಯಾದ ಕಬ್ಬು: ದರ ನಿಗದಿಗೆ FRP ನೆಪ ಹೇಳಿ ಕೇಂದ್ರದೆಡೆಗೆ ಬೊಟ್ಟು ಮಾಡಿದ ಕಾರ್ಖಾನೆಗಳು

ಪ್ರತಿ ಟನ್ ಕಬ್ಬಿಗೆ ಕೇಂದ್ರ, ರಾಜ್ಯ ತಲಾ 5 ಸಾವಿರ ರೂ ತೆರಿಗೆ ತೆಗೆದುಕೊಳ್ಳುತ್ತೆ. ರಾಜ್ಯ, ಕೇಂದ್ರ ಸರ್ಕಾರ ತಲಾ ಒಂದು ಸಾವಿರ ರೂ ತೆರಿಗೆ ಹಣ ರೈತರಿಗೆ ನೀಡಲಿ. ಸಕ್ಕರೆ ಕಾರ್ಖಾನೆಯಿಂದ 3,500, ಕೇಂದ್ರ, ರಾಜ್ಯದಿಂದ 2 ಸಾವಿರ ರೂ.ನಂತೆ. ಆ ಮೂಲಕ ಪ್ರತಿ ಟನ್ ಕಬ್ಬಿಗೆ 5500 ರೂ. ನೀಡಬೇಕೆಂದು ಮತ್ತೊಂದು ಡಿಮ್ಯಾಂಡ್ ಮಾಡಿದ್ದಾರೆ.

ಕಬ್ಬಿಗೆ ದರ ನಿಗದಿಯಲ್ಲಿ ರಾಜ್ಯ ಸರ್ಕಾರದ ಪಾತ್ರ ಕಡಿಮೆಯಿದೆ: ಸಚಿವ ಶಿವಾನಂದ ಪಾಟೀಲ್

ಇನ್ನು ಈ ವಿಚಾರವಾಗಿ ವಿಜಯಪುರದಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ನೀಡಿದ್ದು, ಕೇಂದ್ರ ಸಚಿವ ಅಮಿತ್ ಶಾಗೆ ಮುರುಗೇಶ್ ನಿರಾಣಿ ಪತ್ರ ಬರೆದಿದ್ದಾರೆ. ಸಕ್ಕರೆ ರಫ್ತಾಗುತ್ತಿಲ್ಲ, ಎಥೆನಾಲ್ ಪ್ರೊಡಕ್ಷನ್ ಕಡಿಮೆ ಮಾಡಿದ್ದಾರೆ. ಸರ್ಕಾರ ಕಾರ್ಖಾನೆಗಳು ರೈತರಿಗೆ ಹೆಚ್ಚಿಗೆ ಹಣ ಕೊಡಲು ಕಷ್ಟವಾಗುತ್ತಿದೆ. ಸಕ್ಕರೆ ದರ ಹೆಚ್ಚಳ ಮಾಡುವಂತೆ ಪತ್ರದಲ್ಲಿ ಮುರುಗೇಶ್ ನಿರಾಣಿ ಮನವಿ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ಬೆಳಗಾವಿ: ಕಬ್ಬು ಬೆಳೆಗಾರರ ಹೋರಾಟ ತೀವ್ರ, ಪ್ರಮುಖ ಭಾಗದಲ್ಲಿ ಶಾಲೆ-ಕಾಲೇಜುಗಳಿಗೆ ರಜೆ

ರೈತರು ಎಷ್ಟುಬೇಕಾದರೂ ಬೈಯಲಿ ತಪ್ಪಿಲ್ಲ. ತಪ್ಪು ಕಲ್ಪನೆಯಿಂದ ಬೆಳಗಾವಿ ಜಿಲ್ಲೆಯ ರೈತರಲ್ಲಿ ಗೊಂದಲವಾಗಿದೆ. ಕಬ್ಬು ಬೆಳೆಗಾರರ ಹೋರಾಟದಲ್ಲಿ ವಿಜಯೇಂದ್ರ ಭಾಗಿಯಾಗಿದ್ದು ತಪ್ಪಲ್ಲ. ವಿಜಯೇಂದ್ರ, ನಾವು ಒಟ್ಟಾಗಿ ಕೇಂದ್ರದ ಬಳಿ ಹೋಗಿ ಚರ್ಚೆ ಮಾಡೋಣ. ರೈತರ ಪ್ರತಿಭಟನಾ ಸ್ಥಳಕ್ಕೆ ನಾನು ಬೇಕಾದರೂ ಹೋಗುತ್ತೇನೆ. ಕೇಂದ್ರ ಸರ್ಕಾರದ ಮಾರ್ಗದರ್ಶನದೊಂದಿಗೆ ನಡೆದುಕೊಳ್ಳುತ್ತಿದೆ. ಕಬ್ಬಿಗೆ ದರ ನಿಗದಿಯಲ್ಲಿ ರಾಜ್ಯ ಸರ್ಕಾರದ ಪಾತ್ರ ಕಡಿಮೆಯಿದೆ ಎಂದಿದ್ದಾರೆ.

ಸಚಿವರಿಗೆ ಭಾವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದ ರೈತರು

ಇನ್ನು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ರೈತರ ಪ್ರತಿಭಟನೆ ಮುಂದುವರಿದ್ದು, ಸಕ್ಕರೆ ಸಚಿವ ಶಿವಾನಂದ ಪಾಟೀಲ್ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಹೋರಾಟಕ್ಕೆ ಸ್ಪಂದಿಸದ ಹಿನ್ನೆಲೆ ಸಚಿವರಿಗೆ ಭಾವಪೂರ್ವಕ ಶ್ರದ್ಧಾಂಜಲಿ ಅಂತಾ ಬ್ಯಾನರ್ ಹಿಡಿದು ಧರಣಿ ಮಾಡಿದ್ದು, ಬಳಿಕ ಫೋಟೋ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಬ್ಬಿನ ಬೆಲೆ ನಿಗದಿ ಆಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಅಂತಾ ಪಟ್ಟು ಹಿಡಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಹಲವು ವಾಹನಗಳಿಗೆ ಗುದ್ದಿದ ಕಂಟೇನರ್
ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಹಲವು ವಾಹನಗಳಿಗೆ ಗುದ್ದಿದ ಕಂಟೇನರ್
ಕ್ಯಾಪ್ಟನ್ ರಘು ಟಾರ್ಚರ್​ಗೆ ಹೈರಾಣಾದ ಗಿಲ್ಲಿ ನಟ
ಕ್ಯಾಪ್ಟನ್ ರಘು ಟಾರ್ಚರ್​ಗೆ ಹೈರಾಣಾದ ಗಿಲ್ಲಿ ನಟ
ದೆಹಲಿ ಸ್ಫೋಟಕ್ಕೆ ಕಾರಣನಾಗಿದ್ದ ಡಾ. ಉಮರ್ ನಬಿ ಮನೆ ರಾತ್ರೋರಾತ್ರಿ ನೆಲಸಮ
ದೆಹಲಿ ಸ್ಫೋಟಕ್ಕೆ ಕಾರಣನಾಗಿದ್ದ ಡಾ. ಉಮರ್ ನಬಿ ಮನೆ ರಾತ್ರೋರಾತ್ರಿ ನೆಲಸಮ
Daily Devotional: ಮನೆಯಲ್ಲಿ ಬಾತ್ರೂಮ್ ವಾಸ್ತು ಸಹ ಮುಖ್ಯ ಯಾಕೆ ಗೊತ್ತಾ?
Daily Devotional: ಮನೆಯಲ್ಲಿ ಬಾತ್ರೂಮ್ ವಾಸ್ತು ಸಹ ಮುಖ್ಯ ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಎಲ್ಲವನ್ನೂ ಬಿಟ್ಟುಕೊಡುವ ಮನೋಭಾವ ಬರಲಿದೆ
ಇಂದು ಈ ರಾಶಿಯವರಿಗೆ ಎಲ್ಲವನ್ನೂ ಬಿಟ್ಟುಕೊಡುವ ಮನೋಭಾವ ಬರಲಿದೆ
ಲಕ್ಷಾಂತರ ರೂ ಮೌಲ್ಯದ ಟ್ರ್ಯಾಕ್ಟರ್ ಬೆಂಕಿಗಾಹುತಿ: ಕಣ್ಣೀರಿಟ್ಟ ರೈತ
ಲಕ್ಷಾಂತರ ರೂ ಮೌಲ್ಯದ ಟ್ರ್ಯಾಕ್ಟರ್ ಬೆಂಕಿಗಾಹುತಿ: ಕಣ್ಣೀರಿಟ್ಟ ರೈತ
ಪುಣೆಯಲ್ಲಿ 2 ಟ್ರಕ್‌ಗಳ ನಡುವೆ ಸಿಕ್ಕಿ ಸುಟ್ಟು ಕರಕಲಾದ ಕಾರು; 8 ಜನ ಸಾವು
ಪುಣೆಯಲ್ಲಿ 2 ಟ್ರಕ್‌ಗಳ ನಡುವೆ ಸಿಕ್ಕಿ ಸುಟ್ಟು ಕರಕಲಾದ ಕಾರು; 8 ಜನ ಸಾವು
ಮಹಾನಟಿ ವಿನ್ನರ್ ವಂಶಿ ಲವ್ ಕೇಸ್: ಎಲ್ಲವನ್ನೂ ವಿವರಿಸಿದ ನಟಿ
ಮಹಾನಟಿ ವಿನ್ನರ್ ವಂಶಿ ಲವ್ ಕೇಸ್: ಎಲ್ಲವನ್ನೂ ವಿವರಿಸಿದ ನಟಿ
ಕಬ್ಬು ಬೆಳೆಗಾರರನ್ನು ಬಿಜೆಪಿ ಪ್ರಚೋದಿಸುತ್ತಿದೆ; ಈಶ್ವರ ಖಂಡ್ರೆ ಆರೋಪ
ಕಬ್ಬು ಬೆಳೆಗಾರರನ್ನು ಬಿಜೆಪಿ ಪ್ರಚೋದಿಸುತ್ತಿದೆ; ಈಶ್ವರ ಖಂಡ್ರೆ ಆರೋಪ
ಬಿಗ್ ಬಾಸ್ ಆಟದಲ್ಲಿ ರಘು ಭುಜಬಲಕ್ಕೆ ಹೆದರಿ ಕೈ ಮುಗಿದ ಕಾಕ್ರೋಚ್ ಸುಧಿ
ಬಿಗ್ ಬಾಸ್ ಆಟದಲ್ಲಿ ರಘು ಭುಜಬಲಕ್ಕೆ ಹೆದರಿ ಕೈ ಮುಗಿದ ಕಾಕ್ರೋಚ್ ಸುಧಿ